This page has been fully proofread once and needs a second look.

ಅಲ್ಲಿಂದ ಹಿಂದಿರುಗಿ ಆನಂದ ತೀರ್ಥರು

ಶ್ರೀ ಮುಗ್ಧಷ್ಣ ಮೊದಲಾದ ಕ್ಷೇತ್ರಗಳ ಕಾಣುತ್ತ

ವಿವಿಧ ದೇವಾಲಯದಿ ವಿಧವಿಧದಿ ಪೂಜಿಸುತ

ಅತಿಶಯದ ಮಹಿಮೆಯನು ಅಲ್ಲಲ್ಲಿ ತೋರುತ್ತ

ಶ್ರೀ ಹರಿಯ ಚರಣಕ್ಕೆ ಅಡಿಗಡಿಗೆ ನಮಿಸುತ್ತ
 

ಉತ್ತರೋತ್ತರದಲ್ಲಿ ಉತ್ತರಕೆ ನಡೆದರು
 
॥ ೪೮ ॥
 
ಮರಳಿ ಪಯಸ್ವಿನೀ ತೀರಕ್ಕೆ
 

 
ಸಕಲ ಸಲ್ಲಕ್ಷಣದಿಂದ ಕೂಡಿದಾ ಮಹಿಮರನು

ಭವ್ಯ ಆಕೃತಿಯಿಂದ ಕಂಗೊಳಿಸಿ ಮೆರೆದವರ

ಬೆರಗಾಗಿ ನೋಡಿದರು ಎಲ್ಲೆಲ್ಲೂ ಮಂದಿ

ಹಾದಿಯಲಿ ಹಲವಾರು ಗ್ರಾಮಗಳ ಹಾಯ್ದು

ಪಯಸ್ವಿನೀ ನದಿಯ ದಡ ಮತ್ತೆ ಸೇರಿದರವರು

ಒಳಹೊಕ್ಕರಲ್ಲಿದ್ದ ಗುಡಿಯ ಸೇರಿ
 
॥ ೪೯ ॥
 
ಶಾಸ್ತ್ರೋಕ್ತ ನಿಯಮಗಳಿಗನುಸಾರವಾಗಿ

ವ್ಯಾಕರಣ ಮುಂತಾದ ಅಧ್ಯಯನ ಮಾಡಿ

ಅರ್ಥ ನಿರ್ಣಯದಲ್ಲಿ ಕೌಶಲ್ಯ ಸಾಧಿಸಿ

ಖ್ಯಾತ ಪಂಡಿತರಾದ ಹಲವು ವಿಪ್ರೋತ್ತಮರು

ಮೂರ್ಲೋಕ ದಾಚಾರ್ಯ ಆನಂದ ತೀರ್ಥರನು
 

ಕಾಣುವಾ ತವಕದಲಿ ಅಲ್ಲಿಗೈತಂದರು
 
*
 
॥ ೫೦ ॥
 
ಚಂದ್ರಮನ ಹೋಲುವಾ ಮಂದಹಾಸದ ಮೊಗವು
 

ಕಮಲಪುಷ್ಪದ ಪರಿಯ ಮುದಗೊಳಿಪ ಕಣ್ಣುಗಳು

ಹೊನ್ನ ಕಾಂತಿಯ ದೇಹ, ಮೃದು ಮಧುರ ಮಾತುಗಳು

ಯಾವ ಭೂಷ
ಣವಿಲ್ಲ, ಮೂರ್ಲೋಕ ಭೂಷಣರು
 

ಇಂಥ ಮಹಿಮರು ನಮ್ಮ ಆನಂದ ತೀರ್ಥರನು

ಕಾಣುವಾ ತವಕದಲ್ಲಿ ಧಾವಿಸಿತು ಮಂದಿ
 
ಐದನೆಯ ಸರ್ಗ / 85
 
48
 
49
 
50
 
51
 
॥ ೫೧ ॥