This page has been fully proofread once and needs a second look.

ಆತ ಕೇಳೀ ಮಾತ, ನಾಚಿ ತಲೆಬಾಗುತ್ತ

ಅಲ್ಲಿದ್ದ ಮಿಕ್ಕೆಲ್ಲ ಬ್ರಾಹ್ಮಣರ ನೋಡುತ್ತ

ದೈನ್ಯದಲ್ಲಿ ಯಾಚಿಸಿದ, ನೆರವ ಕೋರುತ್ತ

"ಜ್ಞಾನಿಗಳು, ಇವರೊಡನೆ ನಮಗೇಕೆ ದ್ವೇಷ ?

ಜಗಕೆಲ್ಲ ಆನಂದ ನೀಡುವುದೇದೀ ಮುಖಚಂದ್ರ"

ಇಂತೆಂದು ಬ್ರಾಹ್ಮಣರು ಕೈತೊಳೆದುಕೊಂಡರು
 
॥ ೪೪ ॥
 
ರಾಮೇಶ್ವರದಲ್ಲಿ ಚಾತುರ್ಮಾಸ್ಯ
 

 
ವೇದೋಪನಿಷತ್ತುಗಳ ಎಲ್ಲ ಪರಿಷತ್ತುಗಳು

ಬೆರಗುಗೊಂಡವು ಅವರ ವಾಕ್ಯಾರ್ಥ ಪ್ರತಿಭೆಗೆ

ಪರಿಪರಿಯ ಶಾಸ್ತ್ರಗಳ, ವಿಧ ವಿಧದ ಕೋವಿದರ

ಎಲ್ಲ ವಾಗ್ಯುದ್ಧದಲೂ ಆಚಾರ್ಯರೇ ಮುಂದು

ವಿದ್ಯಾಭಿಮಾನಿನಿ ಭಾರತಿಪತಿಯು, ವಾಯುದೇವರೆ ಇಂದು

ಜಯಮಾಲೆ ಧರಿಸಿದರು ಎಲ್ಲ ಸಭೆಗಳಲ್ಲಿ
 
ಲಿ ॥ ೪೫ ॥
 
ನಾಯಿಗಳ ಬೊಗಳುವಿಕೆ ಸಿಂಹ ಲೆಕ್ಕಿಪುದೆ ?

ಗುಹೆಯಲ್ಲಿ ನಿದ್ರಿಪುದು ನಿಶ್ಚಿಂತೆಯಿಂದ

ಅಂತೆಯೇ ಈ ನಮ್ಮ ಆನಂದ ತೀರ್ಥರು

ದುರ್ಜನರ ಉಪಟಳವ ಲೆಕ್ಕಿಸಲೇ ಇಲ್ಲ

ಅಚ್ಯುತ ಪ್ರೇಕ್ಷರ ಪರಮ ಸಹವಾಸದಲಿ

ನಾಲ್ಕು ತಿಂಗಳು ಕಳೆದರಾ ಪುಣ್ಯ ಕ್ಷೇತ್ರದಲ್ಲಿ
 
ಲಿ ॥ ೪೬ ॥
 
ಶ್ರೀರಂಗಾದಿಗಳಲ್ಲಿ ಭಗವದ್ದರ್ಶನ
 

 
ನಾಲ್ಕು ತಿಂಗಳ ಬಳಿಕ ಆನಂದ ತೀರ್ಥರು

ದಿಗ್ವಿಜಯ ಮುಂದರಿಸಿ ತೆರಳಿದರು ಮುಂದಕ್ಕೆ

ಶ್ರೀರಂಗ ಕ್ಷೇತ್ರವನ್ನು ಸೇರಿದರು ಅವರು

ಆ ಶೇಷಶಯನನೂ, ಶೃಂಗಾರ ಸಿಂಧುವೂ

ಕಾವೇರಿ ಕನೈನ್ಯೆಯ ಹಿಮವಾಯು ಸೇವಿತನೂ

ಶ್ರೀ ರಂಗನಾಥನಿಗೆ ಭಕ್ತಿಯಲ್ಲಿ ನಮಿಸಿದರು
 
84 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
44
 
45
 
46
 
47
 
॥ ೪೭ ॥