This page has been fully proofread once and needs a second look.

"ಆನಂದ ತೀರ್ಥರದು ಬಹು ಭವ್ಯ ಆಕೃತಿ

ಸಕಲ ಸಲ್ಲಕ್ಷಣದಿಂದ ಸಂಪನ್ನ ದೇಹ

ಪ್ರಾಜ್ಞ, ಪ್ರಕೃಭೃತಿಗಳಿಗೆ ಸರಿಯಾದ ಲಕ್ಷಣ"

ಎಂದು ಹೊಗಳಲು ಅಲ್ಲಿ ನೆರೆದಿದ್ದ ಬಲ್ಲ ಜನ

"ಸಂಕರ'" ನ ಕಿಂಕರರು ಮತ್ತೇನೂ ಅರಿಯದಲೆ

ಅಧಿಕ ಗಾತ್ರದ ಅವನ ಪೃಷ್ಠವನೆ ಹೊಗಳಿದರು
 
॥ ೪೦ ॥
 
"ಪೃಷ್ಠಭಾಗದ ಗಾತ್ರ ಮಿತಿಯೊಳಗೆ ಇರಬೇಕು

ಲಕ್ಷಣದ ಶಾಸ್ತ್ರಗಳು ಸಾರುತಿದೆ ಹೀಗೆಂದು
 
"
ಖತಿಗೊಂಡ ಸಂಕರನು ಈ ಮಾತ ಕೇಳಿ
 

ಪಣ ತೊಟ್ಟ ಖಂಡಿಸಲು ಆಚಾರ್ಯ ದಂಡವನು

ಅವನ ಸಾಮರ್ಥ್ಯಕ್ಕೆ ಸರಿಯಾದ ಮಾತಲ್ಲ

ಆದರೂ ಇಂಥ ಹಟ ದುಷ್ಟರಿಗೆ ಸಹಜ
 
॥ ೪೧ ॥
 
ಕನ್ಯಾಕುಮಾರಿ, ರಾಮೇಶ್ವರ ಸಂದರ್ಶನ
 

 
ಕೇರಳದಿ ಹಲವಾರು ತೀರ್ಥದರ್ಶನ ಮಾಡಿ
 

ತೆರಳಿದರು ತ್ವರೆಯಿಂದ ಆನಂದ ತೀರ್ಥರು

ಕನ್ಯಕಾತೀರ್ಥದಲ್ಲಿ ಸ್ನಾನವನ್ನು ಮಾಡಿ

ಸಮುದ್ರಸೇತುವನು ಸಂದರ್ಶಿಸಿದರು

ರಾಮೇಶ್ವರವೆಂಬೊಂದು ತೀರ್ಥಕ್ಷೇತ್ರವ ಸೇರಿ

ಶ್ರೀ ರಾಮನಾಥನಿಗೆ ಭಕ್ತಿಯಲ್ಲಿ ನಮಿಸಿದರು
 
॥ ೪೨ ॥
 
ಯತಿವೇಷ ಧಾರಿಯನು ಎದುರಾಗಿ ಕಂಡು

ದಂಡವನು ತೋರುತ್ತ ಆನಂದ ತೀರ್ಥರು

ನಗುನಗುತ ಆತನಿಗೆ ನುಡಿದರಿಂತೆಂದು
 

"ಕೋಪಿಷ್ಠ, ಗರ್ವಿಷ್ಠ, ಮಂದಮತಿಯವನೇ !

ನೀ ತೊಟ್ಟ ಪಣದಂತೆ ಮುರಿ, ಈ ದಂಡವ

ಇಲ್ಲದಿರೆ ನೀನೊಬ್ಬ ಷಂಡ, ಭಂಡ "
 
ಐದನೆಯ ಸರ್ಗ / 83
 
40
 
41
 
42
 
43
 
॥ ೪೩ ॥