This page has been fully proofread once and needs a second look.

ತಿರುವನಂತಪುರದಲ್ಲಿ
 

 
ಯಾತ್ರೆಯನ್ನು ಮುಂದರಿಸಿ ಆನಂದ ತೀರ್ಥರು

ಅನಂತಶಯನ ವೆಂಬೊಂದು ಊರ ಸೇರಿದರು
 

ಪದ್ಮನಾಭನು ಊರ ದೇವರಾಗಿಹನಿಲ್ಲಿ

ಆ ಶೇಷಶಯನನಿಗೆ, ಶ್ರೀ ಲಕುಮಿ ಒಡೆಯನಿಗೆ

ಸೌಂದರ್ಯ ಕಾಂತಿಯಲ್ಲಿ ಪ್ರಜ್ವಲಿಪ ದೇವನಿಗೆ

ಭಕುತಿಯಲಿ ನಮಿಸಿದರು ಆನಂದ ತೀರ್ಥರು
 
॥ ೩೬ ॥
 
ಆನಂದ ತೀರ್ಥರದು ಅಪ್ರತಿಮ ಪ್ರತಿಭೆ

ವೇದಾಂತ ಸೂತ್ರಗಳ ಉತ್ತಮೋತ್ತಮ ಜ್ಞಾನ
 

ಶಾಸ್ತ್ರಾರ್ಥ ಬೋಧಿಸುತ ಶಿಷ್ಯಗಣಕೆಲ್ಲ

"ಜೀವಗಣಗಳಿಗಿಂತ ಭಿನ್ನ ಪರಮಾತ್ಮ
 

ಬ್ರಹ್ಮನಚ್ಯುತ
'' ನೆಂದು ಅಡಿಗಡಿಳಿಗೆ ಹೇಳುತ್ತ
 

ಬ್ರಹ್ಮನಚ್ಯುತ ''
ಬ್ರಹ್ಮ
ಸೂತ್ರಗಳರ್ಥ ವಿವರದಲ್ಲಿ ನುಡಿದರು
 
॥ ೩೭ ॥
 
ಕುದಿಪುಸ್ತೂರನ ದುಷ್ಟತನ
 

 
ಶ್ರೀ ಮುಖ್ಯಪ್ರಾಣನಲಿ ಹಗೆಯ ಸಾಧಿಸಲೆಂದೇ

"ಕುದಿಪುಸ್ತೂರೆಂಬ'" ವಂಶದಲ್ಲಿ ಜನಿಸಿದ್ದ

"ಸಂಕರ'"ನು ಮತ್ಸರದಿ ಇಂತು ಉಸುರಿದನು

"ಬಹು ದೊಡ್ಡ ಅಪಚಾರವೆಸಗಲಾಗಿದೆ ಇಂದು

ಯಾವ ಸೂತ್ರಕ್ಕೂ ಭಾಷ್ಯವನೆ ಬರೆಯದಿಹ

ಮಹನೀಯರೊಬ್ಬರು ಶಾಸ್ತ್ರಾರ್ಥ ಬೋಧನೆ ಮಾಡುತಿಹರು "
 
॥ ೩೮ ॥
 
"ನಾವು ಹೇಳಿದ ಅರ್ಥಾಥಕಾಕ್ಷೇಪವುಂಟೆ ?

ಅಂತಾದರೆ ಅದನ್ನು ಶೃತಪಡಿಸಿ ಈಗಲೇ

ಬ್ರಹ್ಮಸೂತ್ರಕೆ ಭಾಷ್ಯ ನಾವೂ ಬರೆಯಲಿಹೆವು
 

ಬರೆಯಬಾರದು ಎಂಬ ದಂಡಸಂಹಿತೆ ಇದೆಯೆ ?"
 

ಆನಂದ ತೀರ್ಥರ ಮಂದಹಾಸದ ನುಡಿಗೆ

ಅಭಿನಂದಿಸಿದರಲ್ಲಿ ನೆರೆದಿದ್ದ ಮಂದಿ
 
82 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
36
 
37
 
38
 
39
 
॥ ೩೯ ॥