This page has not been fully proofread.

सौन्दर्यलहरी
 
99, ಸರಸ್ವತ್ಯಾ ಲಕ್ಷಾ P. 192.
ದೇವೀಭಕ್ತರ ಮಹಿಮೆ
(ಶೌರ್ಯಲಾಭ)
 
ಓ ದೇವಿ! ಬ್ರಹ್ಮ ವಿಷ್ಣುಗಳಿಗೂ ಬೇಸರವನ್ನು ತರುವ ರೀತಿಯಲ್ಲಿ ನಿನ್ನನ್ನು
ಭಜಿಸುವವನು ಸರಸ್ವತಿ ಮತ್ತು ಲಕ್ಷ್ಮಿಯರೊಂದಿಗೆ ವಿಹರಿಸುತ್ತಾನೆ. ಅತಿಸುಂದರವಾದ
ಶರೀರವನ್ನು ಹೊಂದಿ ರತಿಯ ಪಾತಿವ್ರತ್ಯವನ್ನು ಸಡಿಲಗೊಳಿಸುತ್ತಾನೆ. ತಾನು ಬದುಕಿರು
ವಾಗಲೇ ಅವಿದ್ಯಾನಾಯೆಗಳ ಬಂಧನವನ್ನು ಬಿಡಿಸಿಕೊಂಡು ಬಹಳ ಕಾಲ ಪರ
ಮಾನನ್ದರಸವನ್ನು ಸವಿಯುತ್ತಾನೆ.
 
100. ಪ್ರದೀಪಜ್ವಾಲಾಭಿಃ P. 201,
ಈ ಸ್ತೋತ್ರವನ್ನು ದೇವಿಗೇ ಅರ್ಪಿಸುವುದು
(ಸಕಲಕಾರ್ಯಸಿದ್ಧಿ )
 
३४९
 
ಓ ಜಗನ್ಮಾತೆ ! ನಿನ್ನದೇ ಆದ ವಾಕ್ಕುಗಳಿಂದ ವಾಹ್ಮಯವಾದ ಈ ನಿನ್ನ ಸ್ತೋತ್ರ
ವನ್ನು ನೆರವೇರಿಸಿದ್ದಾಗಿದೆ. ಇದು ಸೂರ್ಯನಿಂದ ಪ್ರಕಾಶವನ್ನು ಪಡೆಯುವ
ದೀಪಜ್ವಾಲೆಯಿಂದ ಸೂರ್ಯನಿಗೇ ಆರತಿ ಎತ್ತಿದಂತೆಯೂ ಚಂದ್ರಕಾವ್ಯಶಿಲೆಯಿಂದ
ಜಿನುಗಿಬಂದ ನೀರಿನಿಂದ ಚಂದ್ರನಿಗೇ ಅರ್ಥ್ಯವನ್ನು ರಚಿಸಿದಂತೆಯೂ ಆಗಿದೆ. ಸಾಗರದ
ನೀರನ್ನು ಸಾಗರಕ್ಕೇ ಅರ್ಪಿಸಿ, ಕೇವಲ ನಮ್ಮ ಮನಸ್ಸಿನ ಸೌಂದರ್ಯವನ್ನು ಚಿತ್ರಿಸಿ
ಕೊಂಡು, ನಿನ್ನ ಕಡೆಯಿಂದ ಹರಿದುಬರುವ ಕರುಣೆಗೆ ಪಾತ್ರವಾಗಿಸಿಕೊಳ್ಳುವ ಒಂದು
ಕೆಲಸವಾಗಿದೆಮ್ಮ ! ಇದು. ಅಷ್ಟೇ
 

 
CC-0. Jangamwadi Math Collection. Digitized by eGangotri