This page has not been fully proofread.

३४६
 
सौन्दर्यलहरी
 
ಓ ಚಂಡಿ ! ದೇವಲೋಕದ ಕಲ್ಪವೃಕ್ಷಗಳಾದರೋ ಸ್ವರ್ಗಲೋಕದ ದೇವತೆಗಳಿಗೆ
ಮಾತ್ರ ತನ್ನ ಚಿಗುರುಗಳೆಂಬ ಕೈಗಳಿಂದ ಇಷ್ಟಾರ್ಥಗಳನ್ನು ಕೊಡುತ್ತವೆ. ದೇವ
ಸ್ತ್ರೀಯರ ಕೈಗಳೆಂಬ ತಾವರೆಗಳನ್ನು ಮುಚ್ಚಿಸುವುದರಲ್ಲಿ ಚಂದ್ರನಂತಿರುವ ನಖಗಳಿಂದ
ಕೂಡಿದ ನಿನ್ನ ಪಾದಗಳಾದರೋ ಬಡವರೆಲ್ಲರಿಗೂ ಅಮನ್ದವಾದ ಐಶ್ವರ್ಯವನ್ನೇ
ಧಾರೆಯೆರೆಯುತ್ತಿವೆ.
 
90. ದದಾನೇ ದೀನೇಭ್ಯಃ-P183.
ಚರಣಭಕ್ತಿ ಪ್ರಾರ್ಥನೆ
 
(ಕುದ್ರ ಭಾಧಾನಿವೃತ್ತಿ)
 
ಓ ದೇವಿ! ದೀನರಿಗೆ ಅವರ ಆಸೆಗನುಗುಣವಾದ ಎಲ್ಲಾ ಸಂಪತ್ತನ್ನೂ
ಯಾವಾಗಲೂ ನೀಡುವ ಎಣೆಯಿಲ್ಲದ ಸೌಂದರ್ಯರಾಶಿಯೆಂಬ ಪುಷ್ಪರಸವನ್ನು
ವರ್ಷಿಸುತ್ತಿರುವ ಮಂದಾರ ಹೂಗೊಂಚಲಿನ ಸೌಭಾಗ್ಯವುಳ್ಳ ನಿನ್ನ ಈ ಚರಣದಲ್ಲಿ
ಪಂಚೇನ್ದ್ರಿಯ ಮನಸ್ಸುಗಳೆಂಬ ಆರು ಕಾಲುಗಳನ್ನು ನನ್ನ ಜೀವವು ಮುಳುಗಿ
ಮುಳುಗಿ ಜೇನುದುಂಬಿಯ ಭಾವವನ್ನು ಹೊಂದಿ ನಲಿಯುವಂತಾಗಲಿ.
 
91. ಪದನ್ಯಾಸಕ್ರೀಡಾ-P. 184,
ಕಾಲ್ದಂಡೆಗಳ ವರ್ಣನೆ
(ಭೂಲಾಭ ಮತ್ತು ಧನಲಾಭ)
 
ಸುಂದರವಾದ ನಡೆಯುಳ್ಳವಳೇ ! ದೇವಿ ! ನಿನ್ನ ಮನೆಯಲ್ಲಿ ಸಾಕಿದ ಕಲಹಂಸಗಳು
ನಿನ್ನ ಪಾದನ್ಯಾಸದಲ್ಲಿರುವ ವಿನೋದದ ಅಭ್ಯಾಸವನ್ನು ಮಾಡಲೋಸುಗವೋ ಎಂಬಂತೆ
ಹೆಜ್ಜೆಗಳನ್ನಿಡಲು ಹೊರಟು ಎಡವುತ್ತಾ ಆ ವಿನೋದದ ನಡೆಯನ್ನೇ ಮುಂದುವರಿಸು
ಇವೆ. ಇದು ನಿನ್ನ ಪಾದಾರವಿಂದಗಳು ಮನೋಹರ ಮಣಿಮಯವಾದ ಕಾಲ್ದಂಡೆಗಳ
ನಾದದ ನೆಪದಿಂದ ಆ ಹಂಸಗಳಿಗೆ ಶಿಕ್ಷಣವನ್ನೇ ಕೊಡುತ್ತಿವೆಯೋ ಎಂಬಂತಿದೆ.
 
92, ಗತಾ ಮಂಚತ್ವಂ-P, 185,
 
ದೇವೀಸೌಂದರ್ಯವರ್ಣನ
 
(ರಾಜ್ಯಲಾಭ)
 
CC-0. Jangamwadi Math Collection. Digitized by eGangotri