This page has not been fully proofread.

सौन्दर्यलहरी
 
३४५
 
ಓ ದೇವಿ ! ನಿನ್ನ ಕಾಲುಂದುಗೆಯ ಧ್ವನಿಯನ್ನು ಮನ್ಮಥನ ಜಯಘೋಷವೆಂದು
ವರ್ಣಿಸಬಹುದು. ಅಂದರೆ ನಿನ್ನ ಪತಿಯು ಮಿಗಿಲಾದ ಪ್ರೇಮಪಾರವಶ್ಯದಲ್ಲಿ
ಆಕಸ್ಮಾತ್ ಮೈಮರೆತು ಬೇರೊಬ್ಬ ನಾಯಿಕೆಯ ಹೆಸರನ್ನು ಉಚ್ಚರಿಸಿಬಿಟ್ಟಾಗ ಅವನಿಗೇ
ಅದು ನಾಚಿಕೆಯನ್ನು ಕೊಟ್ಟು ಬಿಡುತ್ತದೆ. ಆಗ ಅವನು ನಮಸ್ಕರಿಸುವನು. ನೀನಾದರೂ
ಪ್ರಣಯಕೋಪದಿಂದ ಅವನನ್ನು ಒದೆಯುವೆಯಲ್ಲವೇ ? ಆ ಸಮಯದಲ್ಲಿ ಅವನ ಶತ್ರು
ವಾದ ಮನ್ಮಥನು ತನ್ನನ್ನು ದಹಿಸಿದ ಕೋಪಕ್ಕೆ ಪ್ರತೀಕಾರವನ್ನು ತೋರಿಸಲು ಕಿಲಕಿಲ
ಎಂದು ನಗುತ್ತಿರುವನೋ ಎನ್ನುವಂತಿದೆ.
 
87. ಹಿಮಾನಿ ಹನ್ನ ವ್ಯಂ-P. 180.
 
ಪದಕಮಲವರ್ಣನೆ
 
(ಸರ್ವಾನಯನ ಸಾಮರ್ಥ್ಯಲಾಭ)
 
ಲೋಕದಲ್ಲಿ ಕಾಣುವ ಕಮಲವು ಹಿಮದಿಂದ ಹಾಳಾಗುವುದು, ರಾತ್ರಿ ಹೊತ್ತು
ಮುಕುಲಿತವಾಗಿ ನಿದ್ರಿಸುವುದು. ಕೇವಲ ಲಕ್ಷ್ಮಿಗೆ ಆಶ್ರಯವಾಗಿರುವುದು. ಇಷ್ಟೇ
ಆದರೆ ನಿನ್ನ ಪದಕಮಲಗಳಾದರೋ ಹಿಮಗಿರಿಯಲ್ಲಿಯೇ ನಿರನ್ನರ ಬೆಳಗುವುವು.
ಹಗಲಿರುಳೂ ಏಕಪ್ರಕಾರ ಜಾಗೃತವಾಗಿರುವುವು. ಭಕ್ತರಿಗೆ ಅಖಂಡೈಶ್ವರ್ಯವನ್ನು
ನೀಡುವುವು. ಹೀಗಾಗಿ ನಿನ್ನ ಚರಣಗಳು ಕಮಲಗಳನ್ನು ಗೆದ್ದಿವೆ ಎಂದು ಹೇಳುವುದರಲ್ಲಿ
ಆಶ್ಚರ್ಯವೇನಿದೆ ?
 
88. ಪದಂ ತೇ ಕೀರ್ತಿನಾಂ-P, 181,
 
ಪಾದಾಗ್ರ ವರ್ಣನೆ
 
(ಮೃಗಾನಯನ ಸಾಮರ್ಥ್ಯಲಾಭ)
 
ಓ ದೇವಿ! ಸಕಲ ಕೀರ್ತಿಗಳಿಗೂ ಉಗಮಸ್ಥಾನವಾಗಿ ಸಕಲ ಆಪತ್ತುಗಳನ್ನೂ
ನಿವಾರಿಸುವುದಾದ ನಿನ್ನ ಪಾದಾಗ್ರಗಳನ್ನು ಕವಿಗಳು ಆಮೆಯ ಬೆನ್ನಿನಚಿಪ್ಪಿಗೆ ಹೋಲಿಸಿ
ರುವರು. ಇದು ಹೇಗೆ ಸರಿ ? ಹಾಗೆಯೇ ದಯಾಮೂರ್ತಿಯಾದ ಶಿವನು ವಿವಾಹ
ಸಮಯದಲ್ಲಿ ನಿನ್ನ ಈ ಸುಕುಮಾರತರವಾದ ಪಾದವನ್ನು ತನ್ನ ಕೈಗಳಿಂದಲೇ ಎತ್ತಿ
ಹೇಗೆತಾನೇ ಕಲ್ಲಿನಮೇಲೆ ಇರಿಸಿದನು ? ಇದೊಂದೂ ಅರ್ಥವಾಗದ ವಿಷಯವಾಗಿದೆ.
 
ನಖೈರ್ನಾಕಣಾಂ-P. 182,
 
ಪದಮಹಿಮಾವರ್ಣನ
 
(ಸರ್ವರೋಗಶಮನ)
 
CC-0. Jangamwadi Math Collection. Digitized by eGangotri
 
89.