This page has not been fully proofread.

सौन्दर्यलहरी
 
ಓ ನಾರೀಮಣಿಯಾದ ಶೈಲಜೇ ! ನಿನ್ನ ನಡುವು ಸಹಜಕೃಶವಾಗಿದೆ. ಕುಚಗಳ
ಭಾರದಿಂದ ಶ್ರಾಪ್ತವಾಗಿ ಬಾಗಿ ಬಳುಕುತ್ತಿದೆ. ಪ್ರವಾಹವೇಗಕ್ಕೆ ಕಳಚಿಬೀಳುವ ಸ್ಥಿತಿ
ಯಲ್ಲಿರುವ ನದಿಯೊಂದರ ದಡದಲ್ಲಿ ಬೆಳೆದು ನಿಂತಿರುವ ವೃಕ್ಷದಂತೆ ಇರುವ ನಿನ್ನ
ನಡುವು ಅನನ್ಯ ಕಾಲ ನಿರಪಾಯವಾಗಿ ಬೆಳಗಲಿ.
 
80 ಕುಚ್ ಸದ್ಯಃ 'ಸ್ವಿತ್-P. 170.
ವಲಿತ್ರಯವರ್ಣನೆ
 
(ಇಂದ್ರಜಾಲದರ್ಶನ ಸಾಮಾರ್ಥ್ಯಲಾಭ)
 
ಓ ದೇವಿ ! ನೀನು ತೊಟ್ಟು ಕೊಂಡಿರುವ ಕುಪ್ಪಸವು
ಸುರಿಯುತ್ತಿರುವ ಬೆವರಿ
ನಿಂದಲೂ ಕಂಕುಳುಗಳನ್ನು ಒತ್ತುತ್ತಿರುವಷ್ಟು ಸ್ಕೂಲವಾದ ಚಿನ್ನದ ಕೊಡದಂತಿರುವ
ಸ್ತನಗಳ ಒತ್ತಡಗಳಿಂದಲೂ ಎಳೆಬಿಟ್ಟು ಹೋಗುತ್ತಿದೆಯಲ್ಲವೇ? ಇದನ್ನು ಗಮನಿಸಿದರೆ
ಬ್ರಹ್ಮನು ಇದರ ಪ್ರಭಾವದಿಂದ ನಿನ್ನ ನಡುವು ತುಂಡಾಗದಿರಲೆಂದೇ ಸೊಂಟಕ್ಕೆ ಮೂರು
ಕಟ್ಟುಗಳನ್ನು ಕಟ್ಟಿ ಬಿಗಿದಿದಾನೆಯೋ ಎಂಬಂತಿದೆ ನಿನ್ನ ನಡುವಿನ ತ್ರಿವಳಿಯು,
 
81. ಗುರುತ್ವಂ ವಿಸ್ತಾರಂ-P, 171,
 
ನಿತಂಬವರ್ಣನೆ
 
(ಅಗ್ನಿ ಸ್ತಂಭನ)
 
- ಓ ಪಾರ್ವತಿ । ಹಿಮವಂತನು ತನ್ನಲ್ಲಿ ಗುರುತ್ವವನ್ನೂ ವೈಶಾಲ್ಯವನ್ನೂ ತನ್ನ
ನಿತಂಬ ಪ್ರದೇಶದಿಂದ ತೆಗೆದು ನಿನ್ನ ವಿವಾಹ ಕಾಲದಲ್ಲಿ ನಿನಗೆ ಬಳುವಳಿಯಾಗಿ
ಕೊಟ್ಟಿರಬಹುದು. ಆದ್ದರಿಂದಲೇ ನಿನ್ನ ಈ ನಿತಂಬವು ಅತಿಶಯವಾದ ಗುರುತ್ವವನ್ನೂ
ವೈಶಾಲ್ಯವನ್ನೂ ವಹಿಸಿ ಸಮಸ್ತ ಭೂಮಿಯನ್ನೂ ಆವರಿಸುತ್ತಾ ಅದನ್ನು ಹಗುರವಾಗಿ
 
ಮಾಡುತ್ತಿರಬಹುದು.
 
82, ಕರೀನ್ಹಾಣಾಂ ಶುಣ್ಣಾ-P. 173,
 
ತೊಡೆಗಳ ವರ್ಣನೆ
 
(ಜಲಸಂಚಾರಸಾಮರ್ಥ್ಯಲಾಭ)
 
ವಿಧಿಯ ರಹಸ್ಯವೆಲ್ಲವನ್ನೂ ಬಲ್ಲ ಪಾರ್ವತಿ ! ನಿನ್ನ ಒಂದೊಂದು ತೊಡೆಯೂ
ಶ್ರೇಷ್ಠವಾದ ಆನೆಯ ಸೊಂಡಿಲನ್ನೂ ಹೊಂಬಾಳೆಯ ಕಂಬವನ್ನೂ ತನ್ನ ಸ್ವರೂಪದಿಂದ
ಸೋಲಿಸಿದೆ. ಪತಿಗೆ ಸಲ್ಲಿಸುತ್ತಿರುವ ಅನಂತ ನಮಸ್ಕಾರಗಳಿಂದ ಕಾಠಿನ್ಯವನ್ನು ಹೊಂದಿ
ರುವ ಮೊಣಕಾಲುಗಳಾದರೋ ದಿಗ್ಗಜಗಳ ಕುಂಭಸ್ಥಳಗಳನ್ನು ಸೋಲಿಸಿವೆ. ಇಂತಹ
ಅಂಗಗಳಿಂದ ನೀನು ತುಂಬ ಪ್ರಕಾಶಿಸುತ್ತೀಯ
 
CC-0. Jangamwadi Math Collection. Digitized by eGangotri