This page has not been fully proofread.

सौन्दर्यलहरी
 
ಹರಭಜ್ವಾಲಾ-P. 166,
ರೋಮಾವಳಿಯ ವರ್ಣನ
 
(ಸಕಲಜನವಶ್ಯತೆ)
 
ಓ ಪರ್ವತರಾಜಕುಮಾರಿ ! . ಮನ್ಮಥನ ದೇಹವನ್ನು ಹರನ ಕೋಪಾಗ್ನಿಯ
ಜ್ವಾಲೆಯು ಆವರಿಸಿದಾಗ ಅವನು ಆ ತಾಪವನ್ನು ತಡೆಯಲಾರದೇ ನಿನ್ನ ನಾಭಿಯೆಂಬ
ಆಳವಾದ ಸರಸ್ಸಿನಲ್ಲಿ ಮುಳುಗಿದನು, ಅದರಿಂದ ಹೊಗೆಯ ಬಳ್ಳಿಯು ಮೇಲಕ್ಕೆ ಎದ್ದಿತು.
ಅದನ್ನೇ ಲೋಕವು ನಿನ್ನ ರೋಮರಾಜಿ ಎಂದು ವರ್ಣಿಸುತ್ತಿರಬಹುದೇ ?
 
77, ಯದೇತತ್ವಾಲಿ-P, 167,
ರೋಮಾವಳಿಯ ವರ್ಣನ
 
: ² : (ರಾಜವಶ್ಯತೆ)
 
ಓ ಜಗನ್ಮಾತೇ ! ನಿನ್ನ ಕೃಶವಾದ ನಡುವಿನಲ್ಲಿ ಯಮುನಾನದಿಯ ಅತಿಸೂಕ್ಷ್ಮ
ವಾದ ಅಲೆಯ ಆಕಾರದ ನೀಲ ರೋಮಾವಳಿಯ ಒಂದು ರೂಪ ರೇಖೆಯು ಇರುವುದ
ಲ್ಲವೇ ? ಇದನ್ನು ಕವಿಗಳು ಹೀಗೆ ವರ್ಣಿಸಬಹುದು ನಿನ್ನ ಸ್ತನಮಂಡಲದ ಇಕ್ಕಟ
ನಲ್ಲಿ ಸಿಲುಕಿಕೊಂಡಿರುವ ನೀಲಾಕಾಶವು ತನ್ನ ಎರಡು ಕಡೆಯ ಸ್ತನಗಳ ಒತ್ತಡದಿಂದ
ಸೊರಗಿ ಕೃಶವಾಗಿ ಬಿಲದ ಆಕಾರದಲ್ಲಿರುವ ನಿನ್ನ ಹೊಕ್ಕಳನ್ನು ಪ್ರವೇಶಿಸುತ್ತಿದೆಯೋ
 
ಎಂಬಂತಿದೆ ಎಂದು.
 
३४२
 
76.
 
78. ಸ್ಥಿರೋ ಗಾವರ್ತಃ-P. 168.
 
ನಾಭಿಯ ವರ್ಣನೆ
 
(ಸಕಲರಾಜವಶ್ಯತೆ)
 
ಓ ಪಾರ್ವತಿ ! ನಿನ್ನ ನಾಭಿಯು ಗಂಗೆಯ ಪ್ರವಾಹದಲ್ಲಿ ಉದ್ಭವಿಸಿದ ಶಾಶ್ವತ
ವಾದ ಸುಳಿಯಂತಿದೆ. ನಿನ್ನ ಸ್ತನಗಳಾದರೋ ಆ ರೋಮಾವಳಿಯೆಂಬ ಲತೆಯಲ್ಲಿ
ಬಿಟ್ಟಿರುವ ಮೊಗ್ಗುಗಳಂತಿದ್ದು ಆ ಲತೆಗೆ ಈ ನಾಭಿಯು ಪಾತಿಯಂತಿದೆ. ಈ ನಾಭಿಯು
ಕಾಮಾಗ್ನಿಯ ಹೋಮಕುಂಡದಂತಿದೆ, ರತೀದೇವಿಯ ವಿಲಾಸಮಂದಿರವಾಗಿದೆ,
ಮತ್ತು ಶಿವನ ಕಣ್ಣುಗಳ ತಪಸ್ಸಿದ್ಧಿಯ ಗುಹಾದ್ವಾರವಾಗಿದೆ. ಹೀಗೆ ಬಣ್ಣಿಸಲೇ
ಅಸಾಧ್ಯವಾದ ಅದ್ಭುತಾಕಾರವನ್ನು ಹೊಂದಿ ರಾರಾಜಿಸುತ್ತಿದೆ.
 
79. ನಿಸರ್ಗಕ್ಷೀಣಸ್ಯ-P. 169.
ಮಧ್ಯ ವರ್ಣನೆ
(ಇಂದ್ರ ಜಾಲವಿದ್ಯಾ ನೈಪುಣ್ಯ ಲಾಭ)
 
CC-0. Jangamwadi Math Collection. Digitized by eGangotri