This page has not been fully proofread.

सौन्दर्यलहरी
 
ಯಿಂದ ತನ್ನ ತಲೆಯನ್ನು ಸವರಿಕೊಂಡು ನೋಡಿ ನಿನಗೆ ನಗೆಯನ್ನುಂಟುಮಾಡಿದ್ದ
ನಂತೆ. ಅಷ್ಟು ಸ್ಕೂಲವಾಗಿದ್ದು ಸದಾ ವಾತ್ಸಲ್ಯದಿಂದ ಸ್ಪನ್ನವನ್ನು ವರ್ಷಿಸುತ್ತಾ
ಸಮಕಾಲದಲ್ಲಿ ಷಣ್ಮುಖ ವಿನಾಯಕರಿಂದ ಪಾನಮಾಡಲ್ಪಡುವ ನಿನ್ನ ಸ್ತನಮಂಡಲವು
ನಮ್ಮ ಎಲ್ಲಾ ಖೇದವನ್ನೂ ಪರಿಹರಿಸಲಿ.
 
73. ಅಮೂ ತೇ ವಜ್-P. 162,
ಸ್ತನ್ಯ ವರ್ಣನೆ
 
(ಧೇನು-ಸ್ತ್ರೀಯರಿಗೆ ಸ್ತನ್ಯಸಮೃದ್ಧಿ)
 
ಹಿಮವಂತನ ವಂಶಕ್ಕೆ ಪತಾಕೆಯಂತಿರುವವಳೇ ! ದೇವಿ! ನಿನ್ನ ಸ್ತನಗಳೆರಡೂ
ಅಮೃತರಸಪೂರಿತವಾದ ಮಾಣಿಕ್ಯದ ಬಿಂದಿಗೆಗಳೇ ಸರಿ. ಇದರಲ್ಲಿ ನಮಗೆ ಸ್ವಲ್ಪವೂ
ಸಂಶಯವಿಲ್ಲ. ಏಕೆಂದರೆ ಆ ಸ್ತನ್ಯಪಾನವನ್ನು ಮಾಡಿ ಬೆಳೆದ ವಿನಾಯಕನೂ ಷಣ್ಣು
ಖನೂ ಸ್ತ್ರೀಸಂಗವನ್ನು ಸವಿಯಲು ಮೂಲವಾದ ಶೃಂಗಾರ ರಸವನ್ನೇ ಅರಿಯದವರಾಗಿ
ಇಂದಿಗೂ ಕುಮಾರಾವಸ್ಥೆಯಲ್ಲೇ ಇರುವರಲ್ಲವೇ ?
 
74. ವಹತ್ಯನ್ನು ಸ್ತರಮ-P. 164,
ಮುತ್ತಿನ ಹಾರದ ವರ್ಣನ
(ಕೀರ್ತಿಲಾಭ)
 
389
 
ಓ ತಾಯಿ । ಗಜಾಸುರನ ಕುಂಭಸ್ಥಳದಲ್ಲಿ ಉದ್ಭವಿಸಿದ ಮುತ್ತಿನ ಮಣಿಗಳಿಂದ
ಖಚಿತವೂ ಶುದ್ಧವೂ ಆದ ಮುತ್ತಿನ ಹಾರಲತೆಯೊಂದು ನಿನ್ನ ಸ್ತನಮಂಡಲಗಳನ್ನು
ಅಲಂಕರಿಸಿದೆ. ಆ ಮುತ್ತಿನಲ್ಲಿ ತೊಂಡೆಯಹಣ್ಣಿನಂತಿರುವ ನಿನ್ನ ಕೆಂದುಟಿಯು ಪ್ರತಿ
ಬಿಂಬಿಸುತ್ತಿದೆ. ಇದು ತ್ರಿಪುರಾನ್ನಕನ ಪ್ರತಾಪಾಂಕಿತವಾದ ಕೀರ್ತಿಮಾಲೆಯೋ
ಎಂಬಂತೆ ತೋರುತ್ತಿದೆ.
 
75. ತವ ಸ್ತನ್ಯಂ ಮನ್ಯ-P. 165.
ಸ್ತನ್ಯದ ಮಹಿಮೆ
 
(ಕವಿತಾಶಕ್ತಿ ಲಾಭ)
 
ಓ ದೇವಿ ! ಕ್ಷೀರಸಮುದ್ರವು ನಿನ್ನ ಹೃದಯದ ಮೂಲಕ ಸರಸ್ವತೀ ನದಿಯನ್ನೇ
ಸ್ತನ್ಯರೂಪವಾಗಿ ಹರಿಯಿಸುತ್ತಿರಬಹುದು. ಏಕೆಂದರೆ ಕರುಣಾಮಯಿಯಾದ ನಿನ್ನ
 
ಈ ಸ್ತನ್ಯವನ್ನು ಕುಡಿದು ಬೆಳೆದ ದ್ರವಿಡ ಶಿಶುವೊಂದು ಪ್ರೌಢರಾದ ಕವಿಗಳ ಮಧ್ಯದಲ್ಲಿ
 
ರಾರಾಜಿಸುವ
 
ಶ್ಲಾಘನೀಯ ಕವಿರಾಜನೇ ಆಗಿರುವನಲ್ಲವೇ ?
 
CC-0. Jangamwadi Math Collection. Digitized by eGangotri