This page has not been fully proofread.

सौन्दर्यलहरी
 
66. ವಿಪುಚ್ಯಾ ಗಾಯ-P, 154,
ಕಂಠಮಾಧುರ್ಯವರ್ಣನ
 
(ವೀಣಾದಿ ಸಂಗೀತವಿದ್ಯಾ ಕುಶಲತೆ)
 
ಓ ದೇವಿ! ಸರಸ್ವತಿಯು ಪಶುಪತಿಯ ವಿವಿಧವಾದ ಪೂರ್ವಚರಿತೆಗಳನ್ನು
ವೀಣೆಯಿಂದ ಹಾಡುತ್ತಿರುವಾಗ, ನೀನೇನಾದರೂ ಮಧ್ಯದಲ್ಲಿ ತಲೆದೂಗುತ್ತ ಅದಕ್ಕೆ
ಪೋಷಕವಾಗಿ ಮಧುರವಾಣಿಗಳನ್ನು ಆಡಲು ಆರಂಭಿಸಿದರೆ ಅವಳು ತನ್ನ ವೀಣೆಯನ್ನೇ
ಹೊದ್ದಿಕೆಯಿಂದ ಮುಚ್ಚಲು ಅನುವಾಗುತ್ತಾಳೆ. ಏಕೆಂದರೆ ನಿನ್ನ ಕಂಠಮಾಧುರ್ಯವು
ಆ ವೀಣೆಯ ಅವ್ಯಕ್ತ ಮಧುರನಾದವನ್ನೂ ಪರಿಹಾಸ ಮಾಡುವಂತಿದೆಯಲ್ಲವೇ ?
 
67, ಕರಾಗ್ರೇಣ ಸ್ಪಷ್ಟಂ-P. 155,
ಗಲ್ಲದ ವರ್ಣನೆ
 
(ಸಕಲವಶ್ಯತೆ)
 
ಓ ಹಿಮವನ್ನನ ಕುಮಾರಿ ! ನಿನ್ನ ಗಲ್ಲದ ಮಹಿಮೆಯನ್ನು ಏನೆಂದು ವರ್ಣಿ
ಸೋಣ ? ಏಕೆಂದರೆ ಅದನ್ನು ಹಿಮವಂತನು ವಾತ್ಸಲ್ಯಭಾವದಲ್ಲಿ ಸವರಿದಾನೆ.
ಈಶ್ವರನು ಅಧರಾಮೃತಪಾನದ ಆಸಕ್ತಿಯಿಂದ ಎಷ್ಟೋಸಲ ಹಿಡಿದೆತ್ತಿದಾನೆ. ಅದನ್ನು
ನೋಡಿದಾಗ ಈಶ್ವರನು ಹಿಡಿದುಕೊಳ್ಳುವ ಮುಖಕನ್ನಡಿಯ ಕಾವೋ ಎನ್ನುವಂತಿದೆ.
ಅದಕ್ಕೆ ಸಮಾನವಾದ ವಸ್ತುವಾದರೂ ಬೇರೆ ಇಲ್ಲವಷ್ಟೇ.
 
68. ಭುಜಾತೇಷಾನ್ನಿತ್ಯಂ P. 156.
ಕುತ್ತಿಗೆಯ ವರ್ಣನೆ
(ಸಕಲರಾಜವಶ್ಯತೆ)
 
ಓ ದೇವಿ ! ಈ ನಿನ್ನ ಕಂಠವು ತ್ರಿಪುರಾನ ಕನಾದ ಶಿವನ ಭುಜಾಲಿಂಗನಗಳಿಂದ
ಯಾವಾಗಲೂ ರೋಮಾಂಚಿತವಾಗಿ, ನಿನ್ನ ಮುಖವೆಂಬ ಕಮಲಕ್ಕೆ ನಾಳದಂಡದಂತಿರು
ವುದು. ಅದರ ಕೆಳಗೆ ಸಹಜವಾಗಿ ಬೆಳ್ಳಗಿರುವ ಮತ್ತು ಕೃಷ್ಣಾಗರುಚಂದನದ ಕೆಸರಿನಿಂದ
ಮಲಿನವಾದ ಮುತ್ತಿನ ಹಾರವೂ ಸಹ ಈ ಭಾವಕ್ಕೆ ಪೋಷಕವಾಗಿ ತಾವರೆ
ಬಳ್ಳಿಯ ಸೌಂದರ್ಯವನ್ನು ತಾಳಿದೆ.
 
69. ಗಲೇ ರೇಖಾಸ್ತಿ ಪ್ರಃp, 157,
ಕಂಠದ ವಲಿತ್ರಯವರ್ಣನೆ
(ವಶ್ಯತೆ)
 
CC-0. Jangamwadi Math Collection. Digitized by eGangotri