This page has not been fully proofread.

३३८
 
सौन्दर्यलहरी
 
ಯಲ್ಲಿ ಹೇಳಲೇ ? ನೋಡು, ಈ ಹವಳದ ಬಳ್ಳಿಗೂ ಏನಾದರೂ ಒಂದು ಫಲವು
ಬಿಡುವುದಾದರೆ ಅದು ಇದಕ್ಕೆ ಹೋಲಬಹುದು. ತೊಂಡೆಯ ಹಣ್ಣೂ ಸಹ ನಿನ್ನ ಕೆಂಪು
ತುಟಿಗಳ ಪ್ರತಿಬಿಂಬನದಿಂದಲೇ ಅಷ್ಟು ಕೆಂಪಾಗಿರುವುದು. ಹೀಗಿರುವಾಗ ಕಲಾ
ಮಾತ್ರವಾದರೂ ಇದರ ಹೋಲಿಕೆಯನ್ನು ಹೊಂದಿರುವುದಾಗಿ ತೋರಿಸಿಕೊಳ್ಳಲು
ಅದಕ್ಕೆ ನಾಚಿಕೆಯಾಗುವುದಿಲ್ಲವೇ ?
 
63. ಸ್ಮಿತಜ್ಯೋತ್ಸಾಜಾಲಂ-P. 150.
ವದನ ಬಿಂಬವರ್ಣನ
 
(ತಾನು ಹೇಳಿದ್ದನ್ನು ಎಲ್ಲರಿಂದಲೂ ಆಚರಿಸಿಸುವುದು)
 
ಓ ದೇವಿ ! ನಿನ್ನ ಮುಖಚಂದ್ರನ ಮುಗುಳಿನಗೆಯೆಂಬ ಚಂದ್ರಿಕೆಯನ್ನು
ಯಥೇಚ್ಛವಾಗಿ ಪಾನಮಾಡಿ ಅದರ ಮಿತಿಮೀರಿದ ಮಾಧುರ್ಯದಿಂದ ಚಕೋರ
ಪಕ್ಷಿಗಳ ನಾಲಿಗೆಯೆಲ್ಲವೂ ಜಡವಾಗಿಬಿಟ್ಟವು. ಇನ್ನು ಇದಕ್ಕೆ ಬೇಸತ್ತ ಅವು, ಹುಳಿಯಲ್ಲಿ
ಸ್ವಲ್ಪ ಆಸೆಗೊಂಡು ಹುಳಿಹಣ್ಣಿನ ಭಾಯಿಂದ ಚಂದ್ರನನ್ನು ಕಂಡು ಅದರ ರಸವೆಂದು
ಚಂದ್ರಿಕೆಯನ್ನು ಪ್ರತಿರಾತ್ರಿಯೂ ಸ್ವಚ್ಛಂದವಾಗಿ ತೃಪ್ತಿಯಾಗಿ ಆಸ್ವಾದಿಸುತ್ತಿರಬಹು
ದಲ್ಲವೇ ?
 
64, ಅವಿಶ್ರಾನಂ ಪತ್ತು-P, 151,
 
ಓ ಮಾತೇ ! ನಿನ್ನ ಈ ನಾಲಿಗೆಯು ಯಾವಾಗಲೂ ಸದಾಶಿವನ ಕಥೆಯನ್ನು
ಜಪಿಸುತ್ತಿರುವುದರಿಂದ ಜಪಾಕುಸುಮದ ಕೆಂಪುದಾಸವಾಳ) ಹೂವಿನ ಕಾನ್ತಿಯೇ ನಿನ್ನ
ನಾಲಗೆಯಲ್ಲಿ ಕಾಣುತ್ತಿರುವುದು. ಆದ್ದರಿಂದಲೇ ನಿನ್ನ ಜಿಹ್ವಾಗ್ರದಲ್ಲಿ ನೆಲೆಸಿರುವ ಸ್ಪಟಿಕ
ಸ್ವಚ್ಛಳಾದ ಸರಸ್ವತಿಯು ಮಾಣಿಕ್ಯ ಮೂರ್ತಿಯಂತೆ ತೋರುತ್ತಿದಾಳೆ.
 
65. ರಣೇ ಚಿತ್ವಾ ದೈತ್ಯಾಗ-P, 152
ತಾಮೂಲದ ಪವಿತ್ರತಾವರ್ಣನೆ
(ಸಕಲಜನವಶ್ಯತೆ)
 
ಓ ತಾಯಿ ! ಅನೇಕ ಯುದ್ಧಗಳಲ್ಲಿ ರಾಕ್ಷಸರನ್ನು ಗೆದ್ದು ಶಿರಸ್ತ್ರಾಣವನ್ನು ಕಳ
ಚಿಟ್ಟು ಕೇವಲ ಕವಚದೊಡನೇ ಹಿಂತಿರುಗಿದ ಷಣ್ಮುಖದೇವೇಂದ್ರ-ಉಪೇಂದ್ರರು
ಚಂಡನೆಂಬ ಪ್ರಮಥನಿಗೆ ಮಾತ್ರ ಸಲ್ಲಬೇಕಾದ ಶಿವನಿರ್ಮಾಲ್ಯವನ್ನು ಸೇವಿಸಲು ಇಷ್ಟ
ವಿಲ್ಲದೇ ಚಂದ್ರಖಂಡಗಳಿಂದ ಕೂಡಿದ ನಿನ್ನ ಬಾಯಲ್ಲಿರುವ ತಾಂಬೂಲದ ಕವಳಗಳನ್ನು
 
ಭಕ್ತಿಯಿಂದ ಸೇವಿಸುತ್ತಿರುವರು.
 
CC-0. Jangamwadi Math Collection. Digitized by eGangotri