This page has not been fully proofread.

सौन्दर्यलहरी
 
ಓ ದೇವಿ ! ನಿನ್ನ ಕಿವಿಯ ಓಲೆಗಳು ಎರಡು ಕೆನ್ನೆಗಳಮೇಲೂ ಪ್ರತಿ
ಬಿಂಬಿಸುತ್ತಿರುವುದರಿಂದ ನಿನ್ನ ಮುಖವು ನಾಲ್ಕು ಚಕ್ರವುಳ್ಳ ಮನ್ಮಥರಥವನ್ನೇ
ಚಿತ್ರಿಸುವಂತಿದೆ. ಪ್ರಾಯಶಃ ಈ ರಥವನ್ನೇರಿ ಮಹಾವೀರನಾದ ಕಾಮದೇವನು,
ಸೂರ್ಯಚಂದ್ರರನ್ನೇ ಪಾದಗಳನ್ನಾಗಿಯುಳ್ಳ ಭೂಮಿಯೆಂಬ ರಥವನ್ನೇರಿ ಜಗತ್ತನ್ನು
ಗೆಲ್ಲಲು ಅಣಿಮಾಡಿಕೊಂಡಿರುವ ಈಶ್ವರನನ್ನೂ ನೋಯಿಸಬಹುದಲ್ಲವೇ ?
 
60, ಸರಸ್ವತ್ಯಾ: ಸೂಕ್ತಿ-P. 147
ಮಧುರಾಲಾಪವರ್ಣನ
 
... (ಸಕಲವಿದ್ಯಾಲಾಭ)
 
ಓ ದೇವಿ ! ಅಮೃತರಸಪ್ರವಾಹದ ಅದ್ಭುತಸೌಭಾಗ್ಯವನ್ನೂ ಕೀಳುಮಾಡು
ವಷ್ಟು ಉತ್ತಮವಾದ ನಿನ್ನ ಮಧುರಮಧುರವಾದ ಆಲಾಪಗಳನ್ನು ಸರಸ್ವತಿಯು
ಅನವರತವೂ ತನ್ನ ಕಿವಿಯೆಂಬ ಅಂಜಲಿಯಿಂದ ಸವಿಯುತ್ತಿದ್ದಾಳೆ. ಅದರ ಚಮತ್ಕಾರಕ್ಕೆ
ತಲೆದೂಗುತ್ತಿರುವಾಗ ಆಕೆಯ ಕರ್ಣಾಭರಣಗಳ ಝಣತ್ಕಾರವು ನಿನ್ನ ಮಾತುಗಳನ್ನು
ತಾರಸ್ಥಾಯಿಯ ಓಜ್ಞಾರದಿಂದ ಅನುಮೋದಿಸುತ್ತಿದೆಯೋ ಎನ್ನುವಂತಿದೆ.
 
61. ಆಸ್ ನಾಸಾವಂಶ :P. 148,
 
ನಾಸಾಪುಟ ವರ್ಣನೆ
 
(ಸಕಲಪುರುಷವಶ್ಯತೆ)
 
350 ch
 
ಹಿಮವಂತನ ವಂಶಕ್ಕೆ ಪತಾಕೆಯಂತಿರುವವಳೇ! ದೇವಿ! ಯಾವ ನಿನ್ನ ಮೂಗೆಂಬ
ವಂಶವು (ಬಿದಿರು) ತನ್ನೊಳಗೆ ಅದೆಷ್ಟೋ ಮುತ್ತುಗಳನ್ನು ಅಡಗಿಸಿಕೊಂಡು, ಚಂದ್ರ
ನಾಡಿಯೆಂಬ ತನ್ನ ಎಡಭಾಗದ ಹೊಳ್ಳೆಯ ಉಸಿರಾಟದ ಮೂಲಕ ಒಂದೊಂದು
ಮುತ್ತನ್ನಾಗಿ ಹೊರತರುತ್ತಾ ಹೊರಗೂ ಮುಕ್ತಾಧರವಾಗಿದೆಯೋ, ಎನ್ನುವಂತಿದೆ.
ಅಂತಹ ನಿನ್ನ ನಾಸಾವಂಶವು ನಮ್ಮ ಜೀವಕ್ಕೆ ಉಚಿತವಾದ ಇಷ್ಟಾರ್ಥವನ್ನು ದಯ
 
ಪಾಲಿಸಲಿ.
 
62. ಪ್ರಕೃತ್ಯಾರಕ್ತಾಯಾ :-P. 149.
 
ತುಟಿಗಳ ವರ್ಣನೆ
 
(ನಿದ್ರಾಲಾಭ)
 
ಉತ್ತಮವಾದ ದಂತಪಂಕ್ತಿಯಿಂದ ವಿರಾಜಿಸುವವಳೇ ! ದೇವಿ! ಸಹಜವಾ
ಗಿಯೇ ನಸುಗೆಂಪಾಗಿರುವ ನಿನ್ನ ತುಟಿಗಳ ಕಾಂತಿಗೆ ಹೋಲಿಕೆಯನ್ನು ಒಂದು ರೀತಿ
 
22
 
CC-0. Jangamwadi Math Collection. Digitized by eGangotri