This page has not been fully proofread.

सौन्दर्यलहरी
 
ಓ ದೇವಿ ! ನಿನ್ನ ನೇತ್ರ ಸೌಭಾಗ್ಯವನ್ನು ಅಪಹರಿಸಲು ಸಿದ್ಧವಾಗಿವೆಯೆಂಬ
ಚಾಡಿಯನ್ನು ಆಕರ್ಣಾನವಾದ ನಿನ್ನ ಕಣ್ಣು ನಿನ್ನ ಹತ್ತಿರ ಎಲ್ಲಿ ಹೇಳಿಬಿಡು
ಇದೆಯೋ ? ಎಂಬ ಭಯದಿಂದ ಹೆಣ್ಣು ಮೀನುಗಳು ಯಾವಾಗಲೂ ನೀರಿನಲ್ಲಿ
ಮುಳುಗಿವೆ, ಮತ್ತು ಈ ಕಣ್ಣುಗಳ ಕಾಯು-ಬೆಳಗ್ಗೆಯಾದ ತಕ್ಷಣ ದಳಗಳೆಂಬ
ತಮ್ಮ ಬಾಗಿಲುಗಳನ್ನು ಮುಚ್ಚಿಕೊಂಡು ಮೊಗ್ಗಾಗುವ ಕನ್ನೈದಿಲೆ ಹೂವುಗಳನ್ನು
ತ್ಯಜಿಸಿ, ರಾತ್ರಿಕಾಲದಲ್ಲಿ ಮಾತ್ರ ಅವುಗಳನ್ನು ತೆರೆದು ಪ್ರವೇಶಿಸುತ್ತವೆ.
 
57, ದೃಶಾ ದ್ರಾಭೀಯಸ್ಕಾ-P. 144
ದೇವಿಯ ಕೃಪಾಕಟಾಕ್ಷ ಪ್ರಾರ್ಥನೆ
 
( ಬಹುಭಾಗ್ಯ ಲಾಭ)
 
ಓ ದೇವಿ ! ಸ್ವಲ್ಪ ಅರಳಿದ ಕನ್ನೈದಿಲೆ ಹೂವಿನ ಕಾನಿಯಿಂದ ಕೂಡಿರುವ ನಿನ್ನ
ದೀರ್ಘವಾದ ನೋಟದಿಂದ ದಯೆಯಿಟ್ಟು ದೀನನಾದ ನನ್ನನ್ನು ಸ್ನಾನಮಾಡಿಸು.
ಇಷ್ಟೇ ನನ್ನ ಧನ್ಯತೆಗೆ ದಾರಿ. ಇದರಿಂದ ನಿನಗೂ ಏನೂ ನಷ್ಟವಿಲ್ಲವಷ್ಟೇ. ಏಕೆಂದರೆ
ಶುಭ್ರವಾದ ಅಂತಃಕರಣವುಳ್ಳ ಮಹಾತ್ಮರಿಗೆ ಎಲ್ಲರಲ್ಲಿಯೂ ಸಮಸಹಜತೆಯಿಂದ
ವರ್ತಿಸುವುದೇ ಸ್ವಭಾವವಲ್ಲವೇ ? ಚಂದ್ರನು ತನ್ನ ಚಂದ್ರಿಕೆಯನ್ನು ಕಾಡಿನಲ್ಲಿಯೂ
ಉಪ್ಪರಿಗೆಯಲ್ಲಿಯೂ ಸಮವಾಗಿಯೇ ಚೆಲ್ಲುತ್ತಾನಲ್ಲವೇ ?
 
58. ಅರಾಲಂ ತೇ-P. 145
 
ಪಾಲಿಗಳ ವರ್ಣನೆ
 
(ಸಕಲಜನವಶ್ಯತೆ, ಸರ್ವವ್ಯಾಧಿನಾಶ)
 
ಓ ದೇವಿ ! ನಿನ್ನ ಕಿವಿ ಮತ್ತು ಕಣ್ಣುಗಳ ಬಗ್ಗಿರುವ ಮಧ್ಯಭಾಗವನ್ನು
ಗಮನಿಸಿದರೆ ಯಾರಿಗಾದರೂ ಕಾಮನ ಬಿಲ್ಲಿನ ನೆನೆಪು ಬಂದೇ ಬರುವುದು. ಏಕೆಂದರೆ
ಅಲ್ಲಿ ಅಡ್ಡಲಾಗಿ ಸಂಚರಿಸುತ್ತಿರುವ ಕಡೆಗಣೋಟದ ಕಾಂತಿಯು ಕಿವಿಯ ಹಾದಿ
ಯನ್ನೂ ದಾಟಿ ಹಾದು ಮುಂದುವರಿಯುವ ಬಾಣದ ನೆನಪನ್ನೇ ತರುವುದಲ್ಲವೇ ?
 
59. ಸ್ಪುರದ ಸ್ಥಾಭೋಗ-P. 146
 
ಬೆಂಡೋಲೆಗಳ ವರ್ಣನ
 
(ಸಕಲಜನವಶ್ಯತೆ)
 
CC-0. Jangamwadi Math Collection. Digitized by eGangotri