This page has not been fully proofread.

३३४
 
50.
 
सौन्दर्यलहरी
 
ಕವೀನಾಂ ಸಂದರ್ಭ-P. 135
 
ಹಣೆಗಣ್ಣಿನ ವರ್ಣನೆ
( ಮಸೂರಿಕಾರೋಗನಾಶ)
 
ಓ ದೇವಿ ! ಕವಿಗಳ ಕಾವ್ಯರಾಶಿಯೇ ನವರಸಗಳನ್ನು ಸುರಿಸುವ ಒಂದು ರೀತಿಯ
ಹೂಗೊಂಚಲು, ಅದರ ಮಕರಂದ ರಸವನ್ನು ನಿನ್ನ ಕಿವಿಗಳು ಸದಾ ಪಾನಮಾಡುತ್ತಿವೆ.
ನಿನ್ನ ಕಡೆಗಣ್ಣುಗಳಾದರೋ, ಅವುಗಳನ್ನು ಯಾವಾಗಲೂ ಮರಿದುಂಬಿಗಳಂತೆ
ಆಶ್ರಯಿಸಿ ಅಲ್ಲಿರುವ ನವರಸಗಳನ್ನೂ ಸವಿಯಲು ಹಂಬಲಿಸುತ್ತಿವೆ. ಪ್ರಾಯಶಃ ಇದನ್ನು
ಗಮನಿಸಿಯೇ ನಿನ್ನ ಹಣೆಗಣ್ಣು ಅಷ್ಟು ಕೆಂಪಾಗಿರಬಹುದೆಂದು ಭಾವಿಸುತ್ತೇನೆ.
 
51. ಶಿವೇ ಸೃಜ್ಞಾ ರಾದ್ರ್ರಾ-P. 137
 
ನವರಸಮಯವಾದ ನೋಟದ ವರ್ಣನೆ
 
(ಸರ್ವಜನವಶ್ಯತೆ)
 
ಓ ದೇವಿ ! ನಿನ್ನ ದೃಷ್ಟಿಯು ನಾನಾವಿಷಯಗಳಲ್ಲಿ ನಾನಾವಿಧ ರಸಭಾವಗಳನ್ನು
ತಾಳುತ್ತಿದೆಯೆಂದರೆ ಅತ್ಯುಕ್ತಿಯಲ್ಲ. ಏಕೆಂದರೆ ಇದು ಶಿವನಲ್ಲಿ ಶೃಂಗಾರವನ್ನೂ
ತಾವರೆಗಳಲ್ಲಿ ರಾಗರಕ್ತಿಮೆಯಿಂದ ವೀರರಸವನ್ನೂ, ನನ್ನಲ್ಲಿ ಕರುಣರಸವನ್ನೂ, ಶಿವನ
ಚರಿತೆಗಳಲ್ಲಿ ಅದ್ಭುತರಸವನ್ನೂ, ಸಖಿಯರಲ್ಲಿ ಹಾಸ್ಯರಸವನ್ನೂ, ಸರ್ಪಾಭರಣಗಳಲ್ಲಿ
ಭಯಾನಕರಸವನ್ನೂ, ಭಗವದ್ಧರ್ಮವಿದೂರರಲ್ಲಿ ಬೀಭತ್ಸ ರಸವನ್ನೂ, ಮತ್ತು
ಯಾದ ಗಂಗೆಯಲ್ಲಿ ರೌದ್ರರಸವನ್ನೂ, ಹೀಗೆ ಎಲ್ಲ ರಸಗಳನ್ನೂ ಸುಸ್ಪಷ್ಟವಾಗಿ ತಾಳು
ವುದಾಗಿದೆಯಲ್ಲವೇ ?
 
ಸವತಿ
 
52.
 
ಗತೇ ಕರ್ಣಾಭರ್ಣ P. 138
ನೇತ್ರ ದೈರ್ಘ ವರ್ಣನೆ
 
(ಕಿವಿ ಕಣ್ಣುಗಳ ರೋಗ ನಿವೃತ್ತಿ)
 
ಓ ಹಿಮವಂತನ ವಂಶಕ್ಕೆ ಶಿರೋಲಂಕಾರವಾದ ಮೊಗ್ಗಿನಂತಿರುವವಳೇ ! ದೇವಿ
ನಿನ್ನ ಈ ಎರಡು ಕಣ್ಣುಗಳೂ ಬಾಣದ ಹಿಂಭಾಗದ ಗರಿಗಳಂತಿರುವ ರೆಪ್ಪೆಗಳನ್ನು
ಧರಿಸಿ ಕಿವಿಯವರೆಗೂ ಹರಡಿವೆ. ಇವನ್ನು ನೋಡಿದರೆ ತ್ರಿಪುರ ಸಂಹಾರಕನಾದ
ಶಿವನ ಮನಶ್ಯಾನಿಯನ್ನು ಕದಲಿಸಿತಪೋಭಂಗಮಾಡಲು ಕಿವಿಯವರೆಗೂ ಎಳೆದು
ಸಿದ್ಧಪಡಿಸಿದ ಕಾಮಬಾಣದ ಸೊಬಗಿನ ನೆನೆಪನ್ನೇ ತರುತ್ತವೆ.
 
CC-0. Jangamwadi Math Collection. Digitized by eGangotri