This page has not been fully proofread.

9
 
सौन्दर्यलहरी
 
47, ಭ್ರುವ ಭುಗ್ನ P. 131
 
ಹುಬ್ಬುಗಳ ವರ್ಣನೆ
 
(ದೇವತಾವಶ್ಯ, ಸಕಲಜನವಶ್ಯ)
 
ಓ ಉಮೇ ! ಲೋಕದ ಎಲ್ಲವಿಧವಾದ ಭಯವನ್ನೂ ನಾಶಮಾಡುವುದರಲ್ಲಿ
ನಿರತಳಾದವಳೇ ! ಕೊಂಚ ಬಾಗಿರುವ ನಿನ್ನ ಹುಬ್ಬುಗಳನ್ನು ನಾನು ಮನ್ಮಥನಬಿಲ್ಲೆಂದೇ
ತಿಳಿಯುತ್ತೇನೆ. ಅಲ್ಲಿ ದುಂಬಿಗಳಂತಿರುವ ನಿನ್ನ ಕಣ್ಣುಗಳೇ ಹೆದೆ. ಅದರ ಮಧ್ಯ
ಭಾಗವು, ಧನುರ್ಧಾರಿಯಾದ ಮನ್ಮಥನ ಬಲಗೈಯಿನ ಮಣಿಕಟ್ಟಿನಿಂದಲೂ ಮುಷ್ಟಿ
ಯಿಂದಲೂ ಮರೆಸಲ್ಪಟ್ಟಿರುವಂತೆ ತೋರುತ್ತದೆ.
 
48. ಅಹಃ ಸೂತೇ ಸವ್ಯಂ -P. 133
ನೇತ್ರಗಳ ವರ್ಣನೆ
 
(ನವಗ್ರಹದೋಪಶಾಸ್ತ್ರಿ)
 
३३३
 
ಓ ದೇವಿ ! ನಿನ್ನ ಬಲಗಣ್ಣು ಸೂರ್ಯರೂಪವಾಗಿ ಹಗಲನ್ನೂ, ಎಡಗಣ್ಣು
ಚಂದ್ರರೂಪವಾಗಿ ರಾತ್ರಿಯನ್ನೂ, ಮತ್ತು ಹಣೆಗಣ್ಣು ಸ್ವಲ್ಪ ಅರಳಿರುವ ತಾವರೆ
ಯಂತೆ ಕೆಂಪಾಗಿ (ಅಗ್ನಿ ರೂಪವಾಗಿ) ಹಗಲು ರಾತ್ರಿಗಳ ಮಧ್ಯದಲ್ಲಿ ತೋರುವ
ಸಂಧ್ಯಾಕಾಲವನ್ನೂ ಸೃಷ್ಟಿಸುತ್ತವೆ.
 
49, ವಿಶಾಲಾ ಕಲ್ಯಾಣೀ-P. 134
 
ಕಟಾಕ್ಷವರ್ಣನೆ
 
(ನಿಧಿ ದರ್ಶನ)
 
ಓ ದೇವಿ ! ನಿನ್ನ ಕಣ್ಣು ಮತ್ತು ದೃಷ್ಟಿಗಳು ಅಗಲವಾಗಿರುವುದರಿಂದ ವಿಶಾಲಾ
ಎಂದೂ, ಮಂಗಳಮಯವಾದ್ದರಿಂದ ಕಲ್ಯಾಣೀ ಎಂದೂ, ಸ್ಪುಟವಾದ ಕಾ
ಯೊಂದಿಗೆ ನೈದಿಲೆಗಳಿಂದಲೂ ಗೆಲ್ಲಲಸಾಧ್ಯವಾದ್ದರಿಂದ ಅಯೋಧ್ಯಾ ಎಂದೂ,
ಹೀಗೆಯೇ ಕರುಣಾರಸಪ್ರವಾಹಕ್ಕೆ ಆಧಾರವಾಗಿಯೂ, ಅವ್ಯಕ್ತ ಮಧುರವಾಗಿಯೂ,
ದೀರ್ಘವಾಗಿಯೂ, ಭಕ್ತರ ರಕ್ಷಣೆಯನ್ನು ನೀಡುವುದಾಗಿಯೂ, ಎಲ್ಲಾ ನಗರಗಳ
ಪೂರ್ಣಧರ್ಮವನ್ನು ಹೊಂದಿ ಗೆಲ್ಲುವುದಾಗಿಯೂ ಇರುವುದರಿಂದ ಕ್ರಮವಾಗಿ
ಧಾರಾ-ಮಧುರಾ-ಭೋಗವತೀ-ಅವಂತೀ-ವಿಜಯಾ-ಎಂದೂ ಹೆಸರುಗಳನ್ನು ಹೊಂದಿ
ಎಲ್ಲೆಲ್ಲಿಯೂ ಬೆಳಗುತ್ತಿವೆ.
 
CC-0. Jangamwadi Math Collection. Digitized by eGangotri