This page has not been fully proofread.

३३२
 
सौन्दर्यलहरी
 
44, ತನೋತು ಕ್ಷೇಮಂ ನಃ-P. 127
 
ಬೈತಲೆಯ ವರ್ಣನೆ
 
(ವಶ್ಯತೆ, ಮತ್ತು ಬಾಧೆಗಳ ಪರಿಹಾರ)
 
ಓ ದೇವಿ ! ನಿನ್ನ ಯಾವ ಬೈತಲೆಯ ರೇಖೆಯು ನಿನ್ನ ಮುಖಸೌಂದರ್ಯದ
ಅಲೆಗಳ ಪ್ರವಾಹದ ಹಾದಿಯೋ ಎಂಬಂತಿದೆಯೋ, ಮತ್ತು ದಟ್ಟವಾದ ಕೇಶಪಾಶ
ರೂಪದಲ್ಲಿ ಕಾಣುವ ಕಗ್ಗತ್ತಲೆಯೆಂಬ ಶತ್ರುಗಳಿಂದ ಸೆರೆಹಿಡಿಯಲ್ಪಟ್ಟ ಸೂರ್ಯನ
ಎಳೆಬಿಸಿಲಿನಂತೆ ಕಾಣುವ ಸಿಂಧೂರದಿಂದ ಅಲಂಕರಿಸಲ್ಪಟ್ಟಿದೆಯೋ, ಅಂಥಾ ನಿನ್ನ
ಬೈತಲೆಯ ರೇಖೆಯು ನಮ್ಮೆಲ್ಲರಿಗೂ ಕ್ಷೇಮವನ್ನುಂಟುಮಾಡಲಿ.
 
45. ಅರಾಲೈ: ಸ್ವಾಭಾವ್ಯಾತ್ -P. 128
 
ಮುಖಕಮಲವರ್ಣನ
 
(ವಾಕ್ಸಿದ್ಧಿ)
 
ಓ ದೇವಿ! ಸ್ವಾಭಾವಿಕವಾಗಿಯೇ ಕುಟಿಲವಾಗಿಯೂ ಮರಿದುಂಬಿಗಳಂತೆ
ಕಪ್ಪಾದ ಕಾಂತಿಯುಳ್ಳವುಗಳಾಗಿಯೂ ಇರುವ ಮುಂಗುರುಳುಗಳಿಂದ ಸುತ್ತುವರಿದ
ನಿನ್ನ ಮುಖಮಂಡಲವು ಕಮಲದ ಕಾಂತಿಯನ್ನೂ ಪರಿಹಾಸಮಾಡುವಂತಿದೆ.
ಹಾಗೆಯೇ ನೀನು ಮುಗುಳಗೆ ನಗುವಾಗ ಪ್ರಕಾಶಿಸುವ ಹಲ್ಲುಗಳ ಕಾನಿಯೆಂಬ
ಕೇಸರಗಳಿಂದ ಕೂಡಿ ಪರಿಮಳಭರಿತವಾದ ಆ ನಿನ್ನ ಮುಖಮಂಡಲದಲ್ಲಿಯೇ ಕಾಮ
ದಹನವೆಸಗಿದ ಶಿವನ ಹಣೆಗಣ್ಣೆಂಬ ದುಂಬಿಗಳೂ ಆನಂದಪಡುವಂತಿದೆ.
 
46. ಲಲಾಟಂ ಲಾವಣ್ಯ-P, 129
 
ಹಣೆಯ ವರ್ಣನ
 
(ಭರ್ತೃ ಸಮಾಗಮ, ಗರ್ಭಧಾರಣೆ)
 
ದಿಂದ ಶುಭ್ರವಾಗಿ ಹೊಳೆಯುತ್ತದೆಯೋ, ಅದನ್ನೇ ನಾನು ಕಿರೀಟಾಲಂಕೃತವಾದ
ಓ ದೇವಿ! ಯಾವ ನಿನ್ನ ಮುಖಮಂಡಲವು ತನ್ನದೇ ಆದ ಲಾವಣ್ಯದ ಪ್ರಕಾಶ
ಅಲಂಕಾರವಾದ ಚಂದ್ರಕಲೆ ಮತ್ತು ಈ ಮುಖಚಂದ್ರಖಂಡ ಇವೆರಡರ ವಿಲಕ್ಷಣವಾದ
ಎರಡನೆಯ ಚಂದ್ರಾರ್ಧಖಂಡವೆಂದು ಭಾವಿಸುತ್ತೇನೆ ಏಕೆಂದರೆ ನಿನ್ನ ಚೂಡೆಗೆ
ಒಂದು ಜೋಡಣೆಯಿಂದ ಅಮೃತಧಾರೆಯನ್ನು ಸುರಿಸುವ ಪೂರ್ಣಚಂದ್ರನ ಒಂದು
 
ಆಕಾರವೇ ತೋರುವುದಾಗಿದೆಯಲ್ಲವೇ ?
 
CC-0. Jangamwadi Math Collection. Digitized by eGangotri