This page has not been fully proofread.

सौन्दर्यलहरी
 
ಓ ದೇವಿ ! ನಿನ್ನ ಮಣಿಪೂರಚಕ್ರದ ಎಲ್ಲಾ ಕಗ್ಗತ್ತಲೆಯನ್ನೂ ನೀಗಿಸುವ ಶಕ್ತಿ
ಯೆಂಬ ಮಿಂಚಿನಿಂದಲೂ, ಪ್ರಕಾಶಮಾನವಾದ ನಾನಾವಿಧ ರತ್ನಾಭರಣಗಳಿಂದ
ನಿರ್ಮಿತವಾದ ಇಂದ್ರಧನುಸ್ಸಿನಿಂದಲೂ ಕೂಡಿರುವ ಶ್ಯಾಮವರ್ಣನಾದ ಹರನೆಂಬ
ಸೂರ್ಯನಿಂದ ಕಾದು, ಮೂರು ಲೋಕಕ್ಕೂ ಮಳೆಗರೆಸುವ ಬಗ್ಗೆ ಸಲಶಕ್ಯವಾದ
ಕಾರ್ಮುಗಿಲೊಂದನ್ನು ಸದಾ ಭಜಿಸುತ್ತೇನೆ.
 
41. ತವಾಧಾರೇ ಮೂಲೇ-P, 115,
 
ಮೂಲಾಧಾರದಲ್ಲಿ ದೇವಿಯ ಧ್ಯಾನ
(ಉದರರೋಗನಾಶ)
 
ಓ ದೇವಿ ! ನಿನ್ನ ಮೂಲಾಧಾರ ಚಕ್ರದಲ್ಲಿ ಲಾಸ್ಯಾಸಕ್ತಳಾದ ಸಮಯೆಯೆಂಬ
ಆನಂದಭೈರವಿಯೊಂದಿಗೆ ಕೃಷ್ಣಾರಾದಿನವರಸಭರಿತವಾದ ಅದ್ಭುತತಾಂಡವವನ್ನು
 
ಮಾಡುತ್ತಿರುವ ಆನಂದ ಭೈರವನನ್ನು ಧ್ಯಾನಿಸುತ್ತೇನೆ. ಜಗತೃಷ್ಟಿಗಾಗಿ ಈ ರೀತಿ
ಕೂಡಿದವರಾದ ಇವರೇ ಈ ಜಗತ್ತಿನ ತಾಯಿ ತಂದೆಗಳಾಗಿರುವರಲ್ಲವೇ?
 
42. ಗತೈ ರ್ಮಾಣಿಕತ್ವಂ-P. 124,
ದೇವಿಯ ಕಿರೀಟ ವರ್ಣನೆ
 
(ಮಹೋದರವ್ಯಾಧಿನಾಶ)
 
ಓ ದೇವಿ ! ರತ್ನ ರೂಪದಲ್ಲಿ ದಟ್ಟವಾಗಿ ಹುದುಗಿಸಲ್ಪಟ್ಟ ಹನ್ನೆರಡು ಸೂರ್ಯ
ರಿಂದ ಕೂಡಿದ ನಿನ್ನ ಚಿನ್ನದ ಕಿರೀಟವನ್ನು ವರ್ಣಿಸಲನುವಾಗುವವನು, ಮೊದಲು
ಆ ರತ್ನ ಕಾನ್ತಿಯ ವ್ಯಾಪ್ತಿಯಿಂದ ಚಿತ್ರ ವಿಚಿತ್ರವಾಗಿ ಕಾಣುವ ಅಲ್ಲಿನ ಚಂದ್ರ
ಖಂಡವನ್ನು ನೋಡಿ, ಕಾಮನ ಬಿಲ್ಲೆಂದೇ ಭಾವಿಸುವನಲ್ಲವೇ ?
 
43. ಧುನೋತು ಧ್ಯಾನಂ ನಃ-P. 124
 
ಕೇಶಪಾಶಗಳ ವರ್ಣನೆ
 
(ಸಕಲಜನವಶ್ಯತೆ)
 
ಓ ದೇವಿ ! ಅರಳಿದ ಕನ್ನೈದಿಲೇ ಹೂಗಳ ಗೊಂಚಲಿನಂತೆ ದಟ್ಟವೂ ಸ್ನಿಗ್ಧವೂ
ನುಣುಪೂ ಮೃದುವೂ ಆದ ನಿನ್ನ ಕೇಶಪಾಶವು ನಮ್ಮ ಅಜ್ಞಾನವೆಂಬ ಕತ್ತಲೆಯನ್ನು
ಹೋಗಲಾಡಿಸಲಿ. ಇಂದ್ರನ ನಂದನೋದ್ಯಾನದ ಕಲ್ಪವೃಕ್ಷದ ಹೂಗಳೆಲ್ಲವೂ ನಿನ್ನ ಈ
ಕೇಶಪಾಶದಲ್ಲಿರುವ ಸ್ವಾಭಾವಿಕವಾದ ಪರಿಮಳವನ್ನು ಹೊಂದುವುದಕ್ಕಾಗಿಯೇ
ನಿನ್ನ ಕೇಶಪಾಶಗಳಲ್ಲಿಯೇ ವಾಸಿಸುತ್ತಿರಬಹುದೆಂದು ತಿಳಿಯಬೇಕಾಗಿದೆಯಲ್ಲವೇ ?
 

 
CC-0. Jangamwadi Math Collection. Digitized by eGangotri