This page has not been fully proofread.

३३०
 
सौन्दर्यलहरी
 
108
 
37, ವಿಶುದ್ಧತೇ-P,
ವಿಶುದ್ಧಿ ಚಕ್ರದಲ್ಲಿ ದೇವಿಯ ಧ್ಯಾನ
(ಬ್ರಹ್ಮರಥೋಬಾಧಾನಿವೃತ್ತಿ)
 
ಓ ದೇವಿ ! ವಿಶುದ್ಧಿ ಚಕ್ರದಲ್ಲಿ ಶುದ್ಧವಾದ ಸ್ಪಟಿಕಶಿಲೆಯಂತೆ ಸ್ವಚ್ಛನೂ,
ಆಕಾಶತತ್ತ್ವವನ್ನು ಸೃಷ್ಟಿಸುವವನೂ ಆದ ಶಿವನನ್ನೂ, ಅವನೊಂದಿಗೆ ಸರಿಸಮವಾಗಿ
ಹೆಜ್ಜೆಯಿಡುತ್ತಿರುವ ದೇವಿಯನ್ನೂ ನಮಸ್ಕರಿಸುತ್ತೇನೆ. ಈ ಇಬ್ಬರಿಂದ ಹೊರ
ಹೊಮ್ಮುವ ಬೆಳದಿಂಗಳಿನಂತಿರುವ ಕಾಂತಿಪುಂಜದಿಂದ ಈ ಜಗತ್ತೇ ತನ್ನ ಒಳಗಿನ
ಕಗ್ಗತ್ತಲೆಯನ್ನು ಹೋಗಲಾಡಿಸಿಕೊಂಡು ಚಕೋರಪಕ್ಷಿಯಂತೆ ನಲಿಯುತ್ತದೆ.
ಯಲ್ಲವೇ !
 
38. ಸಮುಲತ್‌ಸಂವಿತ್-P. 109.
ಅನಾಹತಚಕ್ರದಲ್ಲಿ ದೇವಿಯ ಧ್ಯಾನ
(ಬಾಲಾರಿಷ್ಟ ನಿವೃತ್ತಿ)
 
ಓ ದೇವಿ ! ಅನಾಹತ ಚಕ್ರದಲ್ಲಿ ಅರಳಿರುವ ಹೃದಯಕಮಲದ ಮಕರನವನ್ನು
ಸವಿಯುತ್ತಿರುವ ಮಹಾತ್ಮರ ಮಾನಸಸರೋವರದಲ್ಲಿ ಸಂಚರಿಸುತ್ತಿರುವುದೂ, ತನ್ನ
ಇಂಚರದಿಂದ ಹದಿನೆಂಟು ವಿದ್ಯೆಗಳನ್ನೂ ಸೃಷ್ಟಿಸುವುದೂ, ನೀರಿನಿಂದ ಹಾಲನ್ನು
ಬೇರ್ಪಡಿಸುವಂತೆ ಎಲ್ಲದರಲ್ಲಿಯೂ ದೋಷಗಳಿಂದ ಗುಣಗಳನ್ನು ಬೇರ್ಪಡಿಸಿ ಸವಿಯು
ತಿರುವುದೂ ಆದ ಲೋಕಾತೀತವಾದ ಆ ಹಂಸಯುಗ್ಯವನ್ನು ಭಜಿಸುತ್ತೇನೆ.
 
39. ತವ ಸಾ
 
ಸ್ವಾಧಿಷ್ಟಾನೇ-P. 111.
ಸ್ವಾಧಿಷ್ಠಾನಚಕ್ರದಲ್ಲಿ ದೇವಿಯ ಧ್ಯಾನ
(ದುಃಸ್ವಪ್ನ ನಿವೃತ್ತಿ)
 
ಓ ತಾಯೇ ! ಸ್ವಾಧಿಷ್ಠಾನದ ಅಗ್ನಿ ತತ್ತ್ವವನ್ನು ಆಶ್ರಯಿಸಿರುವ ಸಂವರ್ತಾ
ಯೆಂಬ ಪರಮೇಶ್ವರನನ್ನೂ, ಮಹತ್ಪದವಾಚ್ಯಳಾದ ಆ ಸಮಯಿಯನ್ನೂ ಸ್ತುತಿಸು
ತೇನೆ. ಮಹಾಕ್ರೋಧವುಳ್ಳ ಆ ಪರಮೇಶ್ವರನ ದೃಷ್ಟಿಯು ಮಹದಾದಿಲೋಕಗಳೆಲ್ಲ
ವನ್ನೂ ಸುಡುತ್ತಿರುವಾಗ, ದಯಾಪೂರಿತವಾದ ನಿನ್ನ ದೃಷ್ಟಿಯು ಅದಕ್ಕೆ ಶೈತ್ಯೋಪ
 
ಚಾರವನ್ನು ಮಾಡುತ್ತಿರುವಂತಿದೆಯಲ್ಲವೇ ?
 
40. ತಟತನಂ ಶಕ್ತಾ, P. 112
ಮಣಿಪೂರಚಕ್ರದಲ್ಲಿ ದೇವಿಯ ಧ್ಯಾನ
(ಸ್ವಪ್ನದಲ್ಲಿ ಇಷ್ಟಾರ್ಥದರ್ಶನ)
 
CC-0. Jangamwadi Math Collection. Digitized by eGangotri