This page has not been fully proofread.

सौन्दर्यलहरी
 
३२९
 
ಓ ನಿತ್ಯಳೇ ! ನಿನ್ನ ಮಂತ್ರದ ಆದಿಯಲ್ಲಿ ಸ್ಮರ ಯೋನಿ= ಭುವ
ನೇಶ್ವರೀ-ಲಕ್ಷ್ಮಿ ಯರ ಬೀಜಾಕ್ಷರಗಳನ್ನು (=ಕ್ಲೀಂ-ಹೀಂ-ಶ್ರೀಂ) ಜೋಡಿಸಿ,
ಎಲ್ಲೆಯಿಲ್ಲದ ನಿತ್ಯಾನಂದವನ್ನನುಭವಿಸುವ ರಸಿಕರಾದ ಯೋಗೀಶ್ವರರು, ಚಿಂತಾಮಣಿ
ಗಳ ಸಮೂಹದಿಂದ ಅಕ್ಷಮಾಲಿಕೆಯನ್ನು ರಚಿಸಿಕೊಂಡು, ಕಾಮಧೇನುವಿನ ನೂರಾರು
ಆಜ್ಯಧಾರೆಗಳಿಂದ ಶಿವಾಗ್ನಿಯಲ್ಲಿ ಹೋಮವನ್ನು ಮಾಡುತ್ತಾ, ನಿನ್ನನ್ನೇ ಭಜಿಸುತ್ತಿರು
 
ವರು.
 
34. ಶರೀರಂ ತ್ವಂ ಶದ್ರೋ-P. 100,
ಶಿವಶಕ್ತಿಗಳ ಐಕ್ಯವರ್ಣನ
 
(ಬುದ್ಧಿ ಪ್ರಾಪ್ತಿ)
 
ಓ ಭಗವತಿ! ಶಿವನಿಗೆ ನೀನು, ಸೂರ್ಯಚಂದ್ರರನ್ನೇ ಸ್ತನಗಳಾಗಿಯುಳ್ಳ
ಶರೀರವಾಗಿರುವೆ. ನಿನ್ನ ಶರೀರವೇ ನವವ್ಯೂಹಾತ್ಮಕನಾದ ಆನಂದಭೈರವನ ಪರಿಶುದ್ಧ
ಸ್ವರೂಪವಾಗಿದೆ. ಆದ್ದರಿಂದಲೇ ಆನಂದಭೈರವ ಆನಂದಭೈರವೀಸ್ವರೂಪರಾದ ನಿಮ್ಮಿಬ್ಬ
ರಿಗೂ ಶೇಷಶೇಷಿಭಾವವು ಬಹಳ ಸಮರಸವಾಗಿ ಹೊಂದಿಕೊಂಡಿರುವುದು.
 
35, ಮನಂ ವೋಮ ತ್ವಂ P. 105.
ದೇವಿಯ ತತ್ರಾತ್ಮಿಕತೆ
(ಕ್ಷಯರೋಗನಿವೃತ್ತಿ)
 
ಓ ದೇವಿ ! ಮನಸ್ಸು, ಆಕಾಶ, ವಾಯು, ಅಗ್ನಿ, ಅಪ್ಪು, ಭೂಮಿ, ಎಂಬ
ಎಲ್ಲ ತತ್ತ್ವವೂ ನೀನೇ ಆಗಿದೀಯೆ. ಇವೆಲ್ಲವೂ ನಿನ್ನಲ್ಲಿಯೇ ಲಯ ಹೊಂದಿದ ನಂತರ
ಏನೂ ಇರುವುದಿಲ್ಲವಷ್ಟೇ ! ಆದರೆ ಆಮೇಲೆ ನೀನೇ ಒಂದಾನೊಂದು ಕಾಲಕ್ಕೆ ನಿನ್ನನ್ನು
ಜಗದ್ರೂಪಕ್ಕೆ ತಂದುಕೊಂಡು ವಿಸ್ತಾರಪಡಿಸಿಕೊಳ್ಳಲು ಶಿವಶಕ್ತಿಗಳ ರೂಪವನ್ನು
ಚಿದಾನಂದರೂಪದಲ್ಲಿ ತಾಳುತ್ತೀಯಲ್ಲವೇ.
 
36. ತವಾಜ್ಞಾ ಚಕ್ರಸ್ಲಂ-P. 107,
ಆಜ್ಞಾ ಚಕ್ರದಲ್ಲಿ ದೇವಿಯ ಧ್ಯಾನಕ್ರಮ
(ಅನೇಕ ರೋಗ ಶಾಸ್ತ್ರಿ)
 
ಓ ದೇವಿ ! ನಿನ್ನ ಯಾವ ಪ್ರಭುವನ್ನು ಆರಾಧಿಸುವವನು ಸೂರ್ಯಚಂದ್ರಾ
ಗಳಿಗೆ ವಿಷಯವಾಗದ ಮತ್ತು ಬಾಹ್ಯ ಪ್ರಕಾಶರಹಿತವಾದ ಅಲೌಕಿಕಪ್ರಕಾಶ ಪ್ರಪಂಚ
ದಲ್ಲಿ ವಾಸಮಾಡುವನೋ ! ಅಂತಹ ನಿನ್ನ ಆಜ್ಞಾಚಕ್ರದಲ್ಲಿರುವ, ಕೋಟಿ ಸೂರ್ಯ
ಚಂದ್ರರ ಕಾಂತಿಯಿಂದಲೂ ಪರಚೈತನ್ಯದಿಂದಲೂ ಆವೃತನಾದ ಪರಶಿವನನ್ನು ಸದಾ
 
ವಂದಿಸುತ್ತೇನೆ.
 
1
 
CC-0. Jangamwadi Math Collection. Digitized by eGangotri