This page has not been fully proofread.

सौन्दर्यलहरी
 
ಓ ಶಾಶ್ವತಳೇ ! ಓ ಸಜ್ಜನಸೇವ್ಯಳೇ ನಿನ್ನ ದೇಹದಿಂದ ಹೊರಹೊಮ್ಮುವ
ಕಾಂತಿರೂಪವಾದ ಅಣಿಮಾದಿ ಸಿದ್ಧಿಗಳಿಂದ ಸುತ್ತುವರಿಯಲ್ಪಟ್ಟ ನಿನ್ನನ್ನು, ಯಾವನು
'ನಾನು' ಎಂಬ ಐಕ್ಯಭಾವದಿಂದ ಯಾವಾಗಲೂ ಧ್ಯಾನಿಸುವನೋ, ಅವನು ಮುಕ್ಕಣ್ಣನ
ಐಶ್ವರ್ಯವನ್ನೂ ಹುಲ್ಲಿನಂತೆ ಕಡೆಗಾಣಿಸುತ್ತಾನೆ. ಅಂತಹವನಿಗೆ ಪ್ರಲಯಕಾಲದ
ಅಗ್ನಿಯೂ ಸಹ ಮಂಗಳನೀರಾಜನವನ್ನು ಅರ್ಪಿಸುವುದು. ಇದರಲ್ಲಿ ಏನೂ ಅಂತಹ
ಆಶ್ಚರ್ಯವಿಲ್ಲವಷ್ಟೇ.
 
३२८
 
31. ಚತುಷ್ಪಾ ತನ್ನ -P. 72.
 
8
 
ಪುರುಷಾರ್ಥದ ಹಾದಿಯನ್ನು ತೋರಿಸುವ ಶ್ರೀಚಕ್ರದ ಮಹಿಮೆ
(ಸಕಲಜನವಶ್ಯ, ರಾಜವಶ್ಯ)
 
ಓ ದೇವಿ! ಶಿವನು ಅನೇಕ ದುಷ್ಟ ಸಿದ್ಧಿಗಳನ್ನು ಕೊಡುವ ಅರವತ್ತನಾಲ್ಕು
ತಂತ್ರಗಳ ಮೂಲಕ ಲೋಕವನ್ನೆಲ್ಲಾ ವಂಚಿಸುತ್ತಿದ್ದನು. ಆದರೆ ನಿನ್ನ ನಿರ್ಬಂಧದಿಂದ
ಸಮಸ್ತ ಪುರುಷಾರ್ಥಗಳನ್ನೂ ಈಡೇರಿಸುವ ಸಾಮರ್ಥ್ಯವನ್ನು ಸ್ವತಂತ್ರವಾಗಿ ಹೊಂದಿ
ರುವ ಈ ನಿನ್ನ ಸತ್ಯತಂತ್ರವೊಂದನ್ನು ಭೂಮಿಗೆ ಇಳಿದು ಬರುವಂತೆ ಮಾಡಿದನು.
 
32. ಶಿವಃ ಶಕ್ತಿಃ ಕಾಮಃ-P, 81.
 
ಪಂಚದಶಾಕ್ಷರೀಮಂತ್ರೋದ್ಧಾರ
 
.
 
(ವಿದ್ಯಾಸಿದ್ಧಿ, ರಸಾಯನಸಿದ್ಧಿ)
 
ಎಂಬ
 
ಓ ತಾಯೇ ! ಶಿವ (ಕ) ಶಕ್ತಿ (ಏ) ಕಾಮ (ಈ) ಕ್ಷಿತಿ (ಲ)
ವರ್ಣಗಳುಳ್ಳ ಆತ್ಮೀಯ ಖಂಡವನ್ನೂ, ರವಿ (ಹ) ಶೀತಕಿರಣ (ಸ) ಸ್ಮರ (ಕ) ಹಂಸ
(ಹ) ಶಕ್ರ (ಲ) ಎಂಬ ವರ್ಣಗಳುಳ್ಳ ಸೂರ್ಯಖಂಡವನ್ನೂ, ಪರಾ (ಸ) ಮಾರ (ಕ)
ಹರಿ (ಲ) ಎಂಬ ವರ್ಣಗಳುಳ್ಳ ಸೋಮಖಂಡವನ್ನೂ, ಇವುಗಳ ಕೊನೆಯಲ್ಲಿ ರುದ್ರ
ಗ್ರಂಥಿ-ಬ್ರಹ್ಮಗ್ರಂಥಿ-ವಿಷ್ಣು ಗ್ರಂಥಿಗಳ ಸ್ಥಾನದ ಹೃಲ್ಲೇಖಾಬೀಜ ಅಂದರೆ ಹೀ
ಕಾರವನ್ನೂ ಸೇರಿಸಿದರೆ ಅದು ತ್ರಿಪುರಸುಂದರಿಯಾದ ನಿನ್ನ ಪಂಚದಶಾಕ್ಷರೀಮಂತ್ರದ
 
ಒಂದು ಪ್ರತೀಕವೇ ಆಗಿಬಿಡುತ್ತದೆ.
 
33. ಸ್ಮರು ಯೋನಿಂ ಲಕ್ಷ್ಮೀಂ-P, 88,
ದೇವೀಮಂತ್ರೋಪಾಸನೆಯ ಕ್ರಮ
(ಬಹುಧನಪ್ರಾಪ್ತಿ)
 
CC-0. Jangamwadi Math Collection. Digitized by eGangotri