2023-02-16 08:27:01 by ambuda-bot
This page has not been fully proofread.
सौन्दर्यलहरी
३२७
ಓ ದೇವಿ ! ನನ್ನ ಸ್ವಾಭಾವಿಕವಾದ ಸಲ್ಲಾಪಗಳೆಲ್ಲವೂ ನಿನ್ನ ಜಪವಾಗಲಿ,
ನನ್ನ ಹಸ್ತ ವಿನ್ಯಾಸಗಳೆಲ್ಲವೂ ನಿನ್ನನ್ನು ಸಂತೋಷಗೊಳಿಸುವ ಮುದ್ರೆಯಾಗಲಿ, ನನ್ನ
ನಡೆಯೆಲ್ಲವೂ ನಿನ್ನ ಪ್ರದಕ್ಷಿಣೆಯಾಗಲಿ, ನನ್ನ ದೈನಂದಿನ ಆಹಾರವೆಲ್ಲವೂ ನಿನಗೆ
ಅರ್ಪಿಸಬೇಕಾದ ಯಜ್ಞಹವಿಸ್ಸಾಗಲಿ, ನಾನು ಕಾಲನ್ನು ನೀಡಿ ಮಲಗುವುದೇ ನಿನ್ನ
ಪ್ರಣಾಮವೂ ಆಗಲಿ. ಹೀಗೆ ಆತ್ಮಾರ್ಪಣಬುದ್ಧಿಯಿಂದ ನಾನು ಪಡುವ ಸುಖವೆಲ್ಲವೂ
ನಿನ್ನ ಪೂಜೆಯ ಪರ್ಯಾಯವೇ ಆಗಲಿ.
1
28. ಸುಧಾಮಪ್ಪಾಸ್ವಾದ-P. 70.
ಶಕ್ತಿಯ ಕರ್ಣಭೂಷಣದಿಂದಲೇ ಶಿವನ ಅಮೃತತ್ವ
(ಅಪಮೃತ್ಯು ನಿವಾರಣಾದಿ)
ಓ ತಾಯಿ ! ಬ್ರಹ್ಮಂದ್ರಾದಿ ದೇವತೆಗಳೆಲ್ಲರೂ ಭಯಂಕರವಾದ ಜರಾ
ಮರಣಗಳನ್ನು ಹಿಂಗಿಸುವ ಅಮೃತವನ್ನೇ ಪಾನಮಾಡಿದ್ದರೂ ಎಂದಾದರೊಂದು ದಿನ
ಮೃತ್ಯುವಿಗೆ ಈಡಾಗಲೇ ಬೇಕಾಗಿದೆ. ಆದರೆ ಸದಾಶಿವನು ಮಾತ್ರ ಕಾಲಕೂಟ ವಿಷ
ವನ್ನೇ ನುಂಗಿದರೂ ಎಂದೆಂದಿಗೂ ಮರಣಕ್ಕೆ ತುತ್ತಾಗಲಾರನು, ಇದು ಹೀಗಾಗಲು
ನಿನ್ನ ಕರ್ಣಭೂಷಣಗಳ ಮಹಿಮೆಯೇ ಕಾರಣ.
29. ಕಿರೀಟು ವೈರಿಂಚಂ-P. 70.
ದೇವಿಗೆ ಸದಾಶಿವನಲ್ಲಿರುವ ಗೌರವ
( ಮೂರ್ಖವಶ್ಯತೆ)
ಓ ದೇವಿ ! ಬ್ರಹ್ಮ ವಿಷ್ಣು ಮತ್ತು ಇಂದ್ರರು ನಿನಗೆ ಸಾಷ್ಟಾಂಗ
ಪ್ರಣಾಮವನ್ನು ಮಾಡುತ್ತಿರುವಾಗ, ಸದಾಶಿವನು ಬಂದಿದ್ದನ್ನು ತಿಳಿದು ಅವನನ್ನು
ಸಡಗರದಿಂದ ಎದುರುಗೊಳ್ಳಲು ನೀನು ಏಳುವೆಯಲ್ಲವೇ ? ಆಗ "ಓ ತಾಯಿ!
"ಮುಂದೆ ಬ್ರಹ್ಮನ ಕಿರೀಟವಿದೆ, ಅದನ್ನು ದೂರಮಾಡು, ಈ ಕಡೆ ವಿಷ್ಣುವಿನ ಕಠೋರ
ವಾದ ಕಿರೀಟವನ್ನು ಎಡವೀಯೆ ! ಆ ಕಡೆ ಇಂದ್ರನ ಕಿರೀಟವನ್ನು ದಾಟಿ ಹೋಗು."
ಇತ್ಯಾದಿಯಾದ ನಿನ್ನ ಪರಿಜನರು ನಿನ್ನನ್ನು ಕುರಿತು ಹೇಳುವುದು ಎಷ್ಟು ಉತ್ತಮ
ವಾದ ಭಾವವನ್ನು ಕೊಡುವ ಮಾತುಗಳಾಗಿವೆ.
30. ಸ್ವದೇಹೋದ್ಧೂತಾಭಿಃ-P. 71.
ದೇವಿಯ ಐಕ್ಯಭಾವೋಪಾಸನೆ
(ಅಣಿಮಾದ್ಯಷ್ಟಸಿದ್ಧಿ, ಪರಕಾಯ ಪ್ರವೇಶ ಆಗ್ನಿಸ್ತಂಭನ)
CC-0. Jangamwadi Math Collection. Digitized by eGangotri