This page has not been fully proofread.

३२६
 
सौन्दर्यलहरी
 
24.
 
ಜಗತ್ ಸೂತೇ ಧಾತಾ-P. 65.
 
ದೇವಿಯೇ ಕ್ರಿಯಾಶಕ್ತಿ ಸ್ವರೂಪಿಣಿ
(ಭೂತ ಪ್ರೇತ ಪಿಶಾಚ, ಅಪಸ್ಮಾರಾದಿ ನಿವೃತ್ತಿ)
 
ಓ ದೇವಿ! ಕ್ಷಣಮಾತ್ರ ಚಲಿಸುವ ನಿನ್ನ ಭೂಲತೆಯ ಅಪ್ಪಣೆಯನ್ನು ಪಡೆದ
ಸದಾಶಿವನು ಬ್ರಹ್ಮಾದಿದೇವತೆಗಳಿಗೂ ಆಯಾ ಕ್ರಿಯಾಶಕ್ತಿಯನ್ನು ದಯಪಾಲಿಸು
ವನು. ಅದರಿಂದಲೇ ಬ್ರಹ್ಮನು ಜಗತ್ತನ್ನು ಸೃಷ್ಟಿಸುವನು. ವಿಷ್ಣುವು ಅದನ್ನು ಪಾಲಿಸು
ವನು. ರುದ್ರನು ಅದನ್ನು ಸಂಹರಿಸುವನು, ಮಹೇಶ್ವರನು ಈ ಮೂವರನ್ನೂ ಉಪ
ಸಂಹರಿಸಿ ತನ್ನ ಶರೀರವನ್ನೂ ಮರೆಸಿಕೊಳ್ಳುವವನಾಗುತ್ತಾನೆ.
 
25. ತಯಾಣಾಂ ದೇವಾನಾಂ-P, 66,
ದೇವಿಯ ಪೂಜೆಯೇ ತ್ರಿಮೂರ್ತಿಗಳಿಗೂ ತಲುಪುವುದು
(ಸ್ಥಾನಮಾನಲಾಭ)
 
ಓ ಶಿವೇ ! ಭಕ್ತನು ನಿನ್ನ ಪಾದಾರವಿಂದಗಳಲ್ಲಿ ಯಾವ ಪೂಜೆಯನ್ನು
ಸಲ್ಲಿಸುವನೋ ಆ ಪೂಜೆಯೇ ನಿನ್ನ ಸರಜಸ್ತಮಸ್ಸು ಗಳಿಂದ ಆವಿರ್ಭವಿಸಿದ ಬ್ರಹ್ಮ
ವಿಷ್ಣು ಮಹೇಶ್ವರರಿಗೂ ಸಲ್ಲುವುವು. ಏಕೆಂದರೆ ಇವರೆಲ್ಲರೂ ನೀನು ನಿನ್ನ ಪಾದಾರ
ವಿಂದಗಳನ್ನು ಇಟ್ಟಿರುವ ಮಣಿಪೀಠದ ಸಮೀಪದಲ್ಲಿ ತಮ್ಮ ಶಿರಸ್ಸುಗಳ ಮೇಲೆ ಕೈ
ಗಳನ್ನು ಜೋಡಿಸಿಕೊಂಡು ಯಾವಾಗಲೂ ನಿಂತಿರುವರಲ್ಲವೇ !
 
26.
 
ವಿರಿಂಚಿ: ಪಂಚತ್ವಂ-P. 67.
ಶಿವನ ಶಾಶ್ವತತೆ
 
(ಸರ್ವಸಿದ್ಧಿ, ಶತ್ರು ಜಯ)
 
ಓ ಸತಿ । ಪ್ರಳಯಕಾಲದಲ್ಲಿ ಬ್ರಹ್ಮ ವಿಷ್ಣು ಯಮ ಕುಬೇರ ಮತ್ತು
ಇಂದ್ರ ಮೊದಲಾದ ಎಲ್ಲರೂ ಕಣ್ಣು ಮುಚ್ಚಿ ಮರಣವನ್ನು ಹೊಂದುವರು. ಆದರೆ ನಿನ್ನ
ಪತಿಯಾದ ಸದಾಶಿವನೊಬ್ಬನೇ ಇದರ ವೇಗಕ್ಕೆ ಸಿಗದೇ ಶಾಶ್ವತವಾಗಿ ವಿಹರಿಸುತ್ತಾನೆ.
 
27, ಜಪೋ ಜಲ್ಪತಿ ಶಿಲ್ಪಂ-P. 68.
ಎಲ್ಲ ಕರ್ಮಗಳೂ ಸೇವಾರೂಪವಾಗುವಂತೆ ಪ್ರಾರ್ಥನೆ
(ಮಂತ್ರ-ದೇವತಾ ಆತ್ಮಗಳ ಸಿದ್ಧಿ)
 
CC-0. Jangamwadi Math Collection. Digitized by eGangotri