This page has not been fully proofread.

सौन्दर्यलहरी
 
೩೪
 
ವವರು, ಮಹಾತ್ಮರ ಭಾವಭಂಗಿಗಳಿಂದ ಆಸ್ವಾದನೀಯವೂ, ಸರಸ್ವತಿಯ ಮುಖ
ಕಮಲದ ಪರಿಮಳದಿಂದ ಭರಿತವೂ ಆದ ಮಧುರವಾದ ವಾಕ್ಕುಗಳಿಂದ ಕಾವ್ಯ
ರಾಶಿಯನ್ನೇ ಹೊರಹೊಮ್ಮಿಸುವವರಾಗುತ್ತಾರೆ.
 
18. ತನುಚ್ಛಾಯಾಭಿಸ್ತೀ-P, 57,
ದೇವವೇಶೈಯರನ್ನೂ ಆಕರ್ಷಿಸುವ ದೇವೀಸೌಂದರ್ಯ
(ಸಕಲಪ್ರಾಣಿವಶ್ಯತೆ)
 
ಓ ದೇವಿ ! ಬಾಲಸೂರ್ಯನ ಕಿರಣಗಳ ಕಾಯ್ದೆಯನ್ನು ಹೊಂದಿರುವ ನಿನ್ನ
ದೇಹಕಾನ್ತಿಯಿಂದ ದ್ಯಾವಾಪೃಥಿವಿಗಳೆಲ್ಲವೂ ಎಳೆಗೆಂಪು ಬಣ್ಣವುಳ್ಳದ್ದಾಗಿದೆಯೆಂದು
ಯಾವನು ಧ್ಯಾನಿಸುವವನೋ, ಅವನಿಗೆ ಹೆದರಿದ ಕಾಡುಜಿಂಕೆಯಂತೆ ಆಕರ್ಷ
ಣೀಯವಾದ ಕಣ್ಣ ಳುಳ್ಳಊರ್ವಶೀ ಮೊದಲಾದ ದೇವವೇಶ್ಯಯರೂ ಸಹ ವಶರಾಗುವರು.
 
19. ಮುಖ ಬಿದ್ದುಂ ಕೃತ್ವಾ-P. 58,
ಸುಂದರಿಯರೆಲ್ಲರನ್ನೂ ಆಕರ್ಷಿಸುವ ದೇವಿಯ ಅದ್ಭುತಸೌಂದರ್ಯವರ್ಣನೆ
(ರಾಜ ರಾಕ್ಷಸ ಮೃಗ ಸ್ತ್ರೀಯರ ವಶ್ಯ)
 
ಓ ದೇವಿ ! ಯಾವನು ವನಿತೆಯರ ಮುಖವನ್ನೇ ಬಿಂದುವಾಗಿರಿಸಿ, ಅದರ
ಕೆಳಗೆ ಕುಚಗಳನ್ನೂ ಅದರ ಕೆಳಗೆ ಶಕ್ತಿರೂಪವಾದ ಯೋನಿಯನ್ನೂ ಭಾವಿಸಿ ಆ
ಸ್ಥಾನಗಳಲ್ಲಿ ನಿನ್ನ ಕಾಮರಾಜ ಬೀಜವನ್ನು ಧ್ಯಾನಿಸುವನೋ ಅವನು, ಕೂಡಲೇ ಆ
ವನಿತೆಯರ ಚಿತ್ರ ವಿಕಾರವನ್ನು ಮಾಡಬಲ್ಲನು, ಎಂಬುವುದು ಬಹಳ ಸಣ್ಣ ವಿಷಯವೇ
ಸರಿ ಏಕೆಂದರೆ ಅವನು ಸೂರ್ಯಚಂದ್ರರನ್ನೇ ಸ್ತನಗಳನ್ನಾಗಿಯುಳ್ಳ ಮೂರು
ಲೋಕಗಳನ್ನೂ ಸಹ ಮೋಹಗೊಳಿಸಬಲ್ಲನಲ್ಲವೇ ?
 
20, ಕಿರಮಭ್ಯ -P. 60.
ಜ್ವರಪರಿಹಾರಕವಾದ ದೇವೀಧ್ಯಾನ
 
(ವಿಷಶಾನ್ತಿ, ಜ್ವರನಿವೃತ್ತಿ)
 
ಓ ದೇವಿ!
 
ನಿನ್ನ ಅಂಗಗಳ ಕಿರಣರಾಶಿಯಿಂದಲೇ ಅಮೃತರಸವನ್ನು
ಯಾವನು ತನ್ನ ಹೃದಯಕಮಲದಲ್ಲಿ ಧ್ಯಾನಿಸುತ್ತಾನೆಯೋ ಅವನು-ಸರ್ಪಗಳ
ಚಿಮ್ಮಿಸುತ್ತಿರುವ ಚಂದ್ರಕಾಶಿಲಾಮಯವಾದ ಪುತ್ಥಳಿಕೆಯಂತಿರುವ ನಿನ್ನನ್ನು
ಸೊಕ್ಕನ್ನು ತನ್ನ ದೃಷ್ಟಿಯಿಂದಲೇ ಅಡಗಿಸುವ ಗರುಡನಂತೆ, ಅಮೃತಧಾರೆಯನ್ನೇ
ಸಿಂಪಡಿಸುವ ದೃಷ್ಟಿಯಿಂದ ಜ್ವರಪೀಡಿತರನ್ನೂ ಸುಖಪಡಿಸುವನು.
 
CC-0. Jangamwadi Math Collection. Digitized by eGangotri