This page has not been fully proofread.

सौन्दर्यलहरी
 
३२३
 
ದಿಂದ ಕೂಡಿದ ಸ್ವಾಧಿಷ್ಠಾನದಲ್ಲಿ 62 ಕಿರಣಗಳಿವೆ. ವಾಯುತತ್ತ್ವದಿಂದ ಕೂಡಿದ
ಅನಾಹತ ಚಕ್ರದಲ್ಲಿ 54 ಕಿರಣಗಳಿವೆ. ಆಕಾಶತತ್ತ್ವದಿಂದ ಕೂಡಿದ ವಿಶುದ್ಧಿ ಚಕ್ರದಲ್ಲಿ
72 ಕಿರಣಗಳಿವೆ. ಮನಸ್ತದಿಂದ ಕೂಡಿದ ಆಜ್ಞಾಚಕ್ರದಲ್ಲಿ 64 ಕಿರಣಗಳಿವೆ.
ಹೀಗೆ ಪಟ್ಟಕಗಳಲ್ಲಿ ಇರುವ 360 ಕಿರಣಗಳ ಪುಂಜದ ಮೇಲೆ ನಿನ್ನ ಪಾದಾರವಿಂದ
ಗಳೆರಡೂ ಬೆಳಗುತ್ತಿರುವುವು.
 
15. ಶರಜ್ಯೋತ್ಸಾಶುದ್ಧಾಂ-P, 51.
ದೇವಿಯ ಸ್ವರೂಪವೇ ಮಧುರವಾಣಿಯ ಉಗಮಸ್ಥಾನ
(ಕವಿತ್ವ ಮತ್ತು ಜ್ಞಾನಗಳ ಪ್ರಾಪ್ತಿ)
 
ಓ ದೇವಿ ! ನೀನು ಶರತ್ಕಾಲದ ಬೆಳದಿಂಗಳಂತೆ ಶುಭ್ರಳಾಗಿದೀಯೆ. ಚಂದ್ರನ
ಕಲೆಯಿಂದ ಕೂಡಿದ ಜಟಾಭಾರವೇ ನಿನ್ನ ಕಿರೀಟವಾಗಿದೆ. ವರದ ಮುದ್ರೆಯೂ
ಅಭಯ ಮುದ್ರೆಯೂ, ಸ್ಪಟಿಕಮಣಿಯ ಅಕ್ಷರಮಾಲೆಯೂ (ಬಟ್ಟಲೂ) ಜ್ಞಾನ
ಮುದ್ರೆಯೂ (ಪುಸ್ತಕವೂ) ನಿನ್ನ ನಾಲ್ಕು ಕೈಗಳನ್ನೂ ಅಲಂಕರಿಸಿವೆ. ಇಂತಹ
ನಿನ್ನನ್ನು ಒಮ್ಮೆಯಾದರೂ ನಮಸ್ಕರಿಸದಿದ್ದರೆ ಮಧುಕ್ಷೀರದ್ರಾಕ್ಷಿಗಳ ಮಾಧುರ್ಯವನ್ನು
ಹೊರಹೊಮ್ಮಿಸುವ ವಾಕ್ಷವಾಹಗಳು ಹೇಗೆ ತಾನೇ ಉದ್ಭವಿಸೀತು!
 
16. ಕಾಣಾಂ ಚೇತಃ-P. 52,
 
ನವರಸಭರಿತವಾದ ವಾಣಿಯ ಪ್ರಕಾಶಕ್ಕೆ ಮೂಲವಾದ ದೇವಿಯ ಧ್ಯಾನ
(ವೇದಶಾಸ್ತ್ರಾದಿಜ್ಞಾನಲಾಭ)
 
ಓ ದೇವಿ ! ಮಹಾಕವಿಗಳ ಹೃದಯಕಮಲವನ್ನರಳಿಸುವ ಎಳೆಬಿಸಿಲಿನಂತೆ
ಅರುಣವರ್ಣಗಳಿಂದ ನಿನ್ನನ್ನು ಯಾವ ಸಜ್ಜನರು ಭಜಿಸುವರೋ, ಅವರು ಬ್ರಹ್ಮನ
ಪ್ರೇಯಸಿಯಾದ ಸರಸ್ವತಿಯ ನವಯೌವನದ ಶೃಂಗಾರ ರಸಪ್ರವಾಹದಿಂದ ಗಂಭೀರ
ವಾದ ವಾಗ್ವಿಲಾಸವನ್ನು ಹೊಂದಿ, ಅದರ ಮೂಲಕ ಅನೇಕ ಸಹೃದಯರ ಹೃದಯ
ಗಳನ್ನೂ ರಂಜಿಸಲು ಸಮರ್ಥರಾಗುವರು.
 
17.
 
ಸವಿತ್ರಿ ಭಿರ್ವಾಚಾಂ-P. 54.
ಕವಿತಾಮೂಲವಾದ ದೇವಿಯ ಧ್ಯಾನ
(ಸರ್ವಕಲಾಜ್ಞಾನ)
 
ಓ ದೇವಿ ! ವಾಹ್ಮಯಕ್ಕೆ ತವರೂರಾದ, ಚಂದ್ರ ಕಾನ್ತ ಶಿಲಾಖಂಡದಂತೆ
ಅದ್ಭುತವಾದ ಕಾನಿಯುಳ್ಳ ವಶಿನ್ಯಾದಿ ಶಕ್ತಿಗಳೊಡನೆ ಕೂಡಿದ ನಿನ್ನನ್ನು ಧ್ಯಾನಿಸು
 
CC-0. Jangamwadi Math Collection. Digitized by eGangotri