This page has not been fully proofread.

सौन्दर्यलहरी
 
३२२
 
ಎಂಟು ಮತ್ತು ಹದಿನಾರು ದಳಗಳಿಂದ ಕೂಡಿರುವ ಎರಡು ಕಮಲಗಳಿಂದಲೂ ಮೂರು
ಮೇಖಲೆಗಳಿಂದಲೂ ಮೂರು ಭೂಪುರಗಳಿಂದಲೂ ಈ ರೀತಿ ಒಟ್ಟು ನಲವತ್ತನಾಲ್ಕು
ಕೋಣಗಳಿಂದ ಅಲಂಕರಿಸಲ್ಪಟ್ಟಿದೆ.
 
12. ತ್ವದೀಯಂ ಸೌರ್ಯಂ-P. 44,
ದೇವೀಸೌಂದರ್ಯದ ಅನಿರ್ವಣ್ರನೀಯತೆ
 
(ಕವಿತ್ವ ಮತ್ತು ವಶಿತ್ವಸಿದ್ಧಿ)
 
ಓ ದೇವಿ ! ಬ್ರಹ್ಮದೇವನೇ ಮೊದಲಾದ ಮಹಾಕವಿಗಳೂ ಸಹ ನಿನ್ನ
ಸೌಂದರ್ಯವನ್ನು ಬಣ್ಣಿಸಲು ಸಮರ್ಥರಲ್ಲ. ದೇವಸ್ತ್ರೀಯರೂ ಸಹ ನಿನ್ನ ಸೌಂದರ್ಯ
ವನ್ನು ನೋಡಬೇಕೆಂಬ ಉತ್ಸುಕತೆಯಿಂದ, ತಪೋಮೂಲಕವಾಗಿಯೂ ಹೊಂದಲಸಾಧ್ಯ
ವಾದ ಶಿವನೊಂದಿಗೆ ಏಕೀಭೂತರಾಗಿ ಕಲೆಯುವ ದಾರಿಯೊಂದನ್ನೇ ತಮ್ಮ ಮನೋ
ಭೂಮಿಕೆಗಳಲ್ಲಿ ಹೊಂದುತ್ತಿರುವರು.
 
13. ನರಂ ವರ್ಷಿಯಾಂಸಂ-P, 45,
 
ದೇವಿಯ ಕಡೆಗಣ್ ನೋಟದ ಪ್ರಭಾವ
(ವಶ್ಯ)
 
ಓ ದೇವಿ! ಯಾವನೇ
 
ಒಬ್ಬನು ಬಹಳ ಮುದುಕನೇ ಆಗಿರಲಿ, ಕುರುಡನೇ
ಆಗಿರಲಿ, ಅಥವಾ ರತಿಕಲೆಯನ್ನೇ ಅರಿಯದ ಮೂಢನೇ ಆಗಿ ಪತಿತನಾಗಿರಲಿ, ಅಂತಹ
ವನು ಏನಾದರೂ ನಿನ್ನ ಕಡೆಗಣ್ನೋಟಕ್ಕೆ ಪಾತ್ರನಾದರೆ ಅವನನ್ನು ನೂರಾರು
ಯುವತಿಯರು, ತಮ್ಮ ಜಡೆಗಳು ಸಡಿಲವಾಗಿ ಬಿಚ್ಚಿ ಹೋಗುತ್ತಿದ್ದರೂ, ಸ್ತನಗಳಿಂದ
ಸೆರಗುಗಳು ಜಾರಿಬೀಳುತ್ತಿದ್ದರೂ, ಆಕಸ್ಮಿಕವಾಗಿ ಒಡ್ಯಾಣಗಳು ಕಿತ್ತು ಹೋಗುತ್ತಿದ್ದರೂ
ಮತ್ತು ಸೀರೆಗಳೇ ಜಾರಿಹೋಗುತ್ತಿದ್ದರೂ ಅವುಗಳನ್ನು ಗಮನಿಸದೇ ಹಿಂಬಾಲಿಸುತ್ತಿರು
 
ತಾರೆ.
 
14, ಕ್ಷಿತ್ ಷಟ್ನಂಚಾಶತ್-P. 46.
ದೇವಿಯ ಪಾದಾಂಕಿತವಾದ ಪಟ್ಟಕಗಳ ಕಿರಣವಿಭಾಗ
(ರೋಗ ಮತ್ತು ದುರ್ಭಿಕ್ಷಬಾಧೆಗಳ ನಿವೃತ್ತಿ)
 
ಓ ದೇವಿ! ಸೃಥಿವೀತತ್ತ್ವದಿಂದ ಕೂಡಿದ ಮೂಲಾಧಾರದಲ್ಲಿ 56 ಕಿರಣ
ಗಳಿವೆ. ಅಪ್‌ತತ್ತ್ವದಿಂದ ಕೂಡಿದ ಮಣಿಪೂರದಲ್ಲಿ 52 ಕಿರಣಗಳಿವೆ. ತೇಜಸ್ತತ
 
CC-0. Jangamwadi Math Collection. Digitized by eGangotri