This page has not been fully proofread.

सौन्दर्यलहरी
 
8. ಸುಧಾಸಿನರ್ಮ-P. 15.
ದೇವೀಪೀಠವರ್ಣನ
 
(ಕಾರಾಗೃಹನಿವೃತ್ತಿ, ಸಕಲಕಾರ್ಯಜಯ)
 
ಓ ದೇವಿ ! ನೀನು ಅಮೃತಸಾಗರದ ಮಧ್ಯದಲ್ಲಿರುವ ಕಲ್ಪವೃಕ್ಷದ
ತೋಪುಗಳಿಂದ ಸುತ್ತುವರಿಯಲ್ಪಟ್ಟ ಮಣಿಮಯವಾದ ದ್ವೀಪದಲ್ಲಿರುವ ಕದಂಬವನ
ದಿಂದ ಕೂಡಿದ ಚಿನ್ಹಾ ಮಣಿ ಗೃಹದಲ್ಲಿ ಶಿವಾಕಾರವಾದ ಮಂಚದಮೇಲೆ ಪವಡಿಸಿರುವ
ಪರಮಶಿವನೆಂಬ ಸುಪ್ಪತ್ತಿಗೆಯಮೇಲೆ ಬೆಳಗುತ್ತೀಯಲ್ಲವೇ ? ಅಂತಹ ಆನಂದಮಯಿ
ಯಾದ ನಿನ್ನನ್ನು ಧನ್ಯರಾದ ಕೆಲವರು ಮಾತ್ರ ಭಜಿಸುವರಷ್ಟೇ !
 
9. ಮಹೀಂ ಮೂಲಾಧಾರೇ-P. 18.
ದೇವಿಯ ವಿಹಾರಮಾರ್ಗಗಳು
 
(ಪಂಚಭೂತಜಯ, ದೇಶಾಂತರಕ್ಕೆ ಹೋದವನ ಶೀಘ್ರಾಗಮನ)
 
ಓ ದೇವಿ ! ನೀನು, ಮೂಲಾಧಾರದಲ್ಲಿರುವ ಭೂತತ್ತ್ವವನ್ನೂ, ಮಣಿ
ಪೂರದಲ್ಲಿರುವ ಜಲತತ್ತ್ವವನ್ನೂ, ಸ್ವಾಧಿಷ್ಠಾನದಲ್ಲಿರುವ ಅಗ್ನಿ ತತ್ತ್ವವನ್ನೂ, ಅನಾಹತ
ದಲ್ಲಿರುವ ವಾಯುತತ್ತ್ವವನ್ನೂ, ವಿಶುದ್ಧಿ ಚಕ್ರದಲ್ಲಿರುವ ಆಕಾಶತತ್ತ್ವವನ್ನೂ, ಭೂ
ಮಧ್ಯದ ಆಜ್ಞಾಚಕ್ರದಲ್ಲಿರುವ ಮನಸ್ತವನ್ನೂ, ಹೀಗೆ ಎಲ್ಲ ತತ್ತ್ವಗಳನ್ನೂ
ಭೇದಿಸಿ, ಸಹಸ್ರದಳ ಕಮಲದಲ್ಲಿ ನಿನ್ನ ಪತಿಯೊಂದಿಗೆ ಏಕಾಂತದಲ್ಲಿ ವಿಹರಿಸುತ್ತಿರುವೆ.
10. ಸುಧಾಧಾರಾಸಾರೈ:-P. 22,
 
ದೇವಿಯ ವಿಶ್ರಾನಿಧಾಮವರ್ಣನೆ,
(ದೃಷ್ಯ, ಸ್ತ್ರೀಯರ ರಜೋದರ್ಶನ)
 
ಓ ದೇವಿ ! ನೀನು, ನಿನ್ನ ಪಾದಾರವಿಂದಗಳ ಮೂಲಕ ಪ್ರವಹಿಸುವ
ಅಮೃತಧಾರೆಗಳಿಂದ ನನ್ನ ಪಿಂಡಾಂಡದ ನಾಡಿಗಳೆಲ್ಲವನ್ನೂ ತೋಯಿಸಿ ಅಮೃತಕಿರಣ
ನಾದ ಚಂದ್ರನಿಂದ ಮತ್ತೆ ನಿನ್ನ ಭೂಮಿಕೆಯಾದ ಮೂಲಾಧಾರಕ್ಕೆ ಹಿಂತಿರುಗಿ ಸುತ್ತಿ
ಮಲಗಿರುವ ಸರ್ಪದಂತೆ ನಿನ್ನ ಸ್ವರೂಪವನ್ನು ಸ್ವೀಕರಿಸಿ ಸೂಕ್ಷ್ಮವಾದ ರಂಧ್ರದಿಂದ
ಕೂಡಿರುವ ಆಧಾರ ಚಕ್ರದಲ್ಲಿ ನಿದ್ದೆ ಮಾಡುವವಳಾಗುತ್ತೀಯೆ.
 
11, ಚತುರ್ಭಿಃ ಅಕ-P, 26,
ಶ್ರೀಚಕ್ರದ ಸ್ವರೂಪ
(ವಂಧ್ಯಾದೋಷನಿವೃತ್ತಿ)
 
ಓ ದೇವಿ ! ನಿನ್ನ ಆವಾಸಸ್ಥಾನವಾದ ಶ್ರೀಚಕ್ರವು-ಪ್ರತ್ಯೇಕಿಸಲ್ಪಟ್ಟ ನಾಲ್ಕು
ಶಿವಚಕ್ರಗಳು ಮತ್ತು ಐದು ಶಕ್ತಿ ಚಕ್ರಗಳೆಂಬ ಒಂಭತ್ತು ಮೂಲ ಪ್ರಕೃತಿಗಳಿಂದಲೂ,
 
21
 
CC-0. Jangamwadi Math Collection. Digitized by eGangotri