This page has not been fully proofread.

सौन्दर्यलहरी
 
ಅಭಿನಯಿಸುತ್ತಿಲ್ಲ. ಕಾರಣ ನಿನ್ನ ಪಾದಗಳೇ ಭಕ್ತರನ್ನು ಭಯಗಳಿಂದ ಕಾಪಾಡಿ
ಅವರ ಎಲ್ಲ ಇಷ್ಟಾರ್ಥಗಳನ್ನೂ ನೆರವೇರಿಸಲು ಚೆನ್ನಾಗಿ ಕಲಿತಿವೆಯಲ್ಲವೇ ?
5. ಹರಿಸ್ಸಾ ಮಾರಾಧ್ಯ-P.9.
 
ದೇವಿಯ ಸೌಂದರ್ಯ ಮಹಿಮ
(ಸಕಲಜನಸಂಮೋಹನ, ಪುರುಷವಶ್ಯತೆ)
 
ಓ ದೇವಿ ! ನನ್ನತೆಯಿಂದ ಬಾಳುವವರಿಗೆ ನೀನು ಎಲ್ಲ ಸೌಭಾಗ್ಯವನ್ನೂ
ದಯಪಾಲಿಸುತ್ತೀಯೆ. ನಿನ್ನ ಪೂಜೆಯಿಂದಲೇ ವಿಷ್ಣುವೂ ಎಲ್ಲರನ್ನು ಸೂರೆಗೊಳ್ಳುವ
ಸೌಂದರ್ಯದೊಂದಿಗೆ ಹೆಣ್ಣಿನ ವೇಷವನ್ನು ತಾಳಿದನು. ಮತ್ತು ಪುರಾರಿಯನ್ನು
ಮೋಹಗೊಳಿಸಿದನು. ಹಾಗೆಯೇ ಕಾಮದೇವನೂ ಸಹ ನಿನ್ನನ್ನು ನಮಿಸಿಯೇ ರತಿಯ
ಕಣ್ಣಳನ್ನು ತಣಿಸುವ ರೂಪವನ್ನು ಪಡೆದಿದ್ದು, ಇಂದಿಗೂ ಅವನು ಎಂತಹ ಮಹಾ
ತಪಸ್ವಿಗಳನ್ನೂ ಮೋಹದ ಬಲೆಗೆ ಸಿಲುಕಿಸುವುದೂ ನಿನ್ನ ಮಹಿಮೆಯಿಂದಲೇ,
6. ಧನು: ಪೌಷ್ಪಂ ಮೌರ್ವಿ-P, 12,
ಭಗವತಿಯ ಕೃಪಾಪ್ರಭಾವ
 
३२०
 
(ಪುತ್ರಾ ವಾಪ್ತಿ)
 
ಓ ದೇವಿ ! ಮನ್ಮಥನನ್ನು ನೋಡಿದರೆ
 
ಅವನಲ್ಲಿರುವುದು ಪುಷ್ಪಮಯವಾದ
ಧನುಸ್ಸು. ಅಲ್ಲಿ ಸಾಲಾಗಿ ಬಂದು ನೆರೆಯುವ ದುಂಬಿಗಳೇ ಅದರ ಹೆದೆ, ಪ್ರಯೋಗಿಸ
ಬಹುದಾದ ಬಾಣಗಳಾದರೂ ಐದೇ. ಆತನ ಸಚಿವನೋ ವಸಂತ, ಮಲಯದ
ಕಡೆಯಿಂದ ಬೀಸುವ ತಂಗಾಳಿಯೇ ಆತನು ಯುದ್ಧಕ್ಕಾಗಿ ಆರಿಸಿಕೊಂಡ ರಥ. ಹೀಗೆ
ಪರರನ್ನು ಗೆಲ್ಲಲು ಬೇಕಾದ ಯಾವ ಬಲವೂ ಅವನಲ್ಲಿ ಇಲ್ಲದಿದ್ದರೂ, ಕೇವಲ ನಿನ್ನ
ದೊಂದು ಕೃಪೆಯನ್ನು ಮಾತ್ರ ಪಡೆದ ಇವನು ಜಗತ್ತನ್ನೇ ಗೆಲ್ಲುತ್ತಿರುವವನಲ್ಲವೇ ?
7. ಕ್ಷಣತ್ಕಾಂಚೀದಾಮಾ-P. 14,
ದೇವಿಯ ದಿವ್ಯಮೂರ್ತಿಸ್ಮರಣೆ
 
(ಶತ್ರು ಜಯ)
 
ತ್ರಿಪುರಾನ್ನಕನ ಮಹದಾಶಯವನ್ನು ಅಂತೆಯೇ ಹೊರಗೆಡಹುವ ಆಶ್ಚರ್ಯ
ಶಕ್ತಿಯುತಳಾದ ಈ ದೇವಿಯು ನಮ್ಮ ದೃಷ್ಟಿಗೆ ವಿಷಯವಾಗಲಿ, ಈಕೆಯ ಮೂರ್ತಿ
ಯಾದರೂ ಎಷ್ಟು ಸುಂದರವಾಗಿದೆ ! ಮಧುರವಾಗಿ ಧ್ವನಿಗೈಯುವ ಗೆಜ್ಜೆಗಳಿಂದ
ಕೂಡಿದ ಒಡ್ಯಾಣವನ್ನು ಧರಿಸಿದೆ. ಮರಿಯಾನೆಯ ಕುಂಭಸ್ಥಳಗಳಂತಿರುವ ಕುಚಗಳ
ಭಾರದಿಂದ ಕೊಂಚ ಬಾಗಿದೆ. ಕೃಶವಾದ ನಡು, ಶರತ್ಕಾಲದ ಪೂರ್ಣಚಂದ್ರನಂತಿರುವ
ಮುಖಬಿಂಬ, ನಾಲ್ಕು ಕೈಗಳಲ್ಲಿ ಕ್ರಮವಾಗಿ ಬಿಲ್ಲು ಬಾಣ ಪಾಶ ಮತ್ತು ಅಂಕುಶಗಳು
 
ಬೆಳಗುತ್ತಿರುವುವು.
 
CC-0. Jangamwadi Math Collection. Digitized by eGangotri