This page has not been fully proofread.

ಸೌಂದರ್ಯಲಹರಿಯ ಕನ್ನಡ ಅನುವಾದ
 
1. ಶಿವಃ ಶಕ್ತಾಯುಕ್ತ:-P. 1.
ಪರಾಶಕ್ತಿಯ ಮಹಿಮೆ
(ಸಕಲಕಾರ್ಯಜಯ, ಸಕಾಲಾಭಿವೃದ್ಧಿ)
 
ಓ ಭಗವತಿ ! ಶಿವನು ಈ ಎಲ್ಲ ಜಗತ್ತನ್ನೂ ಸೃಷ್ಟಿಸಲು ಸಮರ್ಥ
ನಾಗುವುದು, ಕೇವಲ, ಶಕ್ತಿರೂಪಿಣಿಯಾದ ನಿನ್ನೊಂದಿಗೆ ಕಲೆತಾಗ ಮಾತ್ರ. ಅನ್ಯಥಾ
ಆತನು ಚಲಿಸಲಾರನು, ಹರಿಹರ ಬ್ರಹ್ಮಾದಿಗಳಿಗೂ ನೀನು ಆರಾಧ್ಯಳಾಗಿದ್ದೀಯೆ
ಇಂತಹ ನಿನ್ನನ್ನು ಸ್ತುತಿಸಲೂ ನಮಿಸಲೂ ಸಹ ಪುಣ್ಯವಿರಬೇಕಲ್ಲವೇ !
 
2, ತನೀಯಾಂಸಂ ಪಾಂಸು-P. 4,
 
ತ್ರಿಮೂರ್ತಿಗಳ ಮೇಲೆ ದೇವಿಯ ಪಾದಧೂಳಿಯ ಪ್ರಭಾವ.
(ಸರ್ವಲೋಕವಶ್ಯತೆ, ಪ್ರಕೃತಿಜಯ)
 
ಬ್ರಹ್ಮದೇವನು ಈ ಹದಿನಾಲ್ಕು ಲೋಕಗಳನ್ನೂ ಪೂರ್ಣವಾಗಿ ಸೃಷ್ಟಿಸ
ಬೇಕಾದರೆ ಅದು ನಿನ್ನ ಪಾದಧೂಳಿಯ ಪ್ರಭಾವದಿಂದ. ಅವನು ಸೃಷ್ಟಿಸುವ ಮುನ್ನ
ನಿನ್ನ ಪದಕಮಲಗಳಲ್ಲಿ ಸೇರಿಕೊಂಡಿರುವ ಅತಿಸೂಕ್ಷ್ಮವಾಗಿ ಧೂಳಿಯ ಕಣವನ್ನು
ಆರಿಸಿಕೊಳ್ಳುವನು. ಇದನ್ನೇ ವಿಷ್ಣುವೂ ಸಹ ಹೇಗೋ ಸಾವಿರಾರು ತಲೆಗಳ ಮೂಲಕ
ಧರಿಸುವನು. ನಂತರ ಪ್ರಳಯಕಾಲವು ಸಮೀಪಿಸಿದಾಗ ರುದ್ರನೂ ಇದನ್ನೇ ಪುಡಿಮಾಡಿ
ವಿಭೂತಿಯರೂಪದಲ್ಲಿ ಧರಿಸುವನು.
 
3. ಅವಿದ್ಯಾನಾಮಸ್ತಸ್ತಿ ಮಿರ P. 6.
ಜೀವಕೋಟಿಯ ಮೇಲೆ ದೇವಿಯ ಪಾದಧೂಳಿಯ ಪ್ರಭಾವ
(ಸರ್ವೈಶ್ವರ್ಯ, ಸರ್ವವೇದಜ್ಞಾನ)
 
ಓ ದೇವಿ ! ನಿನ್ನ ಪಾದಧೂಳಿಯೇ ಮಾನವನ ಅಜ್ಞಾನಾಂಧಕಾರವನ್ನು
ನೀಗುವ ಜ್ಞಾನಸೂರ್ಯನ ಬೀಡಾಗಿದೆ. ಮೂಢಜನರ ಬುದ್ಧಿಯನ್ನು ವಿಕಾಸಪಡಿಸುವ
ಒಂದು ಹೂಗೊಂಚಲಿನ ರಸಪ್ರವಾಹವಾಗಿದೆ. ಇದು ಬಡವರ ಇಷ್ಟಾರ್ಥವನ್ನು
ಈಡೇರಿಸುವ ಚಿನ್ನಾಮಣಿ. ಇದು ಸಂಸಾರಸಾಗರದಲ್ಲಿ ಮುಳುಗಿದವರನ್ನು ಉದ್ಧರಿಸುವ
ಆದಿವರಾಹನ ದನ್ನವಾಗಿದೆ.
 
4. ತ್ವದನ್ಯ: ಪಾಣಿಭಾಂ-P. 8.
ದೇವಿಯ ಪಾದಾರವಿಂದಗಳ ಮಹಿಮ
 
(ಸಾಮ್ರಾಜ್ಯ ಲಾಭ ದಾರಿದ್ರನಾಶ)
 
ಓ ದೇವಿ ! ಎಲ್ಲ ದೇವತೆಗಳೂ ತಮ್ಮ ತಮ್ಮ ಕೈಗಳಲ್ಲಿ ಅಭಯ ಮತ್ತು
ವರದಾನ ಮುದ್ರೆಗಳನ್ನು ಧರಿಸುತ್ತಾರೆ. ಆದರೆ ನೀನು ಮಾತ್ರ ಅದಾವುದನ್ನೂ
 
CC-0. Jangamwadi Math Collection. Digitized by eGangotri