This page has not been fully proofread.

ಸೌಂದರ್ಯಲಹರಿಯು, ಅನುಭವಿಯಾದ ಮಹಾಪುರುಷನೊಬ್ಬನ ಅನ್ತರಂಗ
ದಲ್ಲಿ ನಡೆದ ಮಹಾಶಕ್ತಿಯ ಅದ್ಭುತ ಲೀಲಾವಿಲಾಸಗಳನ್ನು ವಾಕ್ ಶಕ್ತಿಗೆ ತಕ್ಕಂತೆ
ಆಲಂಕಾರಿಕವಾಗಿ ಚಿತ್ರಿಸುವ ಒಂದು ಆರ್ಷಗ್ರಂಥವಾಗಿದೆ. ಇದರ ಮಾಧುರ್ಯ
ವನ್ನು ಸವಿಯಲು ಆಸೆಪಡುವವನೂ ಗ್ರಂಥಕರ್ತನಷ್ಟೇ ಭಾವುಕನಾಗಿರಬೇಕು, ಗ್ರಂಥಿ
ಗಳನ್ನು ಸಡಿಲಿಸಿ ಒಳಗೆ ಅಡಗಿರುವ ತಂತ್ರ ಮಂತ್ರಶಾಸ್ತ್ರಗಳ ಸಾರವನ್ನು ಗುರ್ತಿ
ಸುವವನಾಗಿರಬೇಕು. ದೇವತಾಮೂರ್ತಿಯೊಂದರ ಸ್ತುತಿಯು ಇದರ ಹೊರಮೈ
ಯಾದರೆ, ಇದರ ಒಳಮೈಯೆಲ್ಲವೂ ಸೃಷ್ಟಿ ಸ್ಥಿತಿ ಲಯಗಳ ಮೂಲವಾದ ಜ್ಞಾನೇಚ್ಛಾ
ಕ್ರಿಯಾ ಶಕ್ತಿಗಳ ಮಧುರಮಯವಾದ ಧ್ಯಾನಾಮೃತರಸಾಸ್ವಾದ ಸಾಮ್ರಾಜ್ಯವಾಗಿದೆ.
 
ತತ್ವಜಿಜ್ಞಾಸುಗಳು ಇದರ ರಹಸ್ಯವೆಲ್ಲವನ್ನೂ ' ಗುರುಮುಖಾದೇವ ಅವ
ಗವ್ಯಾ' (P, 82) ಎಂದು ಹೆಜ್ಜೆ ಹೆಜ್ಜೆಗೂ ಲಕ್ಷ್ಮೀಧರನು ತಿಳಿಸುವಂತೆ ಗುರು
ಮುಖವಾಗಿಯೇ ಅರಿತು, ಆ ಆದಿಶಕ್ತಿಯೊಡನೆ ನಲಿದಾಡಲು ಬೇಕಾದ ದೈವೀಸಂಪ
ಇನ್ನು ಪಡೆದುಕೊಳ್ಳಲೆಂದು ಹಾರೈಸಿ, ಪ್ರಕೃತ ಇದರ ಹೊರಮೈಯಾದ ದೇವೀ
ಸ್ತೋತ್ರಭಾಗವನ್ನು ಮಾತ್ರ ವ್ಯಾಖ್ಯಾನಕಾರನ ಅನ್ವಯಕ್ಕನುಸಾರವಾಗಿ ಕನ್ನಡಿಸಿ
 
D
 
ರಸಿಕರ ಮುಂದಿಡುವವರಾಗಿದ್ದೇವೆ.
 
ಇಲ್ಲಿ ಪ್ರತಿಯೊಂದು ಶ್ಲೋಕದ ಪ್ರತೀಕವನ್ನೂ ಅದರ ಪುಟಸಂಖ್ಯೆಯನ್ನೂ
ನಿರ್ದೇಶಿಸಿ, ನಂತರ ಶ್ಲೋಕಸಾರವಾದ ವಿಷಯವನ್ನೂ, ನಂತರ ಆಯಾ ಶ್ಲೋಕದ
ಬೀಜಾಕ್ಷರ ಸಹಿತವಾದ ಯಂತ್ರಪೂಜಾ ಪುರಶ್ಚರಣ ಫಲವನ್ನೂ ನಿರ್ದೇಶಿಸಿ, ನಂತರ
ಅನುವಾದವನ್ನು ಕೊಡಲಾಗಿದೆ.
 
ಇದು ಜನಪ್ರಿಯವಾಗಲೆಂದು ಆಶಿಸುತ್ತೇವೆ.
 
314
 
ಅನುವಾದಕ,
ಎನ್. ಎಸ್. ನಿ
 
CC-0. Jangamwadi Math Collection. Digitized by eGangotri