This page has been fully proofread once and needs a second look.


 
ಮಿ೦ಚಿನಬಳ್ಳಿ
 
ದಶಕಂಠನು ತನ್ನ ಒಂದೊಂದೇ ತಲೆಯನ್ನು ಕತ್ತರಿಸಿ ಉರಿಯುವ ಅಗ್ನಿ
ಯಲ್ಲಿ ಆಹುತಿಯಾಗಿತ್ತನು. ತಪಸ್ಸು ಆರಂಭವಾಗಿ ಸುಮಾರು ಹತ್ತು ಸಾವಿರ
ವರ್ಷಗಳು ಕಳೆದವು. ದಶಾನನನು ಒಂಬತ್ತು ತಲೆಗಳನ್ನೂ ಆಹುತಿ ಕೊಟ್ಟಾ-
ಗಿತ್ತು. ಇದೀಗ ಹತ್ತನೆಯ ತಲೆಯನ್ನೂ ಬಲಿ ಕೊಡುವ ಕಾಲ. ಒಮ್ಮೆಲೆ
ಬ್ರಹ್ಮದೇವರು ಕಾಣಿಸಿಕೊಂಡು "ಮೆಚ್ಚಿದೆ, ಬೇಕಾದ ವರವನ್ನು ಕೇಳು"
ಎಂದು ಮುಗುಳುನಕ್ಕರು.
 

 
'ದೇವಾಸುರರೋ-ಯಕ್ಷರಾಕ್ಷಸರೋ-ಪಕ್ಷಿಪನ್ನಗಗಳೋ ತನ್ನನ್ನು ಕೊಲ್ಲ
ಬಾರದು. ಮತ್ತು ಕಳೆದು ಹೋದ ಒಂಬತ್ತು ತಲೆಗಳೂ ಮತ್ತೆ ಚಿಗುರಬೇಕು."
' ಎಂದು ರಾವಣನು ಬೇಡಿಕೊಂಡನು. ಭಗವತ್ಪರಾಯಣ ನಾದ ವಿಭೀಷಣನು
'ತನ್ನ ಮನಸ್ಸು ಧರ್ಮದಿಂದ ವಿಚಲಿತವಾಗದಿರಲಿ' ಎಂದು ಕೇಳಿಕೊಂಡನು.
ವಾಗ್ದೇವತೆಯಿಂದ ವಾಕ್-ಶಕ್ತಿಯನ್ನು ಕಳೆದುಕೊಂಡ ಕುಂಭಕರ್ಣನು 'ನಿದ್ರಾ
ಸುಖ ಬಹುವಾಗಿರಲಿ"' ಎಂದು ಕೇಳಿಕೊಂಡನು !
 

 
ವರ ದೊರಕಿತು. ಇನ್ನೇತರ ಭಯ ? ರಾವಣನು ತನ್ನ ಪೂರ್ವಜನಾದ

ಕುಬೇರನನ್ನು ಓಡಿಸಿ ಲಂಕೆಯಲ್ಲಿ ಬಂದು ನೆಲಸಿದನು. ಪ್ರಹಸ್ತ ಸುಮಾಲೆಗಳ
ರಾಜನೀತಿ ರಾವಣನ ರಾಜತ್ವಕ್ಕೆ ಸಾಕ್ಷಿಯನ್ನಿತ್ತಿತು.
 

 
ಮಯಾಸುರನಿಗೆ ಒಬ್ಬ ಮಗಳಿದ್ದಳು. ಅವಳ ಹೆಸರು ಮಂಡೋದರಿ,
.
ಅವಳನ್ನು ದಶಾನನ ಮದುವೆಯಾದನು. ಈ ದಾಂಪತ್ಯದ ಫಲವಾಗಿ

ಮೇಘನಾದ ಜನಿಸಿದನು. ನಿದ್ರಾಳುವಾದ ಕುಂಭಕರ್ಣ ವಿದ್ಯುಜಿಹೈಜ್ನಿಹ್ವೆ ಎಂಬವ
ಳನ್ನು ಮದುವೆಯಾದನು. ಪರಮ ಭಾಗವತನಾದ ವಿಭೀಷಣನು ಗಂಧರ್ವ
ಕನ್ನೆಯಾದ ಸುರಮೆಯನ್ನು ವರಿಸಿದನು.
 

 
ಗೋ ಹಿಂಸೆ-ಬ್ರಾಹ್ಮಣ ಹಿಂಸೆ ದಶಾನನನ ನಿತ್ಯ ಕಾರ್ಯ, ಮೂರು

ಲೋಕವೂ ಇವನಿಗೆ ಕಪ್ಪವನ್ನೊಪ್ಪಿಸಿತು. ಕುಬೇರನನ್ನೂ ಸೋಲಿಸಿ ಅವನ
ಪುಷ್ಪಕವನ್ನು ಲಂಕೆಗೆ ಒಯ್ದನು. ದಶಕಂಠನಿಗೆ ಬಲು ಹೆಮ್ಮೆ, ಕೈಲಾಸ
ನ್ನಾದರೂ ನೆಗೆದೇನು ಎನ್ನುವ ಹಮ್ಮು ! ಒಮ್ಮೆ ಹಾಗೆ ಮಾಡಿಯೂ
ಮಾಡಿದನು. ಆದರೆ ಕೈಸಾಗದೆ ಮೈ ಮುರಿದುಕೊಂಡು ಅಯ್ಯೋ ಎಂದು
ಚೀರಿದನು. ಅಂದಿನ ಆ ವೀರ ರವವನ್ನು ಕೇಳಿದ ಜನ, ಅವನನ್ನು 'ರಾವಣ'
ಎಂದು ಕರೆದರು. ಲೋಕವನ್ನು ಗೋಳಿಡಿಸುತ್ತಿದ್ದ ಅವನಿಗೆ ಆ ಹೆಸರು
ಸಾರ್ಥಕವಾಗಿತ್ತು.