We're performing server updates until 1 November. Learn more.

This page has not been fully proofread.


 
ಮಿ೦ಚಿನಬಳ್ಳಿ
 
ದಶಕಂಠನು ತನ್ನ ಒಂದೊಂದೇ ತಲೆಯನ್ನು ಕತ್ತರಿಸಿ ಉರಿಯುವ ಅಗ್ನಿ
ಯಲ್ಲಿ ಆಹುತಿಯಾಗಿತ್ತನು. ತಪಸ್ಸು ಆರಂಭವಾಗಿ ಸುಮಾರು ಹತ್ತು ಸಾವಿರ
ವರ್ಷಗಳು ಕಳೆದವು. ದಶಾನನನು ಒಂಬತ್ತು ತಲೆಗಳನ್ನೂ ಆಹುತಿ ಕೊಟ್ಟಾ-
ಗಿತ್ತು. ಇದೀಗ ಹತ್ತನೆಯ ತಲೆಯನ್ನೂ ಬಲಿ ಕೊಡುವ ಕಾಲ. ಒಮ್ಮೆಲೆ
ಬ್ರಹ್ಮದೇವರು ಕಾಣಿಸಿಕೊಂಡು "ಮೆಚ್ಚಿದೆ, ಬೇಕಾದ ವರವನ್ನು ಕೇಳು"
ಎಂದು ಮುಗುಳುನಕ್ಕರು.
 
'ದೇವಾಸುರರೋ-ಯಕ್ಷರಾಕ್ಷಸರೋ-ಪಕ್ಷಿಪನ್ನಗಗಳೋ ತನ್ನನ್ನು ಕೊಲ್ಲ
ಬಾರದು. ಮತ್ತು ಕಳೆದು ಹೋದ ಒಂಬತ್ತು ತಲೆಗಳೂ ಮತ್ತೆ ಚಿಗುರಬೇಕು."
ಎಂದು ರಾವಣನು ಬೇಡಿಕೊಂಡನು. ಭಗವತ್ಪರಾಯಣನಾದ ವಿಭೀಷಣನು
ತನ್ನ ಮನಸ್ಸು ಧರ್ಮದಿಂದ ವಿಚಲಿತವಾಗದಿರಲಿ' ಎಂದು ಕೇಳಿಕೊಂಡನು.
ವಾಗ್ದವತೆಯಿಂದ ವಾಕ್-ಶಕ್ತಿಯನ್ನು ಕಳೆದುಕೊಂಡ ಕುಂಭಕರ್ಣನು 'ನಿದ್ರಾ
ಸುಖ ಬಹುವಾಗಿರಲಿ" ಎಂದು ಕೇಳಿಕೊಂಡನು !
 
ವರ ದೊರಕಿತು. ಇನ್ನೇತರ ಭಯ ? ರಾವಣನು ತನ್ನ ಪೂರ್ವಜನಾದ
ಕುಬೇರನನ್ನು ಓಡಿಸಿ ಲಂಕೆಯಲ್ಲಿ ಬಂದು ನೆಲಸಿದನು. ಪ್ರಹಸ್ತ ಸುಮಾಲೆಗಳ
ರಾಜನೀತಿ ರಾವಣನ ರಾಜತ್ವಕ್ಕೆ ಸಾಕ್ಷಿಯನ್ನಿತ್ತಿತು.
 
ಮಯಾಸುರನಿಗೆ ಒಬ್ಬ ಮಗಳಿದ್ದಳು. ಅವಳ ಹೆಸರು ಮಂಡೋದರಿ,
ಅವಳನ್ನು ದಶಾನನ ಮದುವೆಯಾದನು. ಈ ದಾಂಪತ್ಯದ ಫಲವಾಗಿ
ಮೇಘನಾದ ಜನಿಸಿದನು. ನಿದ್ರಾಳುವಾದ ಕುಂಭಕರ್ಣ ವಿದ್ಯುಜಿಹೈ ಎಂಬವ
ಳನ್ನು ಮದುವೆಯಾದನು. ಪರಮ ಭಾಗವತನಾದ ವಿಭೀಷಣನು ಗಂಧರ್ವ
ಕನ್ನೆಯಾದ ಸುರಮೆಯನ್ನು ವರಿಸಿದನು.
 
ಗೋ ಹಿಂಸೆ-ಬ್ರಾಹ್ಮಣ ಹಿಂಸೆ ದಶಾನನನ ನಿತ್ಯ ಕಾರ್ಯ, ಮೂರು
ಲೋಕವೂ ಇವನಿಗೆ ಕಪ್ಪವನ್ನೊಪ್ಪಿಸಿತು. ಕುಬೇರನನ್ನೂ ಸೋಲಿಸಿ ಅವನ
ಪುಷ್ಪಕವನ್ನು ಲಂಕೆಗೆ ಒಯ್ದನು. ದಶಕಂಠನಿಗೆ ಬಲು ಹೆಮ್ಮೆ, ಕೈಲಾಸ
ನನ್ನಾದರೂ ನೆಗೆದೇನು ಎನ್ನುವ ಹಮ್ಮು ! ಒಮ್ಮೆ ಹಾಗೆ ಮಾಡಿಯೂ
ಮಾಡಿದನು. ಆದರೆ ಕೈಸಾಗದೆ ಮೈ ಮುರಿದುಕೊಂಡು ಅಯ್ಯೋ ಎಂದು
ಚೀರಿದನು. ಅಂದಿನ ಆ ವೀರ ರವವನ್ನು ಕೇಳಿದ ಜನ, ಅವನನ್ನು 'ರಾವಣ'
ಎಂದು ಕರೆದರು. ಲೋಕವನ್ನು ಗೋಳಿಡಿಸುತ್ತಿದ್ದ ಅವನಿಗೆ ಆ ಹೆಸರು
ಸಾರ್ಥಕವಾಗಿತ್ತು.