2023-03-15 15:35:36 by ambuda-bot
This page has not been fully proofread.
ಸಂಗ್ರಹರಾಮಾಯಣ
ಮಾಲ್ಯವಂತ, ಸುಮಾಲ, ಮಾಲಿ ಎಂದು ಮೂವರು ಮಕ್ಕಳು. ಅವರು
ಮೂವರೂ ಬ್ರಹ್ಮವರದಿಂದ ಅವಧ್ಯರಾಗಿದ್ದರು. ಬ್ರಾಹ್ಮಣ ಹಿಂಸೆ ಅವರ
ಕುಲವತ. ಲಂಕೆ ಅವರ ರಾಜಧಾನಿ. ಈ ಮೂವರಿಂದ ಮೂರು ಲೋಕವೂ
ಬೆದರಿತು. ದೇವತೆಗಳು ಶಂಕರನನ್ನು ಶರಣು ಹೋದರು.
ಕವ
ಬಂದ ದೇವತೆಗಳನ್ನು ಶಂಕರನು ಸಂತೈಸಿದನು.
66
" ಬ್ರಹ್ಮನ ವರವನ್ನು ಮಾರಿ ನಾನು ಅವರನ್ನು ಕೊಲ್ಲಲಾರೆ. ಈಗ
ನಮಗೆ ಉಳಿದಿರುವುದು ಒಂದೇ ದಾರಿ, ಶ್ರೀ ಹರಿಗೆ ಶರಣಾಗುವುದು. ಬನ್ನಿ,
ಅವನು ನಮಗೆ ಒಳಿತನ್ನುಂಟುಮಾಡುವನು."
ಕ್ಷೀರಸಾಗರದ ತಡಿಯಲ್ಲಿ ದೇವತೆಗಳು ಶ್ರೀಹರಿಯನ್ನು ಬಿನ್ನವಿಸಿಕೊಂಡರು:
* ಜಗನ್ನಾಥ ! ಸುಕೇಶನ ಮಕ್ಕಳಿಂದ ನಮ್ಮನ್ನು ಪಾರುಗಾಣಿಸು.
ಜಗತ್ತನ್ನು ಪ್ರಳಯದ ಬಾಗಿಲಿಂದ ತಪ್ಪಿಸು. "
ದೈತ್ಯರನ್ನು ಸಂಹರಿಸಲು ಭಗವಂತನು ಗರುಡನನ್ನೇರಿ ಬಂದನು.
ರಕ್ಕಸರೆಲ್ಲ ಯುದ್ಧಕ್ಕೆ ಅಣಿಯಾಗಿ ಬಂದೆರಗಿದರು. ಬೆಂಕಿಯಲ್ಲಿ ಬಿದ್ದ ಪತಂಗ
ಗಳಂತೆ ಅವರ ಪಾಡಾಯಿತು. ಅಂದು, ಮಾಲಿ ತೋರಿದ ಕೆಚ್ಚು, ದೇವತೆ
ಗಳೂ ಅಚ್ಚರಿಪಡುವಂಥದು. ಆದರೆ ಶ್ರೀಹರಿಯ ಮುಂದೆ ಯಾರ ಕೆಚ್ಚು
ಏನು ನಡೆದೀತು ? ಮಾಲಿ ಮಡಿದುರುಳಿದನು. ಸುಮಾಲಿ ಮತ್ತು ಮಾಲ್ಯ
ವಂತ ತಲೆತಪ್ಪಿಸಿಕೊಂಡರು. ದೇವತೆಗಳು ನೆಮ್ಮದಿಯ ನಿಟ್ಟುಸಿರುಗರೆದರು.
ವಾಡುತ್ತಿತ್ತು.
ತೊಟ್ಟನು.
ಯುದ್ಧದಲ್ಲಿ ಓಡಿಹೋದ ಸುಮಾಲಗೆ ಮನಸ್ಸಿನಲ್ಲಿ ಕಿಚ್ಚು ತಾಂಡವ
ದೇವತೆಗಳನ್ನು ಹೇಗಾದರೂ ಸದೆಬಡಿಯಬೇಕೆಂದು ಪಣ
ಅದಕ್ಕೆಂದೇ ತನ್ನ ಮಗಳು ಕೈಕಸಿಯನ್ನು ಪಾತಾಳದಿಂದ ಕರೆದು
ಕೊಂಡು ಬಂದು ವಿಶ್ರವಸನ ಬಳಿ ಬಿಟ್ಟನು. ಕೈಕಸಿಯ ಯೌವನ-ಲಾವಣ್ಯ
ತಾಪಸನ ಮನಸ್ಸಿಗೆ ನಾಟಿತು. ವಿಶ್ರವಸ-ಕೈಕಸಿಯರು ಜತೆಯಾದರು.
ಮೊದಲು ಹತ್ತು ತಲೆಯ ಮಗನೊಬ್ಬ ಹುಟ್ಟಿದ. ಅನಂತರ ಕುಂಭಕರ್ಣ.
ಮೂರನೆಯವಳು ಶೂರ್ಪಣಖೆ, ಕೊನೆಯವನೆ ಪುಣ್ಯಾತ್ಮನಾದ ವಿಭೀಷಣ.
ತನ್ನ ಸವತಿಯ ಮಗ ಕುಬೇರನ ಸಿರಿಯನ್ನು ಕಂಡು ಕೈಕಸಿಗೆ ಕಿಚ್ಚಾ -
ಯಿತು. ಅವಳು ತನ್ನ ಮಕ್ಕಳನ್ನು ತಪಸ್ಸಿಗೆ ಪ್ರಚೋದಿಸಿದಳು. ಮೂವರೂ
ಸೋದರರು ಸಾವಿರ-ಸಾವಿರ ವರ್ಷಕಾಲ ತಪಸ್ಸನ್ನಾಚರಿಸಿದರು.