2023-03-15 15:35:35 by ambuda-bot
This page has not been fully proofread.
ಅರಣ್ಯಕಾಂಡ
ಪುಲವಂಶದಲ್ಲಿ ಮೂಡಿಬಂದ ಧೂಮಕೇತು
ಪುಲಸ್ಯರು ಬ್ರಹ್ಮದೇವರ ಮಾನಸಪುತ್ರರು. ಅವರು ಮೇರುಗಿರಿಯ
ಕಡೆಯಲ್ಲಿ ತಪೋನಿರತರಾಗಿದ್ದರು. ಆ ಪ್ರದೇಶ ರಮ್ಯವಾಗಿತ್ತು; ವಿಹಾರ
ಯೋಗ್ಯವಾಗಿತ್ತು. ಅಪ್ಸರೆಯರು ಅಲ್ಲಿ ಬಂದು ಹಾಡುತ್ತಿದ್ದರು, ನಲಿಯುತ್ತಿ
ದ್ದರು, ಮಹರ್ಷಿಗಳ ತಪಸ್ಸಿಗೆ ಅದರಿಂದ ತಡೆಯುಂಟಾಯಿತು... ಅವರು
ಕೋಪಗೊಂಡು ನುಡಿದರು:
* ಯಾವ ಹೆಣ್ಣು ಇಲ್ಲಿ ಬಂದು ನನ್ನನ್ನು ಕಾಣುವಳೋ ಅವಳು ಗರ್ಭಿಣಿ
ಯಾಗಲಿ."
ಹೆದರಿದ ಹರೆಯದ ಕನ್ನೆಯರು ಮತ್ತೆ ಅಲ್ಲಿಗೆ ಕಾಲಿಡಲಿಲ್ಲ. ರಾಜರ್ಷಿ
ತೃಣಬಿಂದುವಿನ ಮಗಳಿಗೆ ಮಾತ್ರ ಈ ಸಂಗತಿ ತಿಳಿದಿರಲಿಲ್ಲ. ಅವಳು
ಒಮ್ಮೆ ಆ ಕಡೆ ಬಂದವಳು ಮಹರ್ಷಿಯನ್ನು ನೋಡಿದಳು. ಏಕೋ ಮೈ
ಬಿಳುಪೇರಿತು ! ತನ್ನ ಜವ್ವನದ ಅಚುಂಬಿತತೆ ಚ್ಯುತವಾದಂತೆ ಅವಳಿಗನ್ನಿ
ಸಿತು ! ಪಾಪ ! ಆ ಮುಗುದೆಗೆ ಒಂದ ಅರಿವಾಗಲಿಲ್ಲ.
ತೃಣಬಿಂದುವಿಗೆ ಪ್ರಸಂಗದ ಅರಿವಾಯಿತು. ಅವನು ಪುಲಸ್ಯರನ್ನು
ಕಂಡು ತನ್ನ ಮಗಳ ಕೈಹಿಡಿವಂತೆ ಕೇಳಿಕೊಂಡನು. ಪುಲಸ್ಕರು ಒಪ್ಪಿದರು.
ಮದುವೆಗೆ ಮುಂಚೆಯೆ ಚಕ್ಷು. ಪ್ರೀತಿಯಿಂದಲೆ ಗರ್ಣಿಣಿಯಾದ ಈ ಹೆಣ್ಣು
ಒಬ್ಬ ತೇಜಸ್ವಿ ಕುಮಾರನನ್ನು ಹೆತ್ತಳು. ಪುಲಸ್ಕರು ಮಗನಿಗೆ ವಿಶ್ರವಸನೆಂದು
ಹೆಸರಿಟ್ಟರು.
ವಿಶ್ರವಸನೂ ತಂದೆಯಂತೆ ತಪಸ್ವಿಯಾಗಿ ಬೆಳೆದನು. ಅವನಿಗೆ ಭರದ್ವಾಜ
ಮುನಿಗಳ ಮಗಳನ್ನು ಕೊಟ್ಟು ಮದುವೆಯಾಯಿತು. ಅವಳಿಂದ ವಿಶ್ರವಸನಿಗೆ
ವೈಶ್ರವಣನೆಂಬ ಮಗನು ಜನಿಸಿದನು. ಅವನಿಗೆ ಬ್ರಹ್ಮಪ್ರಸಾದದಿಂದ ಉತ್ತರ
ದಿಕ್ಕಿನ ಆದಿಪತ್ಯವೂ, ಪುಷ್ಪಕವಿಮಾನವೂ ದೊರಕಿತು.
ಇನ್ನೊಂದೆಡೆ ಬ್ರಹ್ಮದೇವರು ಹೇತಿ ಎಂಬ ರಾಕ್ಷಸನನ್ನು ಸೃಷ್ಟಿಸಿದರು.
ಅವನ ಮಗ ವಿದ್ಯುತ್ಯೇಶ. ವಿದ್ಯುತ್ಯೇಶನ ಮಗ ಸುತೇಶ, ಸುತೇಶನಿಗೆ