This page has been fully proofread once and needs a second look.

ಸಂಗ್ರಹರಾಮಾಯಣ
 
ಹೀಗೆಯೇ ಒಂದು ದಿನ ಸೀತಾ-ರಾಮರು ವಿಶ್ರಮಿಸಿದ್ದರು. ಆಗ ಅಸುರಾ
ವಿಷ್ಟನಾದ ಇಂದ್ರ- ಪುತ್ರನು ಕಾಗೆಯ ರೂಪಿನಿಂದ ಅಲ್ಲಿಗೆ ಬಂದು ಮೆಲ್ಲನೆ ಜಗನ್ಮಾ
ತೆಯ ಮೊಲೆಯನ್ನು ಕುಟುಕಿದನು. ಎಚ್ಚೆತ್ ರಾಮಚಂದ್ರ ಕೈ ಬೀಸಿ ಗದರಿಸಿ
ದರೂ ಈ ಮಾಯಾವಿ ಕಾಗೆ ಆ ತಾಣದಿಂದ ಕದಲಲೇ ಇಲ್ಲ. ಆಗ ರಾಮಚಂದ್ರ
ಒಂದು ಹುಲ್ಲುಕಡ್ಡಿಯನ್ನು ಅದರೆಡೆಗೆ ಎಸೆದನು. ಸುಡುತ್ತಿರುವ ಹುಲ್ಲುಕಡ್ಡಿ

ಯನ್ನು ಕಂಡು ಹೆದರಿದ ಕಾಕಾಸುರ ಬ್ರಹ್ಮಾದಿಗಳಿಗೆ ಮೊರೆಯಿಟ್ಟನು. ರಾಮನು
ಬಿಟ್ಟ ಹುಲ್ಲುಕಡ್ಡಿಯನ್ನೇ ಆದರೂ ನಿಗ್ರಹಿಸುವ ಶಕ್ತಿ ತಮಗೆಲ್ಲಿ ? ಎಂದು ಬ್ರಹ್ಮ

ರುದ್ರಾದಿಗಳು ಅವನನ್ನು ಗದರಿಸಿ ಕಳುಹಿದರು. ತ್ರೈಲೋಕ್ಯದ ದೇವಾಸುರ
ರೆಲ್ಲ ಕೈ ಬಿಟ್ಟ ಕಾಕಾಸುರ ಕೊನೆಗೆ ರಾಮಚಂದ್ರನಿಗೇ ಶರಣುಬಂದ, ದಯಾಳು

ವಾದ ರಾಮಚಂದ್ರ ಅವನನ್ನು ಕೊಲ್ಲದೆ ಒಂದು ಕಣ್ಣನ್ನು ಮಾತ್ರ ಕುರುಡಾಗಿ
ಸಿದನು. ಅಂದಿನಿಂದ ಕಾಗೆಗಳ ಸಂತಾನಕ್ಕೆಯೆ ಒಂದೇ ಕಣ್ಣು !
 
ಶಕ್ತಿ
 

 
ದಯನೀಯನಾದ ಈ ಅಸುರನ ಪಾಡನ್ನು ಕಂಡು, ರಾಮಚಂದ್ರ ರಾಕ್ಷ
ಸರ ಕುಲಕೋಟಿಯನ್ನು ಸುಟ್ಟೋಟೊಗೆಯಬಲ್ಲ ತನ್ನ ಕುಡಿನೋಟವನ್ನು ಸೀತೆ
- ಯಡೆಗೆ ಬೀರಿದನು. ಸೀತೆಯ ಮುಖದಲ್ಲಿ ಮೆಲುನಗು ವಿನ ಕೋಡ್ಲ್ಮಿಂಚೊಂದು
ಹರಿದು ಮಾಯವಾಯಿತು !