This page has not been fully proofread.

ಮಿಂಚಿನಬಳ್ಳಿ
 
ಭರತನು ಮತ್ತೂ ಮತ್ತೂ ಪಟ್ಟು ಹಿಡಿದು ರಾಮಚಂದ್ರನು ಮರಳುವಂತೆ
ಬಿನ್ನವಿಸಿಕೊಳ್ಳುತ್ತಿದ್ದ. ಇಷ್ಟರಲ್ಲಿ ಅಲ್ಲಿಗೆ ಕೆಲವು ಮಹರ್ಷಿಗಳು ಚಿಸಿದರು.
ಭಗವತ್ಸಂಕಲ್ಪವನ್ನು ಬಲ್ಲ ಜ್ಞಾನಿಗಳಾದ ಅವರು ಭರತನನ್ನು ಸಮಾಧಾನ
 
ಗೊಳಿಸಿದರು.
 
"ಭರತ, ರಾಮಚಂದ್ರನನ್ನು ಈಗ ನೀನು ಕರೆದುಕೊಂಡು ಹೋಗಲಾರೆ.
ಅವನು ನಮಗಾಗಿ ಭವಿಷ್ಯತ್ತಿನ ಹಿತಕ್ಕಾಗಿ ಕಾಡಿನಲ್ಲಿರಬೇಕಾಗಿದೆ. ಕೆಲಸ
ನೆರವೇರಿದಾಗ ಅವನು ಅಯೋಧ್ಯೆಗೆ ಬಂದು ನಿಮ್ಮನ್ನು ಸಂತಸಪಡಿಸುವನು."
 
ಆದರೂ ಭರತನಿಗೆ ಸಮಾಧಾನವಿಲ್ಲ. ಅವನು ರಾಮನ ಪಾದಮೂಲ
ದಲ್ಲಿ ಹೊರಳಾಡುತ್ತಿದ್ದ ! ಈ ಸಮಸ್ಯೆಯನ್ನು ಹೇಗಾದರೂ ಬಗೆಹರಿಸುವ
ದೃಷ್ಟಿಯಿಂದ ವಸಿಷ್ಠರು ನುಡಿದರು:
 
"ರಾಮಚಂದ್ರ, ನಿನ್ನ ಹೊನ್ನ ಹಾವುಗೆಗಳನ್ನಾದರೂ ಭರತನಿಗೆ ನೀಡು.
ನಿನ್ನ ಪಾದುಕೆಗಳನ್ನು ಸಾಕ್ಷಿಯಾಗಿಟ್ಟುಕೊಂಡು, ಅದರ ಪ್ರತಿನಿಧಿಯಾಗಿ
ಭರತ ರಾಜ್ಯವಾಳಲಿ:
 
ರಾಮಚಂದ್ರನು ಕೂಡಲೆ ತನ್ನ ಪಾದುಕೆಗಳನ್ನು ಕಳಚಿ ಭರತನಿಗೆ ಒಪ್ಪಿ
ಸಿದನು. ಭರತನು ಭಕ್ತಿಯಿಂದ ಅವನ್ನು ತಲೆಯಲ್ಲಿಟ್ಟುಕೊಂಡು ಕೈಮುಗಿದು
ಬಿನ್ನವಿಸಿಕೊಂಡ:
 
" ರಾಮಭದ್ರ, ನೀನು ಬರುವವರೆಗೆ ನಾನು ನಗರವನ್ನು ಪ್ರವೇಶಿಸುವು
ದಿಲ್ಲ; ಮತ್ತು ಹದಿನಾಲ್ಕು ವರ್ಷಗಳು ತುಂಬಿದಾಗಲೂ ನೀನು ಬರದಿದ್ದರೆ ಅಗ್ನಿ
ಪ್ರವೇಶ ಮಾಡುತ್ತೇನೆ."
 
29
 
'ಭರತನು ಹೀಗೆ ಎರಡು ವೀರಪ್ರತಿಜ್ಞೆಗಳನ್ನು ಮಾಡಿ, ರಾಮನಿಗೆ ಅಭಿ
ವಂದಿಸಿ ಪರಿವಾರದೊಡನೆ ವಿಷಣ್ಣನಾಗಿ ಮರಳಿದನು.
 
ತನ್ನ ತಾಯಂದಿರನ್ನು ಅಯೋಧ್ಯೆಗೆ ಕಳುಹಿಸಿ ಭರತ ಮಾತ್ರ ನಂದಿಗ್ರಾಮ
ದಲ್ಲೇ ಉಳಿದನು. ಅಲ್ಲಿ ರಾಮನ ಹಾವುಗೆಗಳನ್ನು ಸಿಂಹಾಸನದಲ್ಲಿರಿಸಿ
ರಾಜೋಪಚಾರಗಳಿಂದ ಗೌರವಿಸಿದನು. ಹಾವುಗೆಯ ಹಿರಿತನದಲ್ಲಿ ಭರತನು
ರಾಜ್ಯಸೂತ್ರವನ್ನು ಕೈಗೆತ್ತಿಕೊಂಡನು !
 
- ಇತ್ತ ಸೀತಾ-ರಾಮರ ಕಾಡಿನ ಜೀವನ ಸುಖಮಯವಾಗಿ ಸಾಗಿತ್ತು.
ಹೂ-ಹಣ್ಣುಗಳಿಂದ ತೊನೆವ ನಿಸರ್ಗದ ಮಡಿಲಲ್ಲಿ ಅವರು ವಿಹರಿಸುತ್ತಿದ್ದರು.