2023-03-15 15:35:34 by ambuda-bot
This page has not been fully proofread.
ಸಂಗ್ರಹರಾಮಾಯಣ
ಲಕ್ಷ್ಮಣನೊಡನೆ ನಿನ್ನ ಸೇವೆಯಲ್ಲಿ ಇದ್ದು ಬಿಡುತ್ತೇನೆ. ಯೋಗಿಗಳಿಗೂ
ದುರ್ಲಭವಾದ ಈ ಪಾದದ ಸೇವೆ ಮಾಡುವ ಭಾಗ್ಯ ನನ್ನದಾಗಲಿ."
ಭರತನ ಮಾತನ್ನು ಎಲ್ಲ ಮಂತ್ರಿಗಳೂ ಮಹರ್ಷಿಗಳೂ ಮಾತೆಯರೂ
ಸಮರ್ಥಿಸಿ ರಾಮನನ್ನು ರಾಜ್ಯಕ್ಕೆ ಮರಳುವಂತೆ ಅಂಗಲಾಚಿಕೊಂಡರು.
ಜಾಬಾಲಿ ಮುನಿಗಳು ನಾಸ್ತಿಕತೆಯ ಸೋಗಿನಲ್ಲಿ ನುಡಿದರು:
"ಹೆಣ್ಣಿನ ಮಾತಿಗೆ ಮರುಳಾದ ತಂದೆಯ ಮಾತನ್ನು ಪಾಲಿಸಿದರೆಷ್ಟು ?
ಬಿಟ್ಟರೆಷ್ಟು ? ಗುರು-ಶಿಷ್ಯರು, ತಂದೆ-ಮಕ್ಕಳು ಎನ್ನುವುದೆಲ್ಲ ಬರಿಯ ಭ್ರಮೆ.
ಏನೋ ಧಾರ್ಮಿಕತೆಯ ಭ್ರಾಂತಿಯಿಂದ ರಾಜ್ಯಭೋಗವನ್ನು ತೊರೆದು
ಕಾಡಿನಲ್ಲಿ ಅಂಡಲೆಯಬೇಡ. ದೃಷ್ಟವನ್ನು ಬದಿಗೊತ್ತಿ ಎಂಥ ಅದೃಷ್ಟ ?
ಅರ್ಥವಿಲ್ಲದ ಮಾತು !"
ಪರಮಾಸ್ತಿಕರಾದ ಜಾಬಾಲಿಗಳೂ ಕಪಟನಾಟಕಸೂತ್ರಧಾರಿಯ ಇದಿರು
ಒಂದು ನಾಟಕವಾಡಿದರು !
ವಸಿಷ್ಠರೂ ರಾಮನ ಬಳಿ ಕಳಕಳಿಯಿಂದ ಕೇಳಿಕೊಂಡರು:
"ಕುಮಾರ, ನೀನು ಹೀಗೆ 'ಧರ್ಮ ಧರ್ಮ' ಎಂದು ಕಾಡಿನಲ್ಲಿ ತಿರುಗಿದರೆ
ರಾಷ್ಟ್ರ ಅರಾಜಕವಾಗುತ್ತದೆ. ತಲೆಮಾರು-ತಲೆಮಾರುಗಳಿಂದ ನಿನ್ನ ಪೂರ್ವ-
ಜರು ಪಾಲಿಸಿಕೊಂಡು ಬಂದ ಪರಂಪರೆ ಒಮ್ಮೆಲೆ ಕಡಿದು ಹೋಗುವುದನ್ನು
ನಾವು ಸಹಿಸಲಾರೆವು."
ಪೌರರ ಬೇಡಿಕೆಯೂ ಮುನಿಗಳ ಉಪದೇಶವೂ ತಾಯಂದಿರ ಕರುಳ
ಕರೆಯೂ ಯಾವುದೂ ರಾಮನ ನಿರ್ಣಯವನ್ನು ಬದಲಿಸಲಾರದಾಯಿತು !
ದುಃಖಿತನಾದ ಭರತನೆಂದನು:
ರಾಮಚಂದ್ರನು ನನ್ನ ಮೇಲೆ ಪ್ರಸನ್ನನಾಗಿ ಊರಿಗೆ ತೆರಳಲು ಒಪ್ಪುವ
ವರೆಗೆ ನಾನಿಲ್ಲೇ ನಿರಾಹಾರನಾಗಿ ಇದ್ದು ಬಿಡುತ್ತೇನೆ. ಜಗದ್ಗುರುವೆ, ಗುರ್ವಾಜೆ
ಯನ್ನು ಪಾಲಿಸುವ ಹೊರೆಯನ್ನು ನನ್ನ ಮೇಲೆ ಬಿಡು, ನಾನು ಹದಿನಾಲ್ಕು
ವರ್ಷ ಕಾಲ ಕಾಡಿನಲ್ಲಿರುತ್ತೇನೆ. ನೀನು ಹಿಂದಿರುಗಿ ರಾಜ್ಯವನ್ನಾಳು."
ರಾಮಚಂದ್ರನು ಖಂಡತುಂಡವಾಗಿ ಆದರೂ ನಗುತ್ತಲೆ ಉತ್ತರಿಸಿದನು:
"ನನ್ನ ನಿರ್ಣಯದಲ್ಲಿ ಬದಲಾವಣೆ ಸಾಧ್ಯವಿಲ್ಲ, ಭರತ."