This page has been fully proofread once and needs a second look.

ಸಂಗ್ರಹರಾಮಾಯಣ
 
ಮುನಿಗಳೊಡನೆ ರಾಮನಿರುವ ತಾಣವನ್ನು ಕೇಳುತ್ತ ರಾಮನ ಆಶ್ರಮದ
ಸನಿಯಕ್ಕೆ ಬಂದನು.
 

 
ಇತ್ತ ಲಕ್ಷ್ಮಣನು ಸೈನ್ಯದ ಧೂಲಿಯಿಂದ ಮುಗಿಲೆಲ್ಲ ಮುಸುಕಿದ್ದನ್ನು
ಕಂಡು ಮರವೇರಿ 'ಇದು ಏನಿರಬಹುದು' ಎಂದು ಪರಿಕಿಸಿದನು. ದೂರದಲ್ಲಿ

ಭರತನ ಕೋವಿದಾರಧ್ವಜ ಕಾಣಿಸಿತು ! ಸಿಟ್ಟಿನಿಂದಲೆ ಲಕ್ಷ್ಮಣನು ನುಡಿದನು:
 

 

 
"ಅಣ್ಣ, ಭರತನು ಸೈನ್ಯ ಕಟ್ಟಿಕೊಂಡು ಬಂದಿ- ದ್ದಾನೆ. ಅವನ ದರ್ಪಕ್ಕೆ
ಮಿತಿಯೇ ಇಲ್ಲ. ಅವನಿಗೆ ಬುದ್ಧಿ ಕಲಿಸಲಿಕ್ಕೆ ನಾನೊಬ್ಬನೆ ಸಾಕು. ನನಗೆ

ಅನುಮತಿ ಕೊಡು ಅಣ್ಣ."
 

 
ರಾಮನು ಸಮಾಧಾನವಾಗಿಯೆ ಉತ್ತರಿಸಿದ:
 

 
"ಭರತನು ಶಾಂತ ಪ್ರಕೃತಿಯವನು. ಅವನು ಎಂದೂ ದರ್ಪವನ್ನು ಮೆರೆ
ಯಿಸುವವನಲ್ಲ. ಶಾಂತನಾಗು ಲಕ್ಷಣ. ಭರತನು ನಮ್ಮನ್ನು ನೋಡ- ಲಿಕ್ಕೆ-
ನಮ್ಮ ಯೋಗಕ್ಷೇಮವನ್ನು ವಿಚಾರಿಸಲಿಕ್ಕೆ ಬಂದಿರಬೇಕು. ದುಡುಕಬೇಡ."
 

 
ಇಷ್ಟರಲ್ಲಿಯೆ ಭರತನು ಪರ್ಣಶಾಲೆಯ ಬಳಿ ಬಂದಿದ್ದನು. ಸುಂದರವಾದ
ಎರಡು ಆಶ್ರಮಗಳು. ಈಶಾನ್ಯದಲ್ಲಿ ಹೋಮಾಗ್ನಿ, ಜಟಾಧಾರಿಯಾಗಿ ನಾರು
ಡೆಯನ್ನು ತೊಟ್ಟು ಕುಳಿತಿರುವ ರಾಮ. ಅವನ ಪಕ್ಕದಲ್ಲಿ ತಸಿನಿ ಸೀತೆ, ಬಳಿ
ಯಲ್ಲಿ ಹಸನ್ಮುಖ-
ನಾದ ಲಕ್ಷಣ. ಈ ಸುಖಮಯ ಶಾಂತ ಜೀವನದಿದಿರು

ರಾಜಭೋಗಕ್ಕೆ ಕಿಚ್ಚು ಹಚ್ಚಬೇಕು.
 

 
ತಾಯಿಯ ತಪ್ಪಿನಿಂದ ಲಜ್ಜಿತನಾದ ಭರತ ರಾಮನ ಕಾಲಿಗೆ ಬಿದ್ದು
ಹೊರಳಾಡಿದನು. ರಾಮಚಂದ್ರ ನು ಎಬ್ಬಿಸಿ ಬಿಗಿದಪ್ಪಿಕೊಂಡನು. ಸೋದರ
ಪ್ರೇಮ ಅಲ್ಲಿ ಸಾಮ್ರಾಜ್ಯವನ್ನು ಸ್ಥಾಪಿಸಿತ್ತು !
 

 
ಎಲ್ಲವನ್ನೂ ಬಲ್ಲ ರಾಮಚಂದ್ರ ತಂದೆಯ ಕ್ಷೇಮವನ್ನು ವಿಚಾರಿಸಿದನು !
ಅಯೋಧ್ಯೆಯ ಯೋಗ-ಕ್ಷೇಮಗಳನ್ನು ಕೇಳಬಯಸಿದನು ! ದಶರಥನು ಸತ್ತ
ವಾರ್ತೆಯನ್ನು ಕೇಳಿ-ನಿರ್ದುಃಖ- ನಾದ ರಾಮಚಂದ್ರ ಮಕ್ಕಳಂತೆ ಅತ್ತು ಬಿಟ್ಟನು !

ಇದೂ ಒಂದು ಲೋಕನಾಯಕನ ಲೀಲೆ !
 

 
ಅನಂತರ ರಾಮ-ಲಕ್ಷಣ-ಸೀತೆಯರು ಗಂಗೆಯಲ್ಲಿ ಮುಳುಗಿ ಮಹಾ-
ರಾಜನಿಗೆ ಜಲಾಂಜಲಿಯನ್ನಿತ್ತರು. ನಾರುಮಡಿಯುಟ್ಟ ಮಕ್ಕಳನ್ನು ಕಂಡು
ಕೌಸಲ್ಯೆಯ ಕಣ್ಣು ತೇವವಾಯಿತು. ತಾಯಂದಿರನ್ನು ಕಂಡವನೆ ರಾಮಚಂದ್ರ