This page has not been fully proofread.

ಸಂಗ್ರಹರಾಮಾಯಣ
 
ಮುನಿಗಳೊಡನೆ ರಾಮನಿರುವ ತಾಣವನ್ನು ಕೇಳುತ್ತ ರಾಮನ ಆಶ್ರಮದ
ಸನಿಯಕ್ಕೆ ಬಂದನು.
 
ಇತ್ತ ಲಕ್ಷ್ಮಣನು ಸೈನ್ಯದ ಧೂಲಿಯಿಂದ ಮುಗಿಲೆಲ್ಲ ಮುಸುಕಿದ್ದನ್ನು
ಕಂಡು ಮರವೇರಿ 'ಇದು ಏನಿರಬಹುದು' ಎಂದು ಪರಿಕಿಸಿದನು. ದೂರದಲ್ಲಿ
ಭರತನ ಕೋವಿದಾರಧ್ವಜ ಕಾಣಿಸಿತು ! ಸಿಟ್ಟಿನಿಂದಲೆ ಲಕ್ಷ್ಮಣನು ನುಡಿದನು:
 

 
"ಅಣ್ಣ, ಭರತನು ಸೈನ್ಯ ಕಟ್ಟಿಕೊಂಡು ಬಂದಿದ್ದಾನೆ. ಅವನ ದರ್ಪಕ್ಕೆ
ಮಿತಿಯೇ ಇಲ್ಲ. ಅವನಿಗೆ ಬುದ್ಧಿ ಕಲಿಸಲಿಕ್ಕೆ ನಾನೊಬ್ಬನೆ ಸಾಕು. ನನಗೆ
ಅನುಮತಿ ಕೊಡು ಅಣ್ಣ."
 
ರಾಮನು ಸಮಾಧಾನವಾಗಿಯೆ ಉತ್ತರಿಸಿದ:
 
"ಭರತನು ಶಾಂತ ಪ್ರಕೃತಿಯವನು. ಅವನು ಎಂದೂ ದರ್ಪವನ್ನು ಮೆರೆ
ಯಿಸುವವನಲ್ಲ. ಶಾಂತನಾಗು ಲಕ್ಷಣ. ಭರತನು ನಮ್ಮನ್ನು ನೋಡಲಿಕ್ಕೆ-
ನಮ್ಮ ಯೋಗಕ್ಷೇಮವನ್ನು ವಿಚಾರಿಸಲಿಕ್ಕೆ ಬಂದಿರಬೇಕು. ದುಡುಕಬೇಡ."
 
ಇಷ್ಟರಲ್ಲಿಯೆ ಭರತನು ಪರ್ಣಶಾಲೆಯ ಬಳಿ ಬಂದಿದ್ದನು. ಸುಂದರವಾದ
ಎರಡು ಆಶ್ರಮಗಳು. ಈಶಾನ್ಯದಲ್ಲಿ ಹೋಮಾಗ್ನಿ, ಜಟಾಧಾರಿಯಾಗಿ ನಾರು
ಡೆಯನ್ನು ತೊಟ್ಟು ಕುಳಿತಿರುವ ರಾಮ. ಅವನ ಪಕ್ಕದಲ್ಲಿ ತವಸಿನಿ ಸೀತೆ, ಬಳಿ
ಯಲ್ಲಿ ಹಸನ್ಮುಖನಾದ ಲಕ್ಷಣ. ಈ ಸುಖಮಯ ಶಾಂತ ಜೀವನದಿದಿರು
ರಾಜಭೋಗಕ್ಕೆ ಕಿಚ್ಚು ಹಚ್ಚಬೇಕು.
 
ತಾಯಿಯ ತಪ್ಪಿನಿಂದ ಲಜ್ಜಿತನಾದ ಭರತ ರಾಮನ ಕಾಲಿಗೆ ಬಿದ್ದು
ಹೊರಳಾಡಿದನು. ರಾಮಚಂದ್ರನು ಎಬ್ಬಿಸಿ ಬಿಗಿದಪ್ಪಿಕೊಂಡನು. ಸೋದರ
ಪ್ರೇಮ ಅಲ್ಲಿ ಸಾಮ್ರಾಜ್ಯವನ್ನು ಸ್ಥಾಪಿಸಿತ್ತು !
 
ಎಲ್ಲವನ್ನೂ ಬಲ್ಲ ರಾಮಚಂದ್ರ ತಂದೆಯ ಕ್ಷೇಮವನ್ನು ವಿಚಾರಿಸಿದನು !
ಅಯೋಧ್ಯೆಯ ಯೋಗ-ಕ್ಷೇಮಗಳನ್ನು ಕೇಳಬಯಸಿದನು ! ದಶರಥನು ಸತ್ತ
ವಾರ್ತೆಯನ್ನು ಕೇಳಿ-ನಿರ್ದುಃಖನಾದ ರಾಮಚಂದ್ರ ಮಕ್ಕಳಂತೆ ಅತ್ತು ಬಿಟ್ಟನು !
ಇದೂ ಒಂದು ಲೋಕನಾಯಕನ ಲೀಲೆ !
 
ಅನಂತರ ರಾಮ-ಲಕ್ಷಣ-ಸೀತೆಯರು ಗಂಗೆಯಲ್ಲಿ ಮುಳುಗಿ ಮಹಾ-
ರಾಜನಿಗೆ ಜಲಾಂಜಲಿಯನ್ನಿತ್ತರು. ನಾರುಮಡಿಯುಟ್ಟ ಮಕ್ಕಳನ್ನು ಕಂಡು
ಕೌಸಲ್ಯಯ ಕಣ್ಣು ತೇವವಾಯಿತು. ತಾಯಂದಿರನ್ನು ಕಂಡವನೆ ರಾಮಚಂದ್ರ