This page has not been fully proofread.

ಮಿಂಚಿನಬಳ್ಳಿ
 
ನನ್ನು ನಮ್ಮ ರಾಷ್ಟ್ರದ ಅಧಿನಾಯಕನನ್ನು ಜಗತ್ರಭುವನ್ನು, ಕಾಡಿನಿಂದ ನಾಡಿಗೆ
 
66
 
ಧನ್ಯ, ಭರತ ಧನ್ಯ. ನೀನು ರಾಮನ ತಮ್ಮನೇ ನಿಜ, " ಎಂದು
ಭರದ್ವಾಜರು ಅವನನ್ನು ಕೊಂಡಾಡಿದರು. ಆವತ್ತಿನ ಆತಿಥ್ಯ ತಮ್ಮಲ್ಲಿಯೆ
ನಡೆಯಬೇಕೆಂದು ಕೇಳಿಕೊಂಡರು. ಸಿದ್ಧ ಪುರುಷರಾದ ಭರದ್ವಾಜರು ಭಗವತ-
ಸಾದದಿಂದ ಆ ಕಾಡಿನಲ್ಲಿ ಆ ಅಸಂಖ್ಯಾತ ಸೈನಿಕರಿಗೆ- ಜಾನಪದರಿಗೆ ರಾಜ
ಭೋಗವನ್ನುಣಿಸಿದರು. ಯಾರು ಏನನ್ನು ಬಯಿಸಿದರೆ ಅದು ಅವರಿಗೆ
ದೊರಕುತ್ತಿತ್ತು.
 
ಕಲಿ
 
ಮರುದಿನ ಪ್ರಾತಃಕಾಲ ಹೊರಟುನಿಂತ ಭರತನು ಮಹರ್ಷಿಯನ್ನು ವಂದಿ
ಸಿದನು, ರಾಜಮಹಿಷಿಯರೂ ಮುನಿಗೆ ತಲೆವಾಗಿದರು.
 
ಭರದ್ವಾಜರಂದರು :
 
* ಈ ಮೂರು ಮಹಿಷಿಯರು ಯಾರು ಯಾರು ಎಂದು ಪರಿಚಯಿಸಿ
ಕೊಡು ಭರತ. "
 
* ನಿಮಗೆ ಮೊದಲು ವಂದಿಸಿದವಳು ಪುತ್ರವಿರಹದಿಂದ ದುಃಖಿತಳಾದ
ಮಾತೆ ಕೌಸಲ್ಯ, ಅವಳ ಬಳಿಯಲ್ಲಿರುವಾಕೆ ವೀರರಾದ ಲಕ್ಷ್ಮಣ-ಶತ್ರುಘ್ನರ
ಜನನಿಯಾದ ಸುಮಿತ್ರೆ, ಓ ಅಲ್ಲಿ ನಾಚಿಕೆಯಿಂದ ತಲೆ ತಗ್ಗಿಸಿ ನಿಂತವಳೆ
ರಾಮನನ್ನು ಕಾಡಿಗಟ್ಟಿದ ಹೆಂಗಸು-ಕೈಕೇಯಿ; ನಿರ್ಭಾಗ್ಯನಾದ ಈ ಭರತನನ್ನು
ಹಡೆದ ತಾಯಿ, "
 
ಆಗ ಭರದ್ವಾಜರು ಸಮಾಧಾನಗೊಳಿಸಿದರು :
 
(6
 
* ಭರತ, ಕೈಕೇಯಿ ಒಂದು ನಿಮಿತ್ತ ಮಾತ್ರ. ರಾಮಚಂದ್ರ ದೇವ
ಕಾರ್ಯಕ್ಕಾಗಿ ಕಾಡಿಗೆ ತೆರಳಿದ್ದಾನೆ. ತಾಯಿಯ ಮೇಲೆ ತಪ್ಪನ್ನು ಹೊರಿಸ
ಬೇಡ, ಪ್ರಭುವಿನ ಲೀಲಾ ನಾಟಕಕ್ಕೆ ನಾವೆಲ್ಲ ಒಂದಲ್ಲ ಒಂದು ನಿಮಿತ್ತಗಳು-
ಅಷ್ಟೆ. "
 
ಭರದ್ವಾಜರ ಒಪ್ಪಿಗೆ ಪಡೆದು ಅವರಿಂದ ರಾಮನ ಆಶ್ರಮದ ತಾಣವನ್ನು
ತಿಳಿದುಕೊಂಡು ಭರತನು ಅಲ್ಲಿಂದ ಹೊರಟನು. ಕ್ರಮೇಣ ಯಮುನೆಯನ್ನು
ದಾಟಿ ಚಿತ್ರಕೂಟವನ್ನು ಸೇರಿದನು. ಚಿತ್ರಕೂಟದ ತಪ್ಪಲಲ್ಲೆ ಸೈನ್ಯವನ್ನು
ನಿಲ್ಲಿಸಿ ಪುರೋಹಿತರೊಡನೆ-ಮಾತೆಯರೊಡನೆ ಭರತನು ಮುಂದುವರಿದನು.