This page has been fully proofread once and needs a second look.

ಭರತನ ಮಾತನ್ನು ಕೇಳಿದವರೆಲ್ಲರೂ ಸಂತಸ ದಿಂದ "ರಾಮ ಭಕ್ತನಾದ ನಿನಗೆ ಮಂಗಳವಾಗಲಿ " ಎಂದು ಕೊಂಡಾಡಿದರು.
 
ಸೈನಿಕರು-ಪ್ರಜೆಗಳ ಸಹಿತ ರಾಮನಿದ್ದಲ್ಲಿಗೆ ಹೋಗುವುದಕ್ಕಾಗಿ ಭರತನು ಶಿಲ್ಪಿಗಳಿಂದ ಆಳು- ಗಳಿಂದ ರಸ್ತೆಯನ್ನು ರಚಿಸಿದನು. ರಸ್ತೆ ಸಿದ್ಧವಾ- ದೊಡನೆ ಪ್ರಯಾಣ ಸಾಗಿತು. ತಾಯಂದಿರ ಜತೆಗೆ ಹೊರಟ ಭರತನನ್ನು ಎಲ್ಲ ಪೌರರೂ ಅನುಸರಿಸಿ- ದರು. ತಗ್ಗಿದ್ದಲ್ಲಿ ಹರಿವುದು ನೀರಿನ ಸ್ವಭಾವವಲ್ಲವೆ ? ಬಲಗುಂದಿದ ಮುದುಕರು-ಮಕ್ಕಳು ಕೂಡ ರಾಮ- ನನ್ನು ಕಾಣುವ ಆಸೆಯಿಂದ 'ನಾನು-ತಾನು' ಎಂದು ಈ ಕೂಟದಲ್ಲಿ ಸೇರಿಕೊಂಡರು !
 
ಗಂಗೆಯ ತಡಿಯಲ್ಲಿ ಸೈನ್ಯ ತಂಗಿತು. ಭರತನು ಗಂಗೆಯಲ್ಲೊಮ್ಮೆ ಪಿತೃತರ್ಪಣವನ್ನಿತ್ತನು. ಈ ಅಸಂಖ್ಯ ಸೇನೆಯನ್ನು ಕಂಡು ಗುಹನಿಗೆ ಸಂಶಯ
ಮೂಡಿತು. ಭರತನು ರಾಮನಿಗೆ ಎರಡೆಣಿಸಿ ಬಂದಿರ- ಬಹುದೆ ? ಆದರೆ ಭರತನನ್ನು ಕಂಡಾಗ - ಅವನೊ- ಡನೆ ಮಾತನಾಡಿದಾಗ, ಗುಹನು ತನ್ನ ಸಂಶಯಕ್ಕಾಗಿ
ತಾನೇ ನಾಚಿಕೊಳ್ಳುವಂತಾಯಿತು.
 
ಗುಹನು ಭರತನ ಬಯಕೆಯಂತೆ-ರಾಮನು ಇಳಿದಿದ್ದ ತಾಣ-ಅವನು ಮಲಗಿದ್ದ ತಾಣ-ಅವರಿಬ್ಬರೂ ಭೆಟ್ಟಿಯಾದಲ್ಲಿರುವ ಇಂಗುದೀವೃಕ್ಷ-ಎಲ್ಲವನ್ನೂ ತೋರಿಸಿದನು. ಭರತನಿಗೆ ಇದನ್ನೆಲ್ಲ ಕಾಣುವುದು ಸಾಧ್ಯವಾಗಲಿಲ್ಲ. ಅವನು
ಸಹಿಸಲಾರದೆ ಕುಸಿದು ಬಿದ್ದು ಬಿಟ್ಟ. ರಾಮ-ಸೀತೆ- ಯರನ್ನೂ ಲಕ್ಷ್ಮಣನನ್ನೂ ನೆನೆದು ಕೊಂಡಾಡಿದ.
 
ಆ ರಾತ್ರಿ ಹೀಗೆಯೇ ಸಾಗಿತು. ಅನಂತರ ಪ್ರಾತಃ- ಸಂಧ್ಯೆಯನ್ನು ತೀರಿಸಿಕೊಂಡು ಭರತನು ಪರಿವಾರ- ದೊಡನೆ ಗುಹನ ಸಹಕಾರದಿಂದ ಗಂಗೆಯನ್ನು ದಾಟಿ ಪ್ರಯಾಗವನ್ನು ಸೇರಿದನು. ಅಲ್ಲಿ ಭರದ್ವಾಜ ಮುನಿಗಳ ದರ್ಶನವಾಯಿತು.
 
ಭರತನ ಮಹಾ ಸೇನೆಯನ್ನು ಕಂಡು ಮುನಿಗಳೂ ಚಿಕಿತ್ಸಕ ದೃಷ್ಟಿಯಿಂದ ನುಡಿದರು :
 
"ರಾಮನನ್ನು ಕಾಡಿಗೆ ಕಳುಹಿಸಿಯಂತೂ ಆಯಿತು. ಈ ಸೈನ್ಯವನ್ನು ಕಟ್ಟಿಕೊಂಡು ಇನ್ನೂ ಏನು ಮಾಡಬೇಕೆಂದಿರುವೆ ಭರತ ? "
 
" ಮಹರ್ಷಿ, ತಾಯಿಯ ಕೈತವದಿಂದ ನನಗೆ ತಲೆ ತಗ್ಗಿಸುವಂತಾಗಿದೆ. ನಾನು ಬಂದದ್ದು ತಾಯಿಯ ಬಯಕೆಯನ್ನು ನಡೆಯಿಸಲಿಕ್ಕಲ್ಲ; ನಮ್ಮ ಅಣ್ಣ