This page has been fully proofread once and needs a second look.

ಬಗ್ಗಿ ನಮಸ್ಕರಿಸಿದರು. " ನಾನೇನೂ ರಾಜನಲ್ಲ. ನನಗೇಕೆ ಹಾಗೆ ನಮಸ್ಕರಿಸುತ್ತೀರಿ" ಎಂದು ಭರತನು ಅವರನ್ನು ಗದರಿಸಿ, ಶತ್ರುಘ್ನನೊಡನೆ ನುಡಿದನು.
 
" ತಮ್ಮ, ಕೈಕೇಯಿಯ ದುರ್ವರ್ತನೆಯ ಫಲ ವನ್ನು ಸ್ವಲ್ಪ ನೋಡು. ರಾಮನಿಲ್ಲದ ಅಯೋಧ್ಯೆ ವಿಧವೆಯಂತೆ ಕಾಂತಿಹೀನವಾಗಿದೆ. ರಾಷ್ಟ್ರ ಶೂನ್ಯ
ವಾಯಿತು ! ಜನಕುಲದ ಬಯಕೆ ಶೂನ್ಯವಾಯಿತು ! ತನ್ನ ಕರ್ಮಣಿಯನ್ನು ಬಲಿಯಿತ್ತು, ನನ್ನ ತಾಯಿ ಏನನ್ನು ಸಾಧಿಸಿಕೊಂಡಂತಾಯಿತು !"
 
ಮಂತ್ರಿಗಳೊಡನೆ ನಡೆದ ಮಂತ್ರಾಲೋಚನೆಯ ಪ್ರಕಾರ ಮಹಾರಾಜನ ಕಳೇಬರದ ಅಂತ್ಯಕ್ರಿಯೆಗೆ ಮೊದಲಾಯಿತು. ಪಾಲಕಿಯಲ್ಲಿ ಕಳೇಬರವನ್ನಿಟ್ಟು-
ಸರಯೂನದಿಯ ದಡಕ್ಕೆ ವೈಭವದಿಂದ
ಕೊಂಡೊಯ್ದು-ಅಗರು, ಚಂದನದ ಕಟ್ಟಿಗೆಗಳಿಂದ ಚಿತೆಯನ್ನು ಏರ್ಪಡಿಸಿ ಅಲಂಕೃತವಾದ ಕಳೇಬರ- ವನ್ನು ಭರತ-ಶತ್ರುಘ್ನರು ಅದರ ಮೇಲಿರಿಸಿದರು. ಚಿತೆಯ ಜ್ವಾಲೆ ಮುಗಿಲನ್ನು ಮುಟ್ಟಿತು.
 
ಪುರೋಹಿತರ ವಚನದಂತೆ ಎಲ್ಲ ಕಾರ್ಯವೂ ನೆರವೇರಿತು. ಅರೆಮನೆಯವರೂ ಪೌರರೂ-ಜಾನಪದರೂ ಸರಯುವಿನಲ್ಲಿ ಮಹಾರಾಜನಿಗೆ ಜಲಾಂಜಲಿಯನ್ನಿತ್ತರು. ಅಲ್ಲಿಂದ ಅಯೋಧ್ಯೆಗೆ ಮರಳುವುದೆಂದರೆ ಭರತನಿಗೆ ಬೇಸರ. ಕೊನೆಗೆ ಧರ್ಮಪಾಲನೆಂಬ ಮಂತ್ರಿ ಅವನನ್ನು ಹೇಗೋ ಸಮಾಧಾನಗೊಳಿಸಿ ಕರೆದುಕೊಂಡು ಹೋದನು.
 
ಆಶೌಚ ಮುಗಿದ ನಂತರ ಶ್ರಾದ್ಧಾದಿ ಕರ್ಮ- ಗಳನ್ನು ವೈಭವದಿಂದ ನೆರವೇರಿಸಿದ ಭರತ ವಿಪ್ರರಿಗೆ ಬೇಕಾದಷ್ಟು ಗ್ರಾಮಗಳನ್ನೂ ಧನಧಾನ್ಯಗಳನ್ನೂ
ಧಾರೆಯೆರೆದನು. ಹೀಗೆ ಮಹಾರಾಜನ ಅಂತ್ಯಕ್ರಿಯೆ ಸಾಂಗವಾಗಿ ನೆರವೇರಿತು.
 
ಒಂದು ದಿನ ಮಂತ್ರಿಗಳು ಭರತನ ಬಳಿ ವಿಜ್ಞಾಪಿಸಿಕೊಂಡರು:
 
" ಭರತ, ರಾಷ್ಟ್ರ ರಾಜಕವಾಗಿದೆ. ಎಷ್ಟು ದಿನ ಹೀಗಿರಲು ಸಾಧ್ಯ? ಪ್ರಜೆಗಳು ವಿನಂತಿಸಿಕೊಳ್ಳುತ್ತಿ- ದ್ದಾರೆ. ನೀನು ಅವರ ಅಧಿರಾಜನಾಗಿ ರಕ್ಷಣೆಯ
ಪಣ ತೊಡಬೇಕು."
 
" ಅಮಾತ್ಯರೆ, ಪ್ರಜೆಗಳ ಬಯಕೆಯೇನೋ ಸ್ವಾಭಾವಿಕವಾದುದೇ. ಆದರೆ ರಾಮಚಂದ್ರನನ್ನು ತೊರೆದು ನಾನು ರಾಜನಾಗುವುದು ಸಾಧ್ಯವಿಲ್ಲ.
ರಾಮನ ಬದಲು ನಾನು ವನವಾಸವನ್ನು ಅನು- ಭವಿಸುತ್ತೇನೆ. ಏನಿದ್ದರೂ ಕೈಕೇಯಿಯ ಬಯಕೆ ಮಣ್ಣುಗೂಡುವುದು ನನಗೆ ಬೇಕಾಗಿದೆ. "