This page has been fully proofread once and needs a second look.

ಮಿಂಚಿನಬಳ್ಳಿ
 
66
 
ಬಗ್ಗಿ ನಮಸ್ಕರಿಸಿದರು. " ನಾನೇನೂ ರಾಜನಲ್ಲ. ನನಗೇಕೆ ಹಾಗೆ ನಮಸ್ಕ
ರಿಸುತ್ತೀರಿ" ಎಂದು ಭರತನು ಅವರನ್ನು ಗದರಿಸಿ, ಶತ್ರುಘ್ನನೊಡನೆ ನುಡಿದನು.

" ತಮ್ಮ,
ಕೈಕೇಯಿಯ ದುರ್ವತ್ರರ್ತನೆಯ ಫಲ ವನ್ನು ಸ್ವಲ್ಪ ನೋಡು.
ರಾಮನಿಲ್ಲದ ಅಯೋಧ್ಯೆ ವಿಧವೆಯಂತೆ ಕಾಂತಿಹೀನವಾಗಿದೆ. ರಾಷ್ಟ್ರ ಶೂನ್ಯ

ವಾಯಿತು ! ಜನಕುಲದ ಬಯಕೆ ಶೂನ್ಯವಾಯಿತು ! ತನ್ನ ಕರ್ಮಣಿಯನ್ನು
ಬಲಿಯಿತ್ತು, ನನ್ನ ತಾಯಿ ಏನನ್ನು ಸಾಧಿಸಿಕೊಂಡಂತಾಯಿತು !"
 
" ತಮ್ಮ
 
2
 

 
ಮಂತ್ರಿಗಳೊಡನೆ ನಡೆದ ಮಂತ್ರಾಲೋಚನೆಯ ಪ್ರಕಾರ ಮಹಾರಾಜನ
ಕಳೇಬರದ ಅಂತ್ಯಕ್ರಿಯೆಗೆ ಮೊದಲಾಯಿತು. ಪಾಲಕಿಯಲ್ಲಿ ಕಳೇಬರವನ್ನಿಟ್ಟು-

ಸರಯೂನದಿಯ ದಡಕ್ಕೆ ವೈಭವದಿಂದ
ಕೊಂಡೊಯ್ದು-ಅಗರು, ಚಂದನದ ಕಟ್ಟಿಗೆ
ಗಳಿಂದ ಚಿತೆಯನ್ನು ಏಪ್ರ್ಪಡಿಸಿ ಅಲಂಕೃತವಾದ ಕಳೇಬರ- ವನ್ನು ಭರತ-ಶತ್ರುಘ್ನರು
ಅದರ ಮೇಲಿರಿಸಿದರು. ಚಿತೆಯ ಜ್ವಾಲೆ ಮುಗಿಲನ್ನು ಮುಟ್ಟಿತು.
 

 
ಪುರೋಹಿತರ ವಚನದಂತೆ ಎಲ್ಲ ಕಾರ್ಯವೂ ನೆರವೇರಿತು. ಅರೆಮನೆ
ಯವರೂ ಪೌರರೂ-ಜಾನಪದರೂ ಸರಯುವಿನಲ್ಲಿ ಮಹಾರಾಜನಿಗೆ ಜಲಾಂಜಲಿ
ಯನ್ನಿತ್ತರು. ಅಲ್ಲಿಂದ ಅಯೋಧ್ಯೆಗೆ ಮರಳುವುದೆಂದರೆ ಭರತನಿಗೆ ಬೇಸರ.
ಕೊನೆಗೆ ಧರ್ಮಪಾಲನೆಂಬ ಮಂತ್ರಿ ಅವನನ್ನು ಹೇಗೋ ಸಮಾಧಾನಗೊಳಿಸಿ
ಕರೆದುಕೊಂಡು ಹೋದನು.
 

 
ಆಶೌಚ ಮುಗಿದ ನಂತರ ಶ್ರಾದ್ಧಾದಿ ಕರ್ಮ- ಗಳನ್ನು ವೈಭವದಿಂದ ನೆರ
ವೇರಿಸಿದ ಭರತ ವಿಪುಪ್ರರಿಗೆ ಬೇಕಾದಷ್ಟು ಗ್ರಾಮಗಳನ್ನೂ ಧನಧಾನ್ಯಗಳನ್ನೂ

ಧಾರೆಯೆರೆದನು. ಹೀಗೆ ಮಹಾರಾಜನ ಅಂತ್ಯಕ್ರಿಯೆ ಸಾಂಗವಾಗಿ ನೆರವೇರಿತು.

 
ಒಂದು ದಿನ ಮಂತ್ರಿಗಳು ಭರತನ ಬಳಿ ವಿಜ್ಞಾಪಿಸಿಕೊಂಡರು:
 
66
 
*

 
"
ಭರತ, ರಾಷ್ಟ್ರ ರಾಜಕವಾಗಿದೆ. ಎಷ್ಟು ದಿನ ಹೀಗಿರಲು ಸಾಧ್ಯ?
ಪ್ರಜೆಗಳು ವಿನಂತಿಸಿಕೊಳ್ಳುತ್ತಿ- ದ್ದಾರೆ. ನೀನು ಅವರ ಅಧಿರಾಜನಾಗಿ ರಕ್ಷಣೆಯ

ಪಣ ತೊಡಬೇಕು.
 
"
 
"
ಅಮಾತ್ಯರೆ, ಪ್ರಜೆಗಳ ಬಯಕೆಯೇನೋ ಸ್ವಾಭಾವಿಕವಾದುದೇ
. ಆದರೆ ರಾಮಚಂದ್ರನನ್ನು ತೊರೆದು ನಾನು ರಾಜನಾಗುವುದು ಸಾಧ್ಯವಿಲ್ಲ.

ರಾಮನ ಬದಲು ನಾನು ವನವಾಸವನ್ನು ಅನು- ಭವಿಸುತ್ತೇನೆ. ಏನಿದ್ದರೂ
ಕೈಕೇಯಿಯ ಬಯಕೆ ಮಣ್ಣುಗೂಡುವುದು ನನಗೆ ಬೇಕಾಗಿದೆ,. "
 
66