This page has not been fully proofread.

ಮಿಂಚಿನಬಳ್ಳಿ
 
66
 
ಬಗ್ಗಿ ನಮಸ್ಕರಿಸಿದರು. " ನಾನೇನೂ ರಾಜನಲ್ಲ. ನನಗೇಕೆ ಹಾಗೆ ನಮಸ್ಕ
ರಿಸುತ್ತೀರಿ" ಎಂದು ಭರತನು ಅವರನ್ನು ಗದರಿಸಿ, ಶತ್ರುಘ್ನನೊಡನೆ ನುಡಿದನು.
ಕೈಕೇಯಿಯ ದುರ್ವತ್ರನೆಯ ಫಲವನ್ನು ಸ್ವಲ್ಪ ನೋಡು.
ರಾಮನಿಲ್ಲದ ಅಯೋಧ್ಯೆ ವಿಧವೆಯಂತೆ ಕಾಂತಿಹೀನವಾಗಿದೆ. ರಾಷ್ಟ್ರ ಶೂನ್ಯ
ವಾಯಿತು ! ಜನಕುಲದ ಬಯಕೆ ಶೂನ್ಯವಾಯಿತು ! ತನ್ನ ಕರ್ಮಣಿಯನ್ನು
ಬಲಿಯಿತ್ತು, ನನ್ನ ತಾಯಿ ಏನನ್ನು ಸಾಧಿಸಿಕೊಂಡಂತಾಯಿತು !"
 
" ತಮ್ಮ
 
2
 
ಮಂತ್ರಿಗಳೊಡನೆ ನಡೆದ ಮಂತ್ರಾಲೋಚನೆಯ ಪ್ರಕಾರ ಮಹಾರಾಜನ
ಕಳೇಬರದ ಅಂತ್ಯಕ್ರಿಯೆಗೆ ಮೊದಲಾಯಿತು. ಪಾಲಕಿಯಲ್ಲಿ ಕಳೇಬರವನ್ನಿಟ್ಟು-
ಸರಯೂನದಿಯ ದಡಕ್ಕೆ ವೈಭವದಿಂದ ಕೊಂಡೊಯ್ದು-ಅಗರು, ಚಂದನದ ಕಟ್ಟಿಗೆ
ಗಳಿಂದ ಚಿತೆಯನ್ನು ಏಪ್ಪಡಿಸಿ ಅಲಂಕೃತವಾದ ಕಳೇಬರವನ್ನು ಭರತ-ಶತ್ರುಘ್ನರು
ಅದರ ಮೇಲಿರಿಸಿದರು. ಚಿತೆಯ ಜ್ವಾಲೆ ಮುಗಿಲನ್ನು ಮುಟ್ಟಿತು.
 
ಪುರೋಹಿತರ ವಚನದಂತೆ ಎಲ್ಲ ಕಾರ್ಯವೂ ನೆರವೇರಿತು. ಅರೆಮನೆ
ಯವರೂ ಪೌರರೂ-ಜಾನಪದರೂ ಸರಯುವಿನಲ್ಲಿ ಮಹಾರಾಜನಿಗೆ ಜಲಾಂಜಲಿ
ಯನ್ನಿತ್ತರು. ಅಲ್ಲಿಂದ ಅಯೋಧ್ಯೆಗೆ ಮರಳುವುದೆಂದರೆ ಭರತನಿಗೆ ಬೇಸರ.
ಕೊನೆಗೆ ಧರ್ಮಪಾಲನೆಂಬ ಮಂತ್ರಿ ಅವನನ್ನು ಹೇಗೋ ಸಮಾಧಾನಗೊಳಿಸಿ
ಕರೆದುಕೊಂಡು ಹೋದನು.
 
ಆಶೌಚ ಮುಗಿದ ನಂತರ ಶ್ರಾದ್ಧಾದಿ ಕರ್ಮಗಳನ್ನು ವೈಭವದಿಂದ ನೆರ
ವೇರಿಸಿದ ಭರತ ವಿಪುರಿಗೆ ಬೇಕಾದಷ್ಟು ಗ್ರಾಮಗಳನ್ನೂ ಧನಧಾನ್ಯಗಳನ್ನೂ
ಧಾರೆಯೆರೆದನು. ಹೀಗೆ ಮಹಾರಾಜನ ಅಂತ್ಯಕ್ರಿಯೆ ಸಾಂಗವಾಗಿ ನೆರವೇರಿತು.
ಒಂದು ದಿನ ಮಂತ್ರಿಗಳು ಭರತನ ಬಳಿ ವಿಜ್ಞಾಪಿಸಿಕೊಂಡರು:
 
66
 
* ಭರತ, ರಾಷ್ಟ್ರ ರಾಜಕವಾಗಿದೆ. ಎಷ್ಟು ದಿನ ಹೀಗಿರಲು ಸಾಧ್ಯ?
ಪ್ರಜೆಗಳು ವಿನಂತಿಸಿಕೊಳ್ಳುತ್ತಿದ್ದಾರೆ. ನೀನು ಅವರ ಅಧಿರಾಜನಾಗಿ ರಕ್ಷಣೆಯ
ಪಣ ತೊಡಬೇಕು.
 
ಅಮಾತ್ಯರೆ, ಪ್ರಜೆಗಳ ಬಯಕೆಯೇನೋ ಸ್ವಾಭಾವಿಕವಾದುದೇ
ಆದರೆ ರಾಮಚಂದ್ರನನ್ನು ತೊರೆದು ನಾನು ರಾಜನಾಗುವುದು ಸಾಧ್ಯವಿಲ್ಲ.
ರಾಮನ ಬದಲು ನಾನು ವನವಾಸವನ್ನು ಅನುಭವಿಸುತ್ತೇನೆ. ಏನಿದ್ದರೂ
ಕೈಕೇಯಿಯ ಬಯಕೆ ಮಣ್ಣುಗೂಡುವುದು ನನಗೆ ಬೇಕಾಗಿದೆ,"
 
66