This page has been fully proofread once and needs a second look.

ಸಂಗ್ರಹರಾಮಾಯಣ
 
ಹೊನ್ನ ಹಾವುಗೆ ಹೊತ್ತು ತಂದನು
 

 
ಸೂರ್ಯನ ಹೊಂಬೆಳಕು ಅಯೋಧ್ಯೆಯನ್ನು ಬೆಳಗಿಸಿದರೂ ಭರತನ
ಅಂತರಂಗದಲ್ಲಿ ಇನ್ನೂ ಕತ್ತಲು ದಟ್ಟಿಟೈಸಿತ್ತು. ಅದನ್ನರಿತ ವಸಿಷ್ಠರು ಮುಂದಿನ
ಕಾರ್ಯಕ್ಕಾಗಿ ಅವನನ್ನು ಪ್ರೇರಿಸಿದರು.
 
2.88
 
*
:
 
"
ಆಯುಷ್ಮನ್, ಎದ್ದೇಳು. ತಂದೆಯ ಉತ್ತರ ಕ್ರಿಯೆ- ಯನ್ನು ನೆರವೇ
ರಿಸು. ತೆರವಾದ ರಾಜಾಸನವನ್ನ- ಲಂಕರಿಸು, ನಡೆದುದಕ್ಕಾಗಿ ಚಿಂತಿಸಬೇಡ.
ಇದೆಲ್ಲ ಕಾಲಪುರುಷನ ಲೀಲೆ. ವಿದ್ವಾಂಸರು ಸುಖಬಂದಾಗ ಉಬ್ಬುವುದಿಲ್ಲ;
ದುಃಖಬಂದಾಗ ಕುಗ್ಗುವುದೂ ಇಲ್ಲ. ಲೋಕದ ಗತಿಯೇ ಹೀಗೆ ! "

 
ಕಣ್ಣೀರನೊರಸುತ್ತ ಭರತನು ಪಡಿನುಡಿದನು:
 
66
 

 
"
ಗುರುಗಳೆ, ದುಃಖದಲ್ಲಿ ಕುಗ್ಗದಷ್ಟು ನನ್ನ ಪ್ರಜ್ಞೆ ಇನ್ನೂ ಪಕ್ವವಾಗಿಲ್ಲ.
ರಾಮನನ್ನು ಬಿಟ್ಟು ನಾನಿರ ಲಾರೆ. ಕಾಡಿನಲ್ಲಿ ರಾಮನಸೇವೆ ಮಾಡಿಕೊಂಡಿ
-
ರುವುದು ಸಾಮ್ರಾಜ್ಯ ಸುಖಕ್ಕಿಂತ ನೂರುಪಟ್ಟು ಮಿಗಿಲು. ಬ್ರಹ್ಮನಂದನರಾದ
ಮಹರ್ಷಿಗಳೆ, ಜಗನ್ನಾಥನಾದ ರಾಮಚಂದ್ರನನ್ನು ಕಾಡಿಗಟ್ಟಿ 'ಸ್ವಾಮಿನ್',
'ಮಹಾರಾಜ' ಎಂದು ನಿಮ್ಮಿಂದ ಸಂಬೋಧಿಸಿಕೊಳ್ಳುವ ನಾಟಕ ನನಗೆ
 
ಬೇಡ."
 
ಭರತನ ಸೌಜನ್ಯವನ್ನು ಕಂಡು ಪ್ರಜೆಗಳೂ ಕಾರುಣ್ಯದಲ್ಲಿ ಕರಗಿ
 
ಹೋದರು !
 

 
ವಸಿಷ್ಠರು ಭರತನನ್ನು ರಾಣೀವಾಸಕ್ಕೆ ಕರೆ- ದೊಯ್ದರು. ಅಲ್ಲಿ ಎಣ್ಣೆಯ
ದೋಣಿಯಲ್ಲಿ ಹಾಕಿದ್ದ ದಶರಥನ ಕಳೇಬರವನ್ನು ಕಂಡಾಗ ಭರತನಿಗೆ ದು:ಖ

ತಡೆಯಲಾಗಲಿಲ್ಲ. ಅಂತಃಪುರದ ಹದಿನಾಲ್ಕು ಸಾವಿರ ಸ್ತ್ರೀಯರು, ರಾಜಪತ್ನಿ
ಯರು ಎಲ್ಲರೊಡನೆ ಭರತನೂ ಗೋಳೋ ಎಂದು ಅತ್ತು ಬಿಟ್ಟನು.
 

 
ಮತ್ತೆ ವಸಿಷ್ಠರೇ ಬಂದು ಸಮಾಧಾನಗೊಳಿಸ- ಬೇಕಾಯಿತು:
 
(C
 
*

 
"
ಪ್ರಾಕೃತಜನರಂತೆ ಅಳುತ್ತ ಕುಳಿತಿರುವುದು ಚೆನ್ನಲ್ಲ ಭರತ, ಬಂಧುಗಳ
ಕಣ್ಣೀರು ಸ್ವರ್ಗದಲ್ಲಿ- ರುವ ಪುಣ್ಯಜೀವಿಯನ್ನು ಕೆಳಕ್ಕೆ ತಳ್ಳುವುದಂತೆ. ಕಣ್
ಣೊರಸಿಕೊ ಭರತ. ಮುಂದಿನ ಕೆಲಸಕ್ಕೆ ಅಣಿ- ಯಾಗು. "
 

 
ಭರತನು " ಗುರುಗಳ ಅಪ್ಪಣೆ " ಎಂದು ಎದ್ದು ಹೊರಟನು. ಅವನು
ಬರುತ್ತಿದ್ದಾಗ ದಾರಿಯಲ್ಲಿಯ ಕೆಲಸದಾಳುಗಳು ಅವನಿಗೆ ಮಹಾರಾಜನಿಗೆಂಬಂತೆ