2023-03-15 15:35:34 by ambuda-bot
This page has not been fully proofread.
ಸಂಗ್ರಹರಾಮಾಯಣ
ಹೊನ್ನ ಹಾವುಗೆ ಹೊತ್ತು ತಂದನು
ಸೂರ್ಯನ ಹೊಂಬೆಳಕು ಅಯೋಧ್ಯೆಯನ್ನು ಬೆಳಗಿಸಿದರೂ ಭರತನ
ಅಂತರಂಗದಲ್ಲಿ ಇನ್ನೂ ಕತ್ತಲು ದಟ್ಟಿಸಿತ್ತು. ಅದನ್ನರಿತ ವಸಿಷ್ಠರು ಮುಂದಿನ
ಕಾರ್ಯಕ್ಕಾಗಿ ಅವನನ್ನು ಪ್ರೇರಿಸಿದರು.
2.88
* ಆಯುಷ್ಮನ್, ಎದ್ದೇಳು. ತಂದೆಯ ಉತ್ತರ ಕ್ರಿಯೆಯನ್ನು ನೆರವೇ
ರಿಸು. ತೆರವಾದ ರಾಜಾಸನವನ್ನಲಂಕರಿಸು, ನಡೆದುದಕ್ಕಾಗಿ ಚಿಂತಿಸಬೇಡ.
ಇದೆಲ್ಲ ಕಾಲಪುರುಷನ ಲೀಲೆ. ವಿದ್ವಾಂಸರು ಸುಖಬಂದಾಗ ಉಬ್ಬುವುದಿಲ್ಲ;
ದುಃಖಬಂದಾಗ ಕುಗ್ಗುವುದೂ ಇಲ್ಲ. ಲೋಕದ ಗತಿಯೇ ಹೀಗೆ ! "
ಕಣ್ಣೀರನೊರಸುತ್ತ ಭರತನು ಪಡಿನುಡಿದನು:
66
ಗುರುಗಳೆ, ದುಃಖದಲ್ಲಿ ಕುಗ್ಗದಷ್ಟು ನನ್ನ ಪ್ರಜ್ಞೆ ಇನ್ನೂ ಪಕ್ವವಾಗಿಲ್ಲ.
ರಾಮನನ್ನು ಬಿಟ್ಟು ನಾನಿರಲಾರೆ. ಕಾಡಿನಲ್ಲಿ ರಾಮನಸೇವೆ ಮಾಡಿಕೊಂಡಿ
ರುವುದು ಸಾಮ್ರಾಜ್ಯ ಸುಖಕ್ಕಿಂತ ನೂರುಪಟ್ಟು ಮಿಗಿಲು. ಬ್ರಹ್ಮನಂದನರಾದ
ಮಹರ್ಷಿಗಳೆ, ಜಗನ್ನಾಥನಾದ ರಾಮಚಂದ್ರನನ್ನು ಕಾಡಿಗಟ್ಟಿ 'ಸ್ವಾಮಿನ್',
'ಮಹಾರಾಜ' ಎಂದು ನಿಮ್ಮಿಂದ ಸಂಬೋಧಿಸಿಕೊಳ್ಳುವ ನಾಟಕ ನನಗೆ
ಭರತನ ಸೌಜನ್ಯವನ್ನು ಕಂಡು ಪ್ರಜೆಗಳೂ ಕಾರುಣ್ಯದಲ್ಲಿ ಕರಗಿ
ಹೋದರು !
ವಸಿಷ್ಠರು ಭರತನನ್ನು ರಾಣೀವಾಸಕ್ಕೆ ಕರೆದೊಯ್ದರು. ಅಲ್ಲಿ ಎಣ್ಣೆಯ
ದೋಣಿಯಲ್ಲಿ ಹಾಕಿದ್ದ ದಶರಥನ ಕಳೇಬರವನ್ನು ಕಂಡಾಗ ಭರತನಿಗೆ ದು:ಖ
ತಡೆಯಲಾಗಲಿಲ್ಲ. ಅಂತಃಪುರದ ಹದಿನಾಲ್ಕು ಸಾವಿರ ಸ್ತ್ರೀಯರು, ರಾಜಪತ್ನಿ
ಯರು ಎಲ್ಲರೊಡನೆ ಭರತನೂ ಗೋಳೋ ಎಂದು ಅತ್ತು ಬಿಟ್ಟನು.
ಮತ್ತೆ ವಸಿಷ್ಠರೇ ಬಂದು ಸಮಾಧಾನಗೊಳಿಸಬೇಕಾಯಿತು:
(C
* ಪ್ರಾಕೃತಜನರಂತೆ ಅಳುತ್ತ ಕುಳಿತಿರುವುದು ಚೆನ್ನಲ್ಲ ಭರತ, ಬಂಧುಗಳ
ಕಣ್ಣೀರು ಸ್ವರ್ಗದಲ್ಲಿರುವ ಪುಣ್ಯಜೀವಿಯನ್ನು ಕೆಳಕ್ಕೆ ತಳ್ಳುವುದಂತೆ. ಕಣ್ಣ
ರಸಿಕೊ ಭರತ. ಮುಂದಿನ ಕೆಲಸಕ್ಕೆ ಅಣಿಯಾಗು. "
ಭರತನು " ಗುರುಗಳ ಅಪ್ಪಣೆ " ಎಂದು ಎದ್ದು ಹೊರಟನು. ಅವನು
ಬರುತ್ತಿದ್ದಾಗ ದಾರಿಯಲ್ಲಿಯ ಕೆಲಸದಾಳುಗಳು ಅವನಿಗೆ ಮಹಾರಾಜನಿಗೆಂಬಂತೆ