This page has been fully proofread once and needs a second look.

ಮಿಂಚಿನಬಳ್ಳಿ
 
ಕೃತಾಂತನ ಕಾಲಪಾಶದ ಕುಣಿಕೆಯನ್ನು ತಪ್ಪಿಸು- ವುದು ನಮ್ಮಿಂದ ಯಾರಿಂದಲೂ
ಸಾಧ್ಯವಿಲ್ಲ.
 
""
 

 
ಭರತನು ಶತ್ರುಘ್ನನನ್ನು ಕರೆದುಕೊಂಡು ಬಂದು ಕೌಸಲ್ಯೆಗೂ ಸುಮಿ
ತೆ
ತ್ರೆಗೂ ಸಂಕೋಚದಿಂದ ಕುಗ್ಗಿ ನಮಸ್ಕರಿಸಿದನು.
ಕೌಸಲ್ಯೆಗೆ ಭರತನ ಇಂಗಿತದ ಅರಿವಾಗಲಿಲ್ಲ. ಅವನು ಯುವರಾಜದರ್ಪವನ್ನು ಮೆರೆಯಿಸಲಿ
ಕ್ಕೆಂದೇ ಬಂದಿರಬೇಕೆಂದು ಬಗೆದು ಸ್ವಲ್ಪು ನಂಜುಮಾತನ್ನೇ ಆಡಿದಳು:
 
ಕೌಸಲ್ಯಗೆ ಭರತನ
 
*

 
"
ಭರತ, ನಿನ್ನ ತಾಯಿ ನಿನಗೆ ರಾಜ್ಯವನ್ನು ಕೊಡಿಸಿದ್ದಾಳೆ. ನೀನಾ
ದರೂ ರಾಜನಾಗಿ ಸುಖಪಡು. ನಿನ್ನ ತಂದೆಯನ್ನು ಕೊಂದು ಅಣ್ಣನನ್ನು

ಓಡಿಸಿ, ನಿನ್ನ ತಾಯಿ ಪಡೆದ ಸೌಭಾಗ್ಯವನ್ನು ಅನುಭವಿಸು ವತ್ಸ,. ನಾನೂ
ಸುಮಿತ್ರೆಯೂ ರಾಮ- ನಿದ್ದಲ್ಲಿಗೆ ಹೋಗಿಬಿಡುವೆವು. "
 

 
ಕೌಸಲ್ಯೆಯ ಮಾತನ್ನು ಭರತನಿಂದ ಸಹಿಸುವು- ದಾಗಲಿಲ್ಲ. " ಓ ನನ್ನ
ತಾಯಿ, ಹಾಗೆನ್ನದಿರು" ಎಂದು ಅವಳ ಕಾಲಿಗೆ ಅಡ್ಡ ಬಿದ್ದು ವಿಜ್ಞಾಪಿ
ಕೊಂಡನು:
 

 
" ನನ್ನ ಭಾವವನ್ನರಿಯದೆ ನನ್ನನ್ನು ಹಂಗಿಸ- ಬೇಡ ತಾಯಿ, ನಾನು
ರಾಮಚಂದ್ರನ ಚರಣ ದಾಸ, ಈ ಮಾತು ಮೂರುಕಾಲಕ್ಕೂ ಸತ್ಯ. ರಾಮ
ಚಂದ್ರ-ನನ್ನು ಕಾಡಿಗಟ್ಟಿ ನಾನು ರಾಜ್ಯವನ್ನು ಭೋಗಿಸಿದೆ- ನಾದರೆ, ಪ್ರಪಂಚದ
ಎಲ್ಲ ಪಾತಕಿಗಳ ಎಲ್ಲ ಪಾತಕವೂ ನನಗೆ ಬರಲಿ,
 
."
 
ಭರತನ ಸರಳತೆಯನ್ನು ಕಂಡು ಕೌಸಲ್ಯೆಗೆ ಆನಂದವಾಯಿತು. ಅವಳು
ನುಡಿದಳು:
 

 
" ನನಗೆ ಗೊತ್ತು ಕಂದ. ನೀನು ಅಂಥವನಲ್ಲ. ಏನಾದರೂ ನೀನು
ರಾಮಚಂದ್ರನ ತಮ್ಮನಲ್ಲವೆ ? ಹೋಗು ಭರತ, ತಂದೆಯ ಸಂಸ್ಕಾರವನ್ನು

ಪೂರಯಿಸು; ರಾಜ್ಯದ ಉತ್ತರಾಧಿಕಾರಿಯಾಗು. ಹದಿನಾಲ್ಕು ವರ್ಷಗಳ
ನಂತರ ಸೋದರರೆಲ್ಲ ಸೇರುವಿರಂತೆ,. "
 

 
ಆ ರಾತ್ರಿಯಿಡೀ ಭರತನಿಗೆ ರಾಮನದೇ ಚಿಂತೆ.

ಆ ರಾಷ್ಟ್ರದ ಜನರಿಗೂ
ಹಾಗೆಯೆ. ಎಲ್ಲರಿಗೂ ರಾಮಚಂದ್ರನದೇ ಚಿಂತೆ. ಆದರೂ ಅವರು ಸು
ಖಿ-
ಗಳೆಂದೇ ಹೇಳಬೇಕು. ಭಗವಂತನ ನಿರಂತರ ಸ್ಮರಣೆ- ಗಿಂತ ಮಿಗಿಲಾದ ಸುಖ
ನಾ
ವಾದರೂ ಏನಿದೆ ?