This page has not been fully proofread.

ಮಿಂಚಿನಬಳ್ಳಿ
 
ಕೃತಾಂತನ ಕಾಲಪಾಶದ ಕುಣಿಕೆಯನ್ನು ತಪ್ಪಿಸುವುದು ನಮ್ಮಿಂದ ಯಾರಿಂದಲೂ
ಸಾಧ್ಯವಿಲ್ಲ.
 
""
 
ಭರತನು ಶತ್ರುಘ್ನನನ್ನು ಕರೆದುಕೊಂಡು ಬಂದು ಕೌಸಲ್ಯಗೂ ಸುಮಿ
ತೆಗೂ ಸಂಕೋಚದಿಂದ ಕುಗ್ಗಿ ನಮಸ್ಕರಿಸಿದನು.
ಇಂಗಿತದ ಅರಿವಾಗಲಿಲ್ಲ. ಅವನು ಯುವರಾಜದರ್ಪವನ್ನು ಮೆರೆಯಿಸಲಿ
ಕ್ಕೆಂದೇ ಬಂದಿರಬೇಕೆಂದು ಬಗೆದು ಸ್ವಲ್ಪು ನಂಜುಮಾತನ್ನೇ ಆಡಿದಳು:
 
ಕೌಸಲ್ಯಗೆ ಭರತನ
 
* ಭರತ, ನಿನ್ನ ತಾಯಿ ನಿನಗೆ ರಾಜ್ಯವನ್ನು ಕೊಡಿಸಿದ್ದಾಳೆ. ನೀನಾ
ದರೂ ರಾಜನಾಗಿ ಸುಖಪಡು. ನಿನ್ನ ತಂದೆಯನ್ನು ಕೊಂದು ಅಣ್ಣನನ್ನು
ಓಡಿಸಿ, ನಿನ್ನ ತಾಯಿ ಪಡೆದ ಸೌಭಾಗ್ಯವನ್ನು ಅನುಭವಿಸು ವತ್ಸ, ನಾನೂ
ಸುಮಿತ್ರೆಯೂ ರಾಮನಿದ್ದಲ್ಲಿಗೆ ಹೋಗಿಬಿಡುವೆವು. "
 
ಕೌಸಲ್ಯಯ ಮಾತನ್ನು ಭರತನಿಂದ ಸಹಿಸುವುದಾಗಲಿಲ್ಲ. " ಓ ನನ್ನ
ತಾಯಿ, ಹಾಗೆನ್ನದಿರು" ಎಂದು ಅವಳ ಕಾಲಿಗೆ ಅಡ್ಡ ಬಿದ್ದು ವಿಜ್ಞಾಪಿ
ಕೊಂಡನು:
 
" ನನ್ನ ಭಾವವನ್ನರಿಯದೆ ನನ್ನನ್ನು ಹಂಗಿಸಬೇಡ ತಾಯಿ, ನಾನು
ರಾಮಚಂದ್ರನ ಚರಣ ದಾಸ, ಈ ಮಾತು ಮೂರುಕಾಲಕ್ಕೂ ಸತ್ಯ. ರಾಮ
ಚಂದ್ರನನ್ನು ಕಾಡಿಗಟ್ಟಿ ನಾನು ರಾಜ್ಯವನ್ನು ಭೋಗಿಸಿದೆನಾದರೆ, ಪ್ರಪಂಚದ
ಎಲ್ಲ ಪಾತಕಿಗಳ ಎಲ್ಲ ಪಾತಕವೂ ನನಗೆ ಬರಲಿ,
 
ಭರತನ ಸರಳತೆಯನ್ನು ಕಂಡು ಕೌಸಲ್ಯಗೆ ಆನಂದವಾಯಿತು. ಅವಳು
ನುಡಿದಳು:
 
" ನನಗೆ ಗೊತ್ತು ಕಂದ. ನೀನು ಅಂಥವನಲ್ಲ. ಏನಾದರೂ ನೀನು
ರಾಮಚಂದ್ರನ ತಮ್ಮನಲ್ಲವೆ ? ಹೋಗು ಭರತ, ತಂದೆಯ ಸಂಸ್ಕಾರವನ್ನು
ಪೂರಯಿಸು; ರಾಜ್ಯದ ಉತ್ತರಾಧಿಕಾರಿಯಾಗು. ಹದಿನಾಲ್ಕು ವರ್ಷಗಳ
ನಂತರ ಸೋದರರೆಲ್ಲ ಸೇರುವಿರಂತೆ, "
 
ಆ ರಾತ್ರಿಯಿಡೀ ಭರತನಿಗೆ ರಾಮನದೇ ಚಿಂತೆ.
ಆ ರಾಷ್ಟ್ರದ ಜನರಿಗೂ
ಹಾಗೆಯೆ ಎಲ್ಲರಿಗೂ ರಾಮಚಂದ್ರನದೇ ಚಿಂತೆ. ಆದರೂ ಅವರು ಸುಖ
ಗಳೆಂದೇ ಹೇಳಬೇಕು. ಭಗವಂತನ ನಿರಂತರ ಸ್ಮರಣೆಗಿಂತ ಮಿಗಿಲಾದ ಸುಖ
ನಾದರೂ ಏನಿದೆ ?