This page has been fully proofread once and needs a second look.

ಸಂಗ್ರಹರಾಮಾಯಣ
 
ಇಂದೇ ಈ ಶರೀರವನ್ನು ತೊರೆದುಬಿಡುತ್ತೇನೆ. ಗಂಡನನ್ನು ಕೊಂದವಳಿಗೆ
ಮಗನ ಸಾವಿನಿಂದೇ- ನಾದೀತು? ನೀನು ಅಶ್ವಪತಿಯ ಮಗಳಲ್ಲ; ಯಾವನೋ
ರಾಕ್ಷಸನ ಮಗಳು ! ಮನುಷ್ಯರಾದವರು ಇಂಥ ಕೆಲಸವನ್ನು ಮಾಡುವ
 
ದುಂಟೆ ! "
 
೭೩
 

 
ಶತ್ರುಘ್ನನಿಗೆ ಇದನ್ನೆಲ್ಲ ಕೇಳಿ ಎಲ್ಲಿಲ್ಲದ ಅಚ್ಚರಿ ! ಹೆಣ್ಣು ಹೆಂಗಸಿನ
ಮಾತಿಗೆ ರಾಮಚಂದ್ರ ರಾಜ್ಯ ತೊರೆವುದೆಂದರೇನು ? ಕಾಡಿಗೆ ತೆರಳುವುದೆಂದ
ರೇನು ? ಒಂದು ವೇಳೆ ರಾಮಚಂದ್ರ ಹೊರಟರೂ ಲಕ್ಷಣ ಅವನನ್ನು ತಡೆ
ವುದು ಬಿಟ್ಟು, ಅವನ ಜತೆಗೇ ಕಾಡಿಗೆ ಹೋಗುವುದೆಂದರೇನು !
 

 
ಇಷ್ಟೆಲ್ಲ ಗಲಭೆ ನಡೆಯುತ್ತಿದ್ದಾಗ ಅಂತಃಪುರದ ಬಾಗಿಲಲ್ಲಿ ಮಂಥರೆ
ಬಂದು ಸಡಗರದಿಂದ ನಿಂತಿ- ದ್ದಳು. ಅವಳು ತನ್ನನ್ನು ರಾಣಿಯಂತೆ ಸಿಂಗರಿಸಿ

ಕೊಂಡಿದ್ದಳು. ಭರತನು ಬರುವ ಸಂತಸವಲ್ಲವೆ ಈ ಗೂನಿಗೆ !
 

 
ಎಲ್ಲ ಅನರ್ಥಗಳಿಗೂ ಈ ಮಂರೆಯೇ ಮೂಲ ಎಂದು ತಿಳಿದಾಗ
ಶತ್ರುಘ್ನನಿಗೆ ಸಿಟ್ಟು ತಡೆಯಲಾಗ- ಲಿಲ್ಲ. ಅವಳ ತುರುಬನ್ನು ಹಿಡಿದು ದರದರನೆ

ಎಳೆದು ತಂದನು. ಅದನ್ನು ಕಂಡ ಪರಿವಾರದ ಜನ ಇದನ್ನು ನಿವೇದಿಸಲು
ಕೌಸಲ್ಯೆಯೆಡೆಗೆ ಓಡಿತು. ಮಂಥರೆ 'ನನ್ನನ್ನು ಕೊಲ್ಲಬೇಡಿ' ಎಂದು ಕೂಗು

ತಿದ್ದಂತೆ ಶತ್ರುಘ್ನ ಬಲವಾಗಿ ಎಳೆದನು. ತೆರೆದ ಬಾಯೊಳಗೆ ನೆಲದ ಮಣ್ಣು
ತುಂಬಿಕೊಂಡಿತು.
 

 
ಶತ್ರುಘ್ನನು ಗರ್ಜಿಸಿದನು :
 

"
ನಮ್ಮಣ್ಣನನ್ನು ಕಾಡಿಗಟ್ಟಿ ತಂದೆಯನ್ನು ಕೊಂದು, ಮೆರೆಯ
ಬೇಕೆಂದಿರುವೆಯಾ ತೊತ್ತಿನ ಹೆಣ್ಣೆ ? ನೀನಿನ್ನು ಬದುಕಿರುವುದು ಸಾಧ್ಯವಿಲ್ಲ.

ಇಂದೇ ನಿನ್ನ ಒಡತಿ ಕೈಕೇಯಿಯ ಮನೆ ಬಾಗಿಲಲ್ಲಿ ನಿನ್ನ ಹೆಣವನ್ನು ತೂಗಿಸಿ
ಬಿಡುತ್ತೇನೆ.
 
29
 
66
 
"
 
ಮಧ್ಯದಲ್ಲಿ ಭರತ ತಡೆದು ನುಡಿದನು :
 
C
 
*

"
ಶತ್ರುಘ್ನ, ಬಿಟ್ಟುಬಿಡು ಅವಳನ್ನು,. ಕೈಕೇಯಿ- ಯನ್ನೂ ಮಂಥರೆ,
ಯನ್ನೂ ಸಿಗಿದು ಬಿಡುವಷ್ಟು ಸಿಟ್ಟು ನನಗೂ ಬಂದಿದೆ. ಆದರೆ ರಾಮಚಂದ್ರ

ಇದನ್ನು ಸಹಿಸಲಾರ. ಅವನು ಸ್ತ್ರೀ ಘಾತುಕರೆಂದು ನಮ್ಮನ್ನು ತೊರೆದಾನು,
ರಾಮಚಂದ್ರನ ಪಾದಧೂಲಿಯ ಲೋಭದಿಂದಲಾದರೂ ಇವಳನ್ನು ಬದುಕಗೊಡು,
 
5
 
.