This page has not been fully proofread.

ಸಂಗ್ರಹರಾಮಾಯಣ
 
ಇಂದೇ ಈ ಶರೀರವನ್ನು ತೊರೆದುಬಿಡುತ್ತೇನೆ. ಗಂಡನನ್ನು ಕೊಂದವಳಿಗೆ
ಮಗನ ಸಾವಿನಿಂದೇನಾದೀತು? ನೀನು ಅಶ್ವಪತಿಯ ಮಗಳಲ್ಲ; ಯಾವನೋ
ರಾಕ್ಷಸನ ಮಗಳು ! ಮನುಷ್ಯರಾದವರು ಇಂಥ ಕೆಲಸವನ್ನು ಮಾಡುವ
 
ದುಂಟೆ ! "
 
೭೩
 
ಶತ್ರುಘ್ನನಿಗೆ ಇದನ್ನೆಲ್ಲ ಕೇಳಿ ಎಲ್ಲಿಲ್ಲದ ಅಚ್ಚರಿ ! ಹೆಣ್ಣು ಹೆಂಗಸಿನ
ಮಾತಿಗೆ ರಾಮಚಂದ್ರ ರಾಜ್ಯ ತೊರೆವುದೆಂದರೇನು ? ಕಾಡಿಗೆ ತೆರಳುವುದೆಂದ
ರೇನು ? ಒಂದು ವೇಳೆ ರಾಮಚಂದ್ರ ಹೊರಟರೂ ಲಕ್ಷಣ ಅವನನ್ನು ತಡೆ
ವುದು ಬಿಟ್ಟು, ಅವನ ಜತೆಗೇ ಕಾಡಿಗೆ ಹೋಗುವುದೆಂದರೇನು !
 
ಇಷ್ಟೆಲ್ಲ ಗಲಭೆ ನಡೆಯುತ್ತಿದ್ದಾಗ ಅಂತಃಪುರದ ಗಿಲಲ್ಲಿ ಮಂಥರೆ
ಬಂದು ಸಡಗರದಿಂದ ನಿಂತಿದ್ದಳು. ಅವಳು ತನ್ನನ್ನು ರಾಣಿಯಂತೆ ಸಿಂಗರಿಸಿ
ಕೊಂಡಿದ್ದಳು. ಭರತನು ಬರುವ ಸಂತಸವಲ್ಲವೆ ಈ ಗೂನಿಗೆ !
 
ಎಲ್ಲ ಅನರ್ಥಗಳಿಗೂ ಈ ಮಂಘರೆಯೇ ಮೂಲ ಎಂದು ತಿಳಿದಾಗ
ಶತ್ರುಘ್ನನಿಗೆ ಸಿಟ್ಟು ತಡೆಯಲಾಗಲಿಲ್ಲ. ಅವಳ ತುರುಬನ್ನು ಹಿಡಿದು ದರದರನೆ
ಎಳೆದು ತಂದನು. ಅದನ್ನು ಕಂಡ ಪರಿವಾರದ ಜನ ಇದನ್ನು ನಿವೇದಿಸಲು
ಕೌಸಲ್ಯಯೆಡೆಗೆ ಓಡಿತು. ಮಂಥರೆ ನನ್ನನ್ನು ಕೊಲ್ಲಬೇಡಿ' ಎಂದು ಕೂಗು
ತಿದ್ದಂತೆ ಶತ್ರುಘ್ನ ಬಲವಾಗಿ ಎಳೆದನು. ತೆರೆದ ಬಾಯೊಳಗೆ ನೆಲದ ಮಣ್ಣು
ತುಂಬಿಕೊಂಡಿತು.
 
ಶತ್ರುಘ್ನನು ಗರ್ಜಿಸಿದನು :
 
ನಮ್ಮಣ್ಣನನ್ನು ಕಾಡಿಗಟ್ಟಿ ತಂದೆಯನ್ನು ಕೊಂದು, ಮೆರೆಯ
ಬೇಕೆಂದಿರುವೆಯಾ ತೊತ್ತಿನ ಹೆಣ್ಣೆ ? ನೀನಿನ್ನು ಬದುಕಿರುವುದು ಸಾಧ್ಯವಿಲ್ಲ.
ಇಂದೇ ನಿನ್ನ ಒಡತಿ ಕೈಕೇಯಿಯ ಮನೆ ಬಾಗಿಲಲ್ಲಿ ನಿನ್ನ ಹೆಣವನ್ನು ತೂಗಿಸಿ
ಬಿಡುತ್ತೇನೆ.
 
29
 
66
 
ಮಧ್ಯದಲ್ಲಿ ಭರತ ತಡೆದು ನುಡಿದನು :
 
C
 
* ಶತ್ರುಘ್ನ, ಬಿಟ್ಟುಬಿಡು ಅವಳನ್ನು, ಕೈಕೇಯಿಯನ್ನೂ ಮಂಥರೆ,
ಯನ್ನೂ ಸಿಗಿದು ಬಿಡುವಷ್ಟು ಸಿಟ್ಟು ನನಗೂ ಬಂದಿದೆ. ಆದರೆ ರಾಮಚಂದ್ರ
ಇದನ್ನು ಸಹಿಸಲಾರ. ಅವನು ಸ್ತ್ರೀ ಘಾತುಕರೆಂದು ನಮ್ಮನ್ನು ತೊರೆದಾನು,
ರಾಮಚಂದ್ರನ ಪಾದಧೂಲಿಯ ಲೋಭದಿಂದಲಾದರೂ ಇವಳನ್ನು ಬದುಕಗೊಡು,
 
5